ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 10: ಸಂಗೀತಾ ವಿರುದ್ಧ ವರ್ತೂರು ಸಂತೋಷ್‌ ತಿರುಗಿಬಿದ್ದಿದ್ದೇಕೆ?

Published 17 ಜನವರಿ 2024, 10:55 IST
Last Updated 17 ಜನವರಿ 2024, 10:55 IST
ಅಕ್ಷರ ಗಾತ್ರ

ಬೆಂಗಳೂರು: ಎಲಿಮಿನೇಟ್‌ ಆಗಿ ಹೊರಹೋಗಿದ್ದ ಸ್ಪರ್ಧಿಗಳು ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ, ಮನೆಯೊಳಗೆ ಹೇಗಿದ್ದರೆ ಗೆಲ್ಲಬಹುದು ಎಂದು ಮನೆಯೊಳಗಿನ ಸದಸ್ಯರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.

ಈ ನಡುವೆ ಬಿಗ್‌ ಬಾಸ್‌ ಒಂದು ಲಕ್ಷದ ಟಾಸ್ಕ್‌ ನೀಡಿದ್ದಾರೆ. ಟಾಸ್ಕ್‌ ಆಡಲು ಕೆಲವರು ವಿನಯ್ ಹೆಸರನ್ನೂ, ಕೆಲವರು ವರ್ತೂರು ಸಂತೋಷ್ ಅವರ ಹೆಸರನ್ನೂ ಸೂಚಿಸಿದ್ದಾರೆ. ಕೊನೆಗೆ ವರ್ತೂರ್ ಅವರೇ ಟಾಸ್ಕ್‌ ಆಡಲು ಆಯ್ಕೆಯಾಗಿದ್ದಾರೆ. ಚೆಂಡನ್ನು ಒಂದು ದೊಡ್ಡ ತಿರುಗುಣಿಯ ಮೇಲೆ ಜೋಡಿಸಿಡಲಾಗಿದೆ. ಚೆಂಡು ಬೀಳಿಸಿದೇ ತಿರುಗುಣಿ ತಿರುಗಿಸುವ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ವಿಫಲರಾಗಿದ್ದಾರೆ. ಇದನ್ನು ಕಂಡು ಸಂಗೀತಾ ಅಸಹನೆ ವ್ಯಕ್ತಪಡಿಸಿದ್ದಾರೆ.

‘ಯಾರಿಗೆ ಆಟ ಆಡಲು ಬರುತ್ತದೆಯೋ ಅವರೇ ಹೋಗಿ ಎಂದು ಇದಕ್ಕೇ ನಾನು ಹೇಳಿದ್ದು’ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಿಟ್ಟಿಗೆದ್ದ ವರ್ತೂರು, ‘ಅಗೌರವದಿಂದ ಮಾತಾಡಬೇಡಿ. ನೀವು ಒಬ್ಬರನ್ನು ದೂಷಿಸುವುದಕ್ಕಿಂತ ಮೊದಲು ನೀವೇನು ಎನ್ನುವುದನ್ನು ನೋಡಿಕೊಂಡರೆ ತುಂಬ ಉತ್ತಮವಾಗಿರುತ್ತದೆ’ ಎಂದು ಕಿಡಿ ಕಾರಿದ್ದಾರೆ.

ಬಿಗ್‌ಬಾಸ್‌ ಕಾರ್ಯಕ್ರಮದ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಠಿಣ ಟಾಸ್ಕ್‌ಗಳು ಸ್ಪರ್ಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT