ಬುಧವಾರ, ಜೂನ್ 3, 2020
27 °C

ಕೌನ್ ಬನೇಗಾ ಕರೋಡ್‌ಪತಿ: ಮೇ 9ರಿಂದ ನೋಂದಣಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Amitabh Bachchan

ಮುಂಬೈ: ಕೌನ್ ಬನೇಗಾ ಕರೋಡ್‌ಪತಿಯ 12ನೇ ಆವೃತ್ತಿಗೆ ನೋಂದಣಿ ಮೇ.9ರಂದು ಶುರುವಾಗಲಿದೆ. ಸೋನಿ ಟಿವಿಯ ಟ್ವೀಟ್‌ನ್ನು ರಿಟ್ವೀಟ್ ಮಾಡಿರುವ ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್, ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.

ಎಲ್ಲದಕ್ಕೂ ಒಂದು ವಿರಾಮ ಇರುತ್ತದೆ. ರಸ್ತೆಯ ಮೂಲೆಯಲ್ಲಿ ಕುಡಿಯುವ ಚಹಾಕ್ಕೂ, ಚಹಾದ ವೇಳೆ ಹೇಳುವ ಹಾಯ್, ಹಲೋಗಳಿಗೂ. ರಸ್ತೆಯಲ್ಲಿ ಸಾಗುವ ಗೆಳೆತನ ಮತ್ತು ಟ್ರಿಪಲ್ ಸೀಟ್ ಸವಾರಿಗೂ. ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಆಫೀಸಿನ ಕೆಲಸಕ್ಕೂ, ಮಧ್ಯ ರಾತ್ರಿ ಅಡ್ಡಾಡುವುದಕ್ಕೂ, ಶಾಪಿಂಗ್ ಮಾಲ್‌ನ ಪ್ರೀತಿ, ಅಡ್ಡರಸ್ತೆಯ ಗೆಳೆತನಕ್ಕೆ ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಬೆಳಗ್ಗಿನ ಶಾಲೆಗೆ, ರಸ್ತೆಯ ದೂಳು, ಯೌವನದ ಓಡಾಟ, ಕಾನ್ಫರೆನ್ಸ್ ರೂಮಿನ ತಮಾಷೆ, ಗಾಡಿಯ ಟಿಕ್ ಟಿಕ್ ಸದ್ದಿಗೆ, ಶತಾಬ್ದಿಯ ಜಿಕ್ ಜಿಕ್‌ಗೆ, ರೈಲಿನ ಹಾಹಾಕಾರಕ್ಕೆ, ಎದೆಬಡಿತದ ವೇಗಕ್ಕೆ, ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಆದರೆ ಒಂದು ವಿಷಯಕ್ಕೆ ಮಾತ್ರ ವಿರಾಮ ಹಾಕಬಾರದು- ಅದು ಕನಸು.ಕನಸುಗಳ ಹಾರಾಟಕ್ಕಾಗಿ ಬರುತ್ತಿದೆ ನನ್ನ ಪ್ರಶ್ನೆ ಮತ್ತು  ನಿಮ್ಮ ಕೆಬಿಸಿ ನೋಂದಣಿ. ಮೇ9ರಂದು ರಾತ್ರಿ 9ಗಂಟೆಗೆ ಸೋನಿ ಟಿವಿಯಲ್ಲಿ ಮಾತ್ರ ಎಂದು ಅಮಿತಾಬ್ ಬಚ್ಚನ್ ಹೇಳುತ್ತಿರುವ ಕಾರ್ಯಕ್ರಮದ ಪ್ರೊಮೋವನ್ನು ಸೋನಿ ಟಿವಿ ಟ್ವೀಟಿಸಿದೆ.

ಈ ಪ್ರೊಮೋ ಲಾಕ್‌ಡೌನ್ ಹೊತ್ತಲ್ಲಿ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿಯೇ ಚಿತ್ರೀಕರಿಸಲಾಗಿದೆ. ಸಿನಿಮಾ ನಿರ್ಮಾಪಕ ನಿತೀಶ್ ತಿವಾರಿ ಇದನ್ನು ನಿರ್ದೇಶಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು