ಬುಧವಾರ, ಸೆಪ್ಟೆಂಬರ್ 22, 2021
21 °C

ಮದುವೆ ಪ್ಲಾನ್ ಬಹಿರಂಗಪಡಿಸಿದ ಮಂಜು ಪಾವಗಡ: ಊಹಾಪೋಹಗಳಿಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಸದ್ಯದಲ್ಲೇ ಮದುವೆ ಆಗುವುದಾಗಿ ಪ್ರಜಾವಾಣಿ ಲೈವ್ ಸಂವಾದದಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಆಪ್ತರಾಗಿದ್ದ ದಿವ್ಯಾ ಸುರೇಶ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯ ಆಟಗಾರ್ತಿ, ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಎಂದು ಉತ್ತರಿಸಿದರು

ಫೇಸ್‌ಬುಕ್‌ನಲ್ಲಿ ವೀಕ್ಷಕರೊಬ್ಬರು, ನೀವು ಮೊದಲು ಮದುವೆಯಾಗುತ್ತೀರಾ? ಅಥವಾ ದಿವ್ಯಾ ಸುರೇಶ್ ಅವರು ಆಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜು, ನಾನು ಮೊದಲು ಮದುವೆ ಆಗುತ್ತೇನೆ. ಬೇರೆ ಹುಡುಗಿಯನ್ನು ಮದುವೆ  ಆಗುತ್ತೇನೆ ಎಂದು ಹೇಳುವ ಮೂಲಕ ಸೋಶಿಯಲ್ ಮೀಡಿಯಾದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸದ್ಯ, ಬ್ಯುಸಿಯಾಗಿದ್ದೇನೆ. ಸ್ವಲ್ಪ ಆರಾಮಾದ ಬಳಿಕ ಮನೆಯವರು ನೋಡಿದ ಹುಡುಗಿಯನ್ನೇ ವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ.. ಫಿನಾಲೆಯಲ್ಲಿ ಮಂಜು ತೊಟ್ಟಿದ್ದ ಉಡುಪು ಖ್ಯಾತ ನಟಿಯ ಗಿಫ್ಟ್.. ಯಾರು ಆ ನಟಿ?

ಬಿಗ್ ಬಾಸ್ ಮನೆಯಲ್ಲಿಯೂ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಅವರು, ನಾವಿಬ್ಬರೂ ಒಳ್ಳೆಯ ಸ್ನೇಹಿತರಷ್ಟೇ ಎಂದು ಪದೇ ಪದೇ ಪುನರುಚ್ಛರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕೊನೆಯ ವಾರ ಬಿಗ್ ಬಾಸ್ ಕೊಟ್ಟಿದ್ದ ಅವಕಾಶ ಬಳಸಿಕೊಂಡ ದಿವ್ಯಾ, ಕೇಕ್ ತರಿಸಿ ಮಂಜು ಜೊತೆಗೆ ತಮ್ಮ ಫ್ರೆಂಡ್‌ಶಿಪ್ ಸೆಲಬ್ರೇಟ್ ಮಾಡಿದ್ದರು.

ಮಂಜು ಪೋಷಕರ ಜೊತೆ ಚರ್ಚಿಸಿದ್ದ ಡಿಎಸ್: ಫಿನಾಲೆ ಕಾರ್ಯಕ್ರಮಕ್ಕೂ ಮುನ್ನ ಮಂಜು ಪೋಷಕರ ಬಳಿ ಮಂಜುಗೆ ಯಾವಾಗ ಮದುವೆ ಮಾಡುತ್ತೀರಿ ಎಂದು ದಿವ್ಯ ಸುರೇಶ್ ಕೇಳಿದ್ದರಂತೆ. ಅವನು ಯಾವಾಗ ಓಕೆ ಅಂದರೆ ಅವಾಗ ಮಾಡುತ್ತೇವೆ ಎಂದು ಅವರು ಹೇಳಿದ್ದಾಗಿ ದಿವ್ಯಾ ಸುರೇಶ್, ಸುದೀಪ್ ಬಳಿ ಹೇಳಿಕೊಂಡಿದ್ದರು.

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು