ಬುಧವಾರ, ಏಪ್ರಿಲ್ 14, 2021
28 °C

Bigg Boss 8| ಬಿಗ್‌ ಬಾಸ್‌ ಮನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್‌ ಪ್ರಕರಣವೂ ಸೇರಿದಂತೆ, ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ ಹಿನ್ನೆಲೆಯುಳ್ಳ ಸಂಬರಗಿ, ಟೆಲಿಕಾಂ ಕ್ಷೇತ್ರ, ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ವಂತ ಉದ್ಯಮ ಆರಂಭಿಸಿರುವ ಪ್ರಶಾಂತ್ ಸಂಬರಗಿ, ಈ ಬಾರಿಯ ಬಿಗ್‌ಬಾಸ್‌ ನ  ಹದಿನಾಲ್ಕನೇ ಸ್ಪರ್ಧಿ.

ಇದನ್ನೂ ಓದಿ: Bigg Boss Kannada-8| ಈ ಬಾರಿಯ ಬಿಗ್‌ಬಾಸ್‌ನ ಸ್ಪರ್ಧಿಗಳಿವರು

ಇತ್ತೀಚೆಗೆ ಡ್ರಗ್ಸ್‌ ಮಾಫಿಯಾ ವಿರುದ್ಧ ದನಿ ಎತ್ತುವ ಜತೆಗೆ, ಅದೇ ವಿಷಯಗಳಿಗಾಗಿ  ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. 

‘ವ್ಯಕ್ತಿತ್ವಗಳ ಪರಸ್ಪರ ಪರಿಚಯಕ್ಕಾಗಿ ಬಿಗ್‌ಬಾಸ್‌ಗೆ ಬಂದಿದ್ದೇನೆ‘ ಎಂದು ಪ್ರಶಾಂತ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು