ಶುಕ್ರವಾರ, ಮೇ 14, 2021
31 °C

Bigg Boss 8: ಹಿಂದೆಂದೂ ನಡೆಯದ ಅಚ್ಚರಿಗೆ ಕಾರಣವಾದ ಎಲಿಮಿನೇಶನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲರ್ಸ್ ಕನ್ನಡ ಸ್ಕ್ರೀನ್ ಶಾಟ್

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 6ನೇ ವಾರದ ಎಲಿಮಿನೇಶನ್‌ ಕಾರ್ಯಕ್ರಮದಲ್ಲಿ ಹಿಂದೆಂದೂ ನಡೆಯದಂತಹ ಘಟನೆ ನಡೆದಿದೆ.

ಹೌದು, ನಾಮಿನೇಟ್ ಆಗಿದ್ದವರನ್ನು ಬಿಟ್ಟು ಸ್ವ ಇಚ್ಛೆಯಿಂದ ನಾಮಿನೇಟ್ ಆಗದ ವೈಜಯಂತಿ ಅಡಿಗ ಮೊದಲನೇ ವಾರವೇ ಮನೆಯಿಂದ ಹೊರಬಂದಿದ್ದಾರೆ.

ಆಗಿದ್ದಿಷ್ಟು..

ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ವೈಜಯಂತಿ ಎರಡನೇ ದಿನದಿಂದಲೇ ಮನೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದರು. ಇಲ್ಲಿ‌ ಮುಂದುವರಿಯಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಕಣ್ಣೀರು ಸಹ ಹಾಕಿದ್ದರು. ಪದೇ ಪದೇ ನಾನು ಹೋಗಬೇಕೆಂದುಕೊಂಡಿದ್ದ ವೈಜಯಂತಿಗೆ ಸುದೀಪ್ ಒಂದು ಅವಕಾಶ ಕೊಟ್ಟರು. ನಿಮಗೆ ನಿಜವಾಗಿಯೂ ಹೋಗಬೇಕೆನಿಸಿದರೆ ಹೋಗಬಹುದು. ಬಾಗಿಲು ತೆಗೆಸುವೆ ಎಂದರು. ನೀವು ಹೋಗುವುದಾದರೆ, ಎಲಿಮಿನೇಟ್ ಆಗಿದ್ದ ಶಮಂತ್ ಮನೆಯಲ್ಲಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ಮನೆಯಿಂದ ತೆರಳುವ ನಿರ್ಧಾರಕ್ಕೆ ಬಂದ ವೈಜಯಂತಿ: ಸುದೀಪ್ ಅವಕಾಶ ಕೊಟ್ಟ ಬಳಿಕ ಎರಡು ನಿಮಿಷ ಯೋಚಿಸಿ ಹೊರಗೆ ಹೋಗುತ್ತೇನೆ ಎಂದು ಘೋಷಿಸಿಯೇಬಿಟ್ಟರು. ನನ್ನ ವ್ಯಕ್ತಿತ್ವಕ್ಕೆ ಇದು ಸರಿಯಾದ ವೇದಿಕೆ ಅಲ್ಲ. ಹಾಗಾಗಿ, ಹೋಗುತ್ತೇನೆ. ಯಾರೂ ತಪ್ಪಾಗಿ ಭಾವಿಸಬೇಡಿ ಎಂದರು.

ಸುದೀಪ್‌ಗೆ ಅಚ್ಚರಿ: ಹಿಂದೊಮ್ಮೆ ರಘು ಅವರಿಗೆ ಇದೇ ರೀತಿಯ ಅವಕಾಶ ಕೊಟ್ಟಾಗ ರಘು‌ ಮುಂದುವರಿದು, ಛಲದಿಂದ ಆಡುವ ಮಾತಾಡಿದ್ದರು. ಆದರೆ, ವೈಜಯಂತಿ ವಿಷಯದಲ್ಲಿ ಅದು ಸುಳ್ಳಾಗಿದೆ. ನಿಮ್ಮ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ. ಆದರೆ, ನೀವು ಇಷ್ಟು ಬೇಗ ಹೋಗುತ್ತಿರುವುದರಿಂದ ನಮ್ಮ ತಂಡದ ಶ್ರಮ ವ್ಯರ್ಥವಾದಂತಾಗಿದೆ. ಬೇರೆಯವರ ಅವಕಾಶ ಕಿತ್ತುಕೊಂಡಂತಾಗಿದೆ. ಒಂದು ವಾರ ಕ್ವಾರಂಟೈನ್ ಖರ್ಚು ವೆಚ್ಚವೂ ವ್ಯರ್ಥ ಎಂದು ಹೇಳಿದರು.

ಲಕ್ಕಿ ಬಾಯ್ ಶಮಂತ್: ಶಮಂತ್‌ಗೆ ಯಾರಿಗೂ ಒಲಿಯದ ಅದೃಷ್ಟ ಒಲಿದಿದೆ. ಹಿಂದೆಂದೂ ನಡೆಯದ ರೀತಿಯಲ್ಲಿ ಶಮಂತ್ ಸೇಫ್ ಆಗಿದ್ದಾರೆ. ಎಲಿಮಿನೇಟ್ ಆಗಿದ್ದ ಕಾರಣಕ್ಕೆ‌ ಮುಂದಿನ ವಾರಕ್ಕೆ ನೇರ ನಾಮಿನೇಟ್ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು