ಎಸ್. ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'SSMB29' ಚಿತ್ರದ ಹಾಡೊಂದಕ್ಕೆ ನಟಿ ಶ್ರುತಿ ಹಾಸನ್ ಧ್ವನಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಶ್ರುತಿ ಹಾಸನ್, ‘ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಅವರ ಪಕ್ಕದಲ್ಲಿ ಕುಳಿತು ಅವರು ನುಡಿಸುವ ಕೀಲಿ ಮಣೆಯನ್ನೇ ನೋಡುತ್ತಿದ್ದೆ. ವಿಘ್ನೇಶ್ವರ ಮಂತ್ರ ನುಡಿಸಿದ ಬಳಿಕ ತಮ್ಮ ಮುಂದಿನ ಕೆಲಸ ಆರಂಭಿಸುತ್ತಾರೆ. ಇವರ ತಂಡದಲ್ಲಿ ನಾನು ಹಾಡಿರುವುದಕ್ಕೆ ತುಂಬಾ ಹೆಮ್ಮೆ ಇದೆ’ ಎಂದು ಬರೆದುಕೊಂಡಿದ್ದಾರೆ.
.ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸೋಜುಗಾದ ಸೂಜಿ ಮಲ್ಲಿಗೆ’ ಗಾಯಕಿ ಅನನ್ಯಾ ಭಟ್ .
'SSMB29' ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಹಾಡಿರುವ ‘ಸಂಚಾರ' ಎಂಬ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ.

ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪೃಥ್ವಿರಾಜ್ ಸುಕುಮಾರನ್ ಅವರು ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್ ನವೆಂಬರ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಈ ಚಿತ್ರಕ್ಕೆ ಹೆಸರು ಅಂತಿಮವಾಗದ ಕಾರಣ, ತಾತ್ಕಾಲಿಕವಾಗಿ ‘SSMB29‘ ಎಂದು ಶೀರ್ಷಿಕೆ ನೀಡಲಾಗಿದೆ. ಈ ನಡುವೆ ಎಸ್. ಎಸ್. ರಾಜಮೌಳಿಯವರು ಸಿನಿಮಾ ಕುರಿತ ಹೊಸ ಅಪ್ಡೇಟ್ನಲ್ಲಿ ‘ಗ್ಲೋಬ್ ಟ್ರಾಟರ್‘ (GlobeTrattor) ಎಂಬ ಹ್ಯಾಷ್ಟ್ಯಾಗ್ ನೀಡಿದ್ದಾರೆ. ಹಾಗಾಗಿ ಈ ಸಿನಿಮಾದ ಹೆಸರು ಇದೇ ಅಂತಿಮವಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.