ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಪಟ್ಟ: ಸಂಗೀತಾ ದೀದಿಯ ಪ್ರೀತಿಯ ಮುತ್ತಿನೊಂದಿಗೆ ಜೈಲು ಸೇರಿದ ಪ್ರತಾಪ್‌

Published 19 ಜನವರಿ 2024, 13:02 IST
Last Updated 19 ಜನವರಿ 2024, 13:02 IST
ಅಕ್ಷರ ಗಾತ್ರ

ಬೆಂಗಳೂರು: ಫಿನಾಲೆ ವಾರಕ್ಕೂ ಮೊದಲು ಬಿಗ್‌ ಬಾಸ್‌ ಮನೆಯಲ್ಲಿ ವಾರದ ಕಳಪೆ, ಉತ್ತಮ ಪಟ್ಟದ ಹಂಚಿಕೆಯಾಗಿದೆ. 15ನೇ ವಾರದ ಹಾಗೂ ಈ ಸೀಸನ್‌ನ ಕೊನೆಯ ಕಳಪೆ ಪಟ್ಟವನ್ನು ಪ್ರತಾಪ್‌ ಪಡೆದಿದ್ದಾರೆ. 

ಎಲ್ಲಾ ಟಾಸ್ಕ್‌ಗಳಲ್ಲಿ ಶೂನ್ಯ ಪ್ರದರ್ಶನ ನೀಡಿದ್ದಾರೆ ಎಂದು ಕಾರ್ತಿಕ್‌ ಅವರು ಪ್ರತಾಪ್‌ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಜತೆಗ ವಿನಯ್‌, ತುಕಾಲಿ ಸಂತೋಷ್‌, ನಮ್ರತಾ ಕೂಡ ಕಳಪೆ ಆಟಗಾರ ಎಂದು ಪ್ರತಾಪ್‌ ಅವರನ್ನು ನಾಮಿನೇಟ್‌ ಮಾಡಿದ್ದಾರೆ. 

ಈ ನಡುವೆ ಸಂಗೀತಾ ಮಾತ್ರ ‘ಇಲ್ಲಿ ಯಾರೂ ಕಳಪೆ ಇಲ್ಲ’ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಕಳಪೆ ಪಟ್ಟ ಹೊತ್ತ ಸದಸ್ಯರಿಗೆ ನೀಡುವ ಬಟ್ಟೆಯನ್ನು ಸಂಗೀತಾ ಅವರಿಂದಲೇ ಪಡೆದ ಪ್ರತಾಪ್‌, ಸಂಗೀತಾ ದೀದಿ ಇಷ್ಟು ವಾರ ನನ್ನ ಪರವಾಗಿ ನಿಂತಿದ್ದರು ಅದಕ್ಕೆ ಸಂತಸವಿದೆ ಎಂದು ಹೇಳಿದ್ದಾರೆ. ಇತ್ತ, ನನ್ನ ಪಕ್ಕ ಯಾರು ನಿಲ್ಲುತ್ತಾರೊ ಅವರು ಜೈಲಿಗೆ ಹೋಗುತ್ತಾರೆ ಎಂದು ಸಂಗೀತಾ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಾಪ್‌ ಕೆನ್ನೆಗೆ ಮುತ್ತಿಟ್ಟ ಸಂಗೀತಾ ಜೈಲಿನ ಗೇಟ್‌ ತೆಗೆದು ಅವರನ್ನು ಒಳಕ್ಕೆ ಕಳುಹಿಸಿದ್ದಾರೆ. 

ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ತನಿಷಾ ಕುಪ್ಪಂಡ ಹೊರಹೋಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT