ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

Published 26 ಏಪ್ರಿಲ್ 2024, 14:01 IST
Last Updated 26 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ಮುಂಬೈ: ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ‘ಕೌನ್‌ ಬನೇಗಾ ಕರೋಡ್‌ಪತಿ’ (ಕೆಬಿಸಿ)ಯಲ್ಲಿ ಭಾಗವಹಿಸಲು ನೋಂದಣಿ ಇಂದು (ಏ.26) ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ ಎಂದು ಸೋನಿ ಲೈವ್‌ ಚಾನೆಲ್‌ ಘೋಷಿಸಿದೆ.

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ನಿರೂಪಣೆಯಲ್ಲಿ 16ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಆರಂಭವಾಗಲಿದೆ ಎಂದು ಸೋನಿ ಎಂಟರ್‌ಟೈನ್‌ಮೆಂಟ್‌ ಪ್ರೊಮೊ ಬಿಡುಗಡೆ ಮಾಡಿದೆ.

ಪ್ರೊಮೊದಲ್ಲಿ ‘ನಾನು ನಾಳೆಯಿಂದ ಮರಳಿ ಬರುವುದಿಲ್ಲ ಎಂದು ಹೇಳುವುದು ಮನಸ್ಸಿಗೆ ಭಾರದ ಕೆಲಸ. ಆದರೆ, ಕೊನೆಯಬಾರಿ ನಾನು ಅದನ್ನು ಹೇಳಲು ಬರುತ್ತಿದ್ದೇನೆ. ಶುಭ ರಾತ್ರಿ’ ಎಂದು ಅಮಿತಾಬ್ ಹೇಳುವ ದೃಶ್ಯವೊಂದು ಪ್ರಸಾರ ಮಾಡುವ ಮೂಲಕ 16ನೇ ಆವೃತ್ತಿಗೆ ಸೋನಿ ಮುನ್ನುಡಿ ಬರೆದಿದೆ.

ನೋಂದಣಿ ಹೇಗೆ?

ಏಪ್ರಿಲ್ 26 ರಂದು ಸೋನಿ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ

ನೀವು ಭಾಗವಹಿಸಲು ಬಯಸಿದರೆ, ಪ್ರಶ್ನೆಗೆ ಉತ್ತರಿಸಬೇಕು ಮತ್ತು ನಿಮ್ಮ ವಿವರಗಳನ್ನು ಎಸ್‌ಎಂಎಸ್‌ ಅಥವಾ SonyLiv ಅಪ್ಲಿಕೇಶನ್ ಮೂಲಕ ಕಳುಹಿಸಬೇಕು.

ಅದೃಷ್ಟಶಾಲಿ ಸ್ಪರ್ಧಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಲಿದ್ದಾರೆ

ನಿಯಮಗಳೆಂದರೆ

ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ 18 ವರ್ಷ ಮೇಲಿನವರಾಗಿರಬೇಕು, ಭಾರತೀಯ ಪ್ರಜೆಯಾಗಿರಬೇಕು ಹಾಗೂ ಅಧಿಕೃತ ವಿಳಾಸದ ದಾಖಲೆಯನ್ನು ಹೊಂದಿರಬೇಕು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT