ಗುರುವಾರ , ಜನವರಿ 23, 2020
28 °C

ಗ್ರಾಂಡ್‌ ಫಿನಾಲೆಯಲ್ಲಿ ಡಿಕೆಡಿ 2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿರುತೆರೆ ವೀಕ್ಷಕರ ಮನಗೆದ್ದಿರುವ ಜೀ ಕನ್ನಡ ವಾಹಿನಿಯ ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋ ಎರಡನೇ ಆವೃತ್ತಿಯ ಗ್ರಾಂಡ್‌ ಫಿನಾಲೆ ಜ.4ರಂದು ಪ್ರಸಾರವಾಗಲಿದೆ.

ಈ ರಿಯಾಲಿಟಿ ಶೋ ಈಗಾಗಲೇ 22 ವಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 13 ಕಲಾವಿದ ಜೋಡಿಯೊಂದಿಗೆ ಈ ಶೋ ಆರಂಭವಾಗಿತ್ತು. ಇಪ್ಪತ್ತು ನೃತ್ಯ ಸುತ್ತುಗಳ ಬಳಿಕ ಹತ್ತು ಜೋಡಿಗಳ ನಡುವೆ ನೃತ್ಯ ಪೈಪೋಟಿ ಏರ್ಪಟ್ಟಿತ್ತು. 

ಈ ಗ್ರಾಂಡ್ ಫಿನಾಲೆಯು ಕೋಟೆನಾಡು ಚಿತ್ರದುರ್ಗದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷರರ ನಡುವೆ ನಡೆದಿದ್ದು, ಈ ಕಾರ್ಯಕ್ರಮವು ಶನಿವಾರ ಸಂಜೆ 6.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ.

ಈ ಪೈಕಿ, ಐದು ಜೋಡಿಗಳು ಅಂದರೆ ಅನೂಪ್– ದಿಂಪಿನ, ಪ್ರೇಕ್ಷಿತ್ –ಅನ್ವಿಷ, ತೇಜಸ್–ಪ್ರಣತಿ, ವಿವೇಕ್ –ಹಿರಣ್ಮಯಿ ಮತ್ತು ಅದಿತಿ ಗ್ರಾಂಡ್ ಫಿನಾಲೆ ವೇದಿಕೆಯನ್ನು ಏರಿದ್ದಾರೆ. ಮೂವರು ತೀರ್ಪುಗಾರರು ವಿಜೇತ ತಂಡವನ್ನು ಆಯ್ಕೆ ಮಾಡಲಿದ್ದು, ಡಿಕೆಡಿ ವಿಜೇತ ತಂಡಕ್ಕೆ ನಿವೇಶನ ಮತ್ತು ನೃತ್ಯ ಸಂಯೋಜಕರಿಗೆ ₹10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಬಹುಮಾನ ಗೆದ್ದವರು ಯಾರೆನ್ನುವುದು ಫಿನಾಲೆಯಲ್ಲಿ ಗೊತ್ತಾಗಲಿದೆ.

ನಟ ವಿಜಯ್‌ ರಾಘವೇಂದ್ರ, ನಟಿ ರಕ್ಷಿತಾ ಪ್ರೇಮ್‌ ಹಾಗೂ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಈ ಶೋನ ತೀರ್ಪುಗಾರರಾಗಿದ್ದು, ನಿರೂಪಕಿ ಅನುಶ್ರೀ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)