ಗುರುವಾರ , ಏಪ್ರಿಲ್ 9, 2020
19 °C

ಜೀ ಕನ್ನಡದಲ್ಲಿ ಸೆಲೆಬ್ರಿಟಿ ಗೇಮ್ ಶೋ`ಜೀನ್ಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ 30 ಜಿಲ್ಲೆಗಳ ಅವಿಭಕ್ತ ಕುಟುಂಬಗಳನ್ನು ಒಟ್ಟಾಗಿಸುವ ‘ಜೀನ್ಸ್’ ಹೊಸ ಸೆಲೆಬ್ರಿಟಿ ಗೇಮ್ ಶೋ ಇಂದಿನಿಂದ (ಜ.18) ಆರಂಭವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌.ಡಿ ವಾಹಿನಿಯಲ್ಲಿ ಈ ಶೋ ಪ್ರಸಾರವಾಗಲಿದೆ. ಸುಷ್ಮಾ ರಾವ್ ಈ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ.

ವಿನೂತನ ಬಗೆಯ ಈ ಗೇಮ್ ಶೋ ಜನಪ್ರಿಯ ಸೆಲೆಬ್ರಿಟಿಗಳನ್ನು ಶ್ರೀಸಾಮಾನ್ಯರೊಂದಿಗೆ ಬೆರೆಯುವಂತೆ ಮಾಡಲಿದೆ. ಈ ಶೋನಲ್ಲಿ  ‘ಪೇರ್ ವಿಥ್ ಪೇರೆಂಟ್ಸ್’, ‘ಸೆಲೆಬ್ರಿಟಿ ಆಲ್ಬಂ', ‘ಫ್ಯಾಮಿಲಿ ಮತ್ಯಾರು', ‘ಸೇಮ್ ಟು ಸೇಮ್’ ಹೆಸರಿನ ಅತ್ಯಂತ ರೋಚಕ ಸುತ್ತುಗಳ ಸ್ಪರ್ಧೆ ಇರಲಿದೆ. ಪ್ರತಿ ಸುತ್ತಿನಲ್ಲಿಯೂ ಸ್ಪರ್ಧಿಯ ಐ.ಕ್ಯೂ ಮತ್ತು ಐ.ಕ್ಯೂ ಬೇಡುವ ವಿಶಿಷ್ಟ ಚಟುವಟಿಕೆಗಳಿರುತ್ತವೆ. ಭಾಗವಹಿಸುವವರಿಗೆ ಗೇಮ್‍ನ ಪ್ರಾರಂಭದಲ್ಲಿ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)