ಮುಂಬೈ: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ 17ನೇ ಆವೃತ್ತಿಯ ಚಿತ್ರೀಕರಣ ಆರಂಭವಾಗಿದ್ದು, ನಟ, ನಿರೂಪಕ ಅಮಿತಾಭ್ ಬಚ್ಚನ್ ಅವರೇ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಈ ಕುರಿತು ಅಮಿತಾಭ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಕೆಲಸಕ್ಕೆ ಬಂದಿದ್ದೇನೆ; ಹೊಸ ದಿನ, ಹೊಸ ಅವಕಾಶ, ಹೊಸ ಸವಾಲು’ ಎಂದು ಬರೆದುಕೊಂಡಿದ್ದಾರೆ.

ಹೊಸ ಆವೃತ್ತಿಯು ಹೊಸ ಸ್ಪರ್ಧಿಗಳಿಗೆ ಮಾತ್ರ ವಿಶೇಷವಲ್ಲ, ಕಾರ್ಯಕ್ರಮ ಆರಂಭವಾಗಿ 25 ವರ್ಷ ಕಳೆದಿದ್ದೂ ಕೂಡ ಸಂಭ್ರಮದ ವಿಷಯವಾಗಿದೆ ಎಂದು ನಿರ್ಮಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2000ರಲ್ಲಿ ಆರಂಭವಾದ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಅಮಿತಾಭ್ ಅವರೇ ನಿರೂಪಿಸಿದ್ದರು. 2003ರ ಆವೃತ್ತಿ ಹೊರತುಪಡಿಸಿ 16ನೇ ಆವೃತ್ತಿಯವರೆಗೂ ಅಮಿತಾಭ್ ಅವರೇ ನಿರೂಪಣೆ ಮಾಡಿದ್ದರು. 2003ರಲ್ಲಿ ನಟ ಶಾರುಕ್ ಖಾನ್ ಅವರು ಕಾರ್ಯಕ್ರಮ ನಿರೂಪಿಸಿದ್ದರು.

ಆ.11ರಂದು 17ನೇ ಆವೃತ್ತಿಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಪ್ರೀಮಿಯರ್ ಇರಲಿದೆ. ನಂತರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಸೋನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.