ಶುಕ್ರವಾರ, ಏಪ್ರಿಲ್ 10, 2020
19 °C

ನಾಗಿಣಿ -2ಗೆ ವೀಕ್ಷಕರು ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ, ಕಿರುತೆರೆ ಲೋಕದಲ್ಲಿ ದಾಖಲೆ ಸೃಷ್ಟಿಸಿದ ‘ನಾಗಿಣಿ’ ಧಾರಾವಾಹಿ, ಇದೀಗ ‘ನಾಗಿಣಿ-2’ ಆಗಿ ಮತ್ತೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಕುತೂಹಲ ಮೂಡಿಸುವಂತಹ ಚಿತ್ರಕಥೆ, ಹೆಸರಾಂತ ಕಲಾವಿದರ ತಾರಾಬಳಗ, ನೈಜ ಅನಿಸುವಂಥ ಗ್ರಾಫಿಕ್ಸ್ ಮತ್ತು ಅದ್ಧೂರಿ ಸೆಟ್ ಹಾಗೂ ಹೊಸತನ ಎನಿಸುವಂಥ ಮೇಕಿಂಗ್‍ನಿಂದಾಗಿ ‘ನಾಗಿಣಿ 2’ ವಿಶೇಷ ಅನಿಸಿದೆ.

ಕನ್ನಡ ಕಿರುತೆರೆ ಲೋಕದಲ್ಲಿ ನಾನಾ ಪ್ರಯೋಗಗಳನ್ನು ಮಾಡಿರುವ ಜೀ ಕನ್ನಡ ವಾಹಿನಿ ‘ನಾಗಿಣಿ-2’ ಬಿಡುಗಡೆಯನ್ನು ವಿಶೇಷ ರೀತಿಯಲ್ಲಿ ಆಯೋಜಿಸಿತ್ತು. ಕಿರುತೆರೆ ಲೋಕದಲ್ಲೇ ಪ್ರಥಮ ಎನ್ನುವಂತೆ ಈ ಧಾರಾವಾಹಿಯ ಪ್ರೀಮಿಯರ್ ಶೋ ಅನ್ನು ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಮೈಸೂರು, ಶಿವಮೊಗ್ಗ, ಗದಗ ಮತ್ತು ಹಾಸನದಲ್ಲಿ ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಆಯೋಜಿಸಿದ್ದ ‘ನಾಗಿಣಿ-2’ ಧಾರಾವಾಹಿಯ ವಿಶೇಷ ಪ್ರದರ್ಶನದಲ್ಲಿ ಜೀ ಕನ್ನಡ ವಾಹಿನಿಯ ಸ್ಪಂದನಾ ಮಹಿಳಾ ಕ್ಲಬ್ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಈ ಧಾರಾವಾಹಿಯ ಕೆಲವು ಎಪಿಸೋಡ್‌ಗಳನ್ನು ವೀಕ್ಷಿಸಿ ಖುಷಿ ಪಟ್ಟರು. ಗ್ರಾಫಿಕ್ಸ್, ದೃಶ್ಯ ವೈಭವ, ಕುತೂಹಲ ಮೂಡಿಸುವಂತಹ ಕಥೆ ಮತ್ತು ಕಲಾವಿದರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಧಾರಾವಾಹಿಯಲ್ಲಿ ಅನೇಕ ಕೌತುಕದ ವಿಷಯಗಳಿವೆ. ಪವಿತ್ರ ಹುಣ್ಣಿಮೆ ದಿನದಂದು ನಾಗಮಣಿಯನ್ನು ಹೊರಗಿಟ್ಟು ಮೈ ಮರೆಯುವ ಹಾವುಗಳು, ನಾಗಮಣಿಯನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಅದಕ್ಕಾಗಿ ವಿಶೇಷ ಸೆಟ್ ಕೂಡ ಹಾಕಲಾಗಿದೆ. ಜತೆಗೆ ಪ್ರತಿ ಸಂಚಿಕೆಯನ್ನೂ ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ನಾಗಿಣಿಯ ಹೊಸ ಅವತಾರ

ಫೆ.17ರಿಂದ ಶುರುವಾಗಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು