ಮುಂಬೈ: ಹಿಂದಿಯ ಬಿಗ್ ಬಾಸ್ 16ರ ವೀಕೆಂಡ್ ಕಾ ವಾರ್ನ ಶನಿವಾರದ ಸಂಚಿಕೆಯಲ್ಲಿ ನಿರೂಪಕ ಸಲ್ಮಾನ್ ಖಾನ್, ಸ್ಪರ್ಧಿ ಸುಂಬುಲ್ ತೌಕೀರ್ ಖಾನ್ ಆಂಗಿಕ ವರ್ತನೆಯನ್ನು ಮೂದಲಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಯಕ್ರಮದ ಪ್ರೊಮೊದಲ್ಲಿ ಸಲ್ಮಾನ್ ಖಾನ್, ಆಕೆಗೆ ರಿಯಾಲಿಟಿ ಚೆಕ್ ಮಾಡುವುದನ್ನು ನೋಡಬಹುದು. ಅಲ್ಲದೆ, ಯಾವಾಗಲೂ ಸಪ್ಪೆ ಮುಖ ಹಾಕಿಕೊಂಡು ಅಳುವುದನ್ನು ಅವರು ಪ್ರಶ್ನಿಸುತ್ತಾರೆ.

ವೇದಿಕೆಯ ಮೇಲೆ ಕಲಾವಿದರನ್ನು ಕರೆದ ಅವರು, ಬಿಗ್ ಬಾಸ್ ಮನೆಯೊಳಗೆ ಸುಂಬುಲ್ ಇರುವ ರೀತಿಯನ್ನು ತೋರಿಸುವಂತೆ ಕೇಳುತ್ತಾರೆ. ನಂತರ ಎಲ್ಲರೂ ಲಿವಿಂಗ್ ರೂಮಿನಲ್ಲಿ ಉಳಿದುಕೊಂಡಿರುವಾಗ ಅವರು ಸುಂಬುಲ್ನನ್ನು ಮಲಗುವ ಕೋಣೆಗೆ ಹೋಗಲು ಸೂಚಿಸುತ್ತಾರೆ. ಸುಂಬುಲ್ ಹೊರಡುತ್ತಿದ್ದಂತೆ, ಸಲ್ಮಾನ್ ಮೂದಲಿಕೆಯ ಮಾತುಗಳನ್ನಾಡುತ್ತಾರೆ.

ಈ ಪ್ರೊಮೊ ನೋಡಿದ ಸುಂಬುಲ್ ತೌಕೀರ್ ಅವರ ಅಭಿಮಾನಿಗಳು ನಿರಾಶೆ ಮತ್ತು ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಂಬುಲ್ ಅವರ ವ್ಯಕ್ತಿತ್ವವನ್ನು ಅಪಹಾಸ್ಯ ಮಾಡಿದ ಸಲ್ಮಾನ್ ಖಾನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಅವರು ಹೇಗಿದ್ದಾರೊ ಅದು ಅವರ ಬಾಡಿ ಲಾಂಗ್ವೇಜ್. ಅವರಿಗೆ ಕೇವಲ 19 ವರ್ಷ. ಹಾಗಾಗಿ, ಅವರಲ್ಲಿರುವ ಬಾಲಿಶ ಸ್ವಭಾವವನ್ನು ಬಿಡಲು ಸಾಧ್ಯವಾಗುತ್ತಿಲ್ಲ. ನಾನು ಸುಂಬುಲ್ ಅಭಿಮಾನಿಯಲ್ಲ. ಆದರೆ, ರಾಷ್ಟ್ರಮಟ್ಟದ ಟಿ.ವಿ ಕಾರ್ಯಕ್ರಮದಲ್ಲಿ ಅವರನ್ನು ಈ ರೀತಿ ಅಪಹಾಸ್ಯ ಮಾಡುವುದು ತುಂಬಾ ಲಘುವಾದ ನಡವಳಿಕೆ’ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

ಇದು ಕರುಣಾಜನಕ ಮತ್ತು ಅಸಹ್ಯಕರ ಎಂದು ಮತ್ತೊಬ್ಬರು ಕರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.