ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK10 | ವೈಲ್ಡ್‌ ಕಾರ್ಡ್‌ ಎಂಟ್ರಿ: ಟಾಸ್ಕ್‌ನಲ್ಲಿ ತುಕಾಲಿ, ಸ್ನೇಹಿತ್‌ ಗುದ್ದಾಟ

Published 28 ನವೆಂಬರ್ 2023, 5:39 IST
Last Updated 28 ನವೆಂಬರ್ 2023, 5:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ 7ನೇ ವಾರ ಆರಂಭವಾಗಿದೆ. ಇಬ್ಬರು ವೈಲ್ಡ್‌ ಕಾರ್ಡ್‌ ಪ್ರವೇಶದ ಮೂಲಕ ಮನೆ ಸೇರಿದ್ದಾರೆ. 

ಸರಿಸುಮಾರು 10 ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪವಿ ಪೂವಪ್ಪ ಹಾಗೂ ನಟ, ಮಾಡೆಲ್ ಕ್ರಿಕೆಟರ್ ಅವಿನಾಶ್ ಶೆಟ್ಟಿ ಬಿಗ್‌ ಬಾಸ್‌ ಸೇರಿದ್ದಾರೆ.

ಟಾಸ್ಕ್‌ ನಡುವೆ ಕಿತ್ತಾಟ

ಸ್ವಿಮಿಂಗ್ ಫೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಅವರ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು ಎನ್ನುವ ಇದು ಟಾಸ್ಕ್‌ ನೀಡಲಾಗಿತ್ತು. ಆದರೆ ಈ ನೀರಿನಾಟದಲ್ಲೇ ಕಿಡಿಹೊತ್ತಿಕೊಂಡಿದೆ.

ನೀರಿನ ಆಟ ಆಡುತ್ತಾಡುತ್ತ ಹೋರಾಟವನ್ನೇ ಶುರುಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ ಅವರನ್ನು ಸ್ನೇಹಿತ್‌ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ.

ಕೊನೆಗೆ ತುಕಾಲಿ ಅವರು, ‘ಬೇಕಂತ್ಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್‌, ‘ಸತ್ಯವಾಗ್ಲೂ ಬೇಕಂತ ಮಾಡಿಲ್ಲ’ ಎಂದರೂ ಅವರು ಕೇಳಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ.

ನಾಮಿನೇಟ್‌ ಆದ ಸದಸ್ಯರು

ಜಿಯೊ ಸಿನಿಮಾದಲ್ಲಿ 24ಗಂಟೆ ನೇರಪ್ರಸಾರವಾಗುವ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಈ ವಾರ ಮೈಕಲ್‌,ಸ್ನೇಹಿತ್‌, ಪ್ರತಾಪ್‌, ವಿನಯ್‌, ತನಿಷಾ, ನಮ್ರತಾ, ಸಂಗೀತಾ, ವರ್ತೂರು ಸಂತೋಷ್‌ ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT