ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 9; ಸಾನ್ಯಾಗೆ ರೂಪೇಶ್ ರಾಜಣ್ಣ ತಲೆಬಾಗಿ ನಮಿಸಿದ್ದು ಏಕೆ?

Last Updated 26 ಅಕ್ಟೋಬರ್ 2022, 7:19 IST
ಅಕ್ಷರ ಗಾತ್ರ

ಕನ್ನಡದ ಬಿಗ್ ಬಾಸ್ ಮನೆ ಈಗ ಸ್ವಾರಸ್ಯಕರ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಸಾನ್ಯಾ ಅಯ್ಯರ್ ಮತ್ತು ಪ್ರಶಾಂತ್ ಸಂಬರಗಿ ಸೇರಿಕೊಂಡು ರೂಪೇಶ್ ರಾಜಣ್ಣ ಅವರಿಗೆ ಮಾಡಿದ ಪ್ರಾಂಕ್ ಜನರನ್ನು ರಂಜಿಸುತ್ತಿದೆ. ತನಗೆ ಮೈಂಡ್ ರೀಡಿಂಗ್ ಶಕ್ತಿ ಇದೆ ಎಂದು ಸಾನ್ಯಾ ಹೇಳಿದ ಮಾತನ್ನು ನಂಬಿದ ರಾಜಣ್ಣ ಬಕ್ರಾ ಆಗಿದ್ದಾರೆ.

ಏನಿದು ಪ್ರಾಂಕ್?
ಮನೆಯಲ್ಲಿ ಕೊಂಚ ಪೆದ್ದು ಪೆದ್ದಾಗಿ ವರ್ತಿಸುವ ರೂಪೇಶ್ ರಾಜಣ್ಣನನ್ನು ಬಕ್ರಾ ಮಾಡಲು ಸಾನ್ಯಾ ಮತ್ತು ಸಂಬರಗಿ ಆಟ ಹೂಡಿದರು. ನಾನು ಮತ್ತು ರಾಜಣ್ಣ ಮಾತಾಡಿದ್ದರ ಬಗ್ಗೆ ನಿನಗೆ ಹೇಳ್ತೀನಿ. ರಾಜಣ್ಣ ಬಂದಾಗ ಮೈಂಡ್ ರೀಡಿಂಗ್ ಗೊತ್ತಿದೆ ಎಂದು ಹೇಳಿ, ನಾನು ಹೇಳಿದ್ದನ್ನು ಅವನಿಗೆ ಹೇಳು ಎಂದು ಪ್ರಶಾಂತ್ ಸಾನ್ಯಾಗೆ ಹೇಳಿದ್ದರು.

ಅದರಂತೆ ಸಾನ್ಯಾ,ರಾಜಣ್ಣನ ಬಳಿ ಬಂದು ನನಗೆ ಮೈಂಡ್ ರೀಡಿಂಗ್ಗೊತ್ತು. ನೀವು ಮತ್ತು ಸಂಬರಗಿ ಮಾತಾಡಿಕೊಂಡದ್ದನ್ನು ಹೇಳ್ತಿನಿ ಎಂದು ಸಂಬರಗಿ ಈ ಮೊದಲು ಹೇಳಿದ್ದನ್ನೆಲ್ಲ ಹೇಳಿದರು. ಇದರಿಂದ ಅಕ್ಷರಶಃ ಅವಕ್ಕಾದ ರಾಜಣ್ಣ, ಸಾನ್ಯಾಗೆ ಏನೋ ಶಕ್ತಿ ಇದೆ ಎಂದು ನಂಬಿ ಬಕ್ರಾ ಆದರು.

ಸಿಪ್ಪೆ ಸುಲಿಯದ ಬಾಳೆಹಣ್ಣು5 ಪೀಸ್?
ಸೂಜಿಯಿಂದ ಬಾಳೆಹಣ್ಣನ್ನು5 ಪೀಸ್ ಮಾಡಿದ ಸಂಬರಗಿ ಇದನ್ನೂ ಬಳಸಿಕೊಂಡು ರಾಜಣ್ಣನನ್ನು ಪ್ರಾಂಕ್ ಮಾಡಲು ಸಾನ್ಯಾ ಜೊತೆ ಸೇರಿ ಹೊಸ ಉಪಾಯ ಮಾಡಿದರು. ಅದರಂತೆ ರಾಜಣ್ಣ ಬಳಿ ಬಂದ ಸಾನ್ಯಾ,ನೀವು ಟಾಸ್ಕ್ ಗೆಲ್ಲೋಕೆ ಒಂದು ಐಡಿಯಾ ಇದೆ. ದೇವರ ಮೂರ್ತಿ ಪಕ್ಕದಲ್ಲಿ ಒಂದು ಬಾಳೆಹಣ್ಣಿದೆ. ಅದನ್ನು ನನ್ನ ಶಕ್ತಿಯಿಂದ ಸಿಪ್ಪೆ ಸುಲಿಯದೆ 5 ಪೀಸ್ ಮಾಡಿರುವೆ. ನಿನ್ನ ಎದುರಾಳಿಗಳಿಗೆ ಅವುಗಳನ್ನು ತಿನಿಸಿದರೆನೀನು ಗೆಲ್ಲಬಹುದು ಎಂದರು. ಅದಕ್ಕೊಪ್ಪದ ರಾಜಣ್ಣ, ನಾನು ನನ್ನ ಸ್ವಂತಪರಿಶ್ರಮದಿಂದ ಗೆಲ್ಲ ಬೇಕೆಂದುಕೊಂಡಿದ್ದೇನೆ ಎಂದು ಹೇಳಿದರು. ಇದಕ್ಕೆ ಮತ್ತೊಂದು ಐಡಿಯಾ ಮಾಡಿದ ಸಾನ್ಯಾ, ಬಾಳೆಹಣ್ಣಿನ 3 ಮೂರು ಪೀಸನ್ನು ಬೆಳಿಗ್ಗೆ, ಮಧ್ಯಾಹ್ನಮತ್ತು ಸಂಜೆ ತಿನ್ನಿ ಒಳ್ಳೆಯದಾಗುತ್ತೆ ಎಂದು ನಂಬಿಸಿದರು.

ಅದರಂತೆ, ರಾಜಣ್ಣ ದೇವರಿಗೆ ಭಕ್ತಿಯಿಂದ ನಮಿಸಿ ಬಾಳೆಹಣ್ಣುಸುಲಿದು ನೋಡಿದಾಗಅಚ್ಚರಿಯಾಯಿತು. ಅವಳು ಹೇಳಿದಂತೆ ಬಾಳೆಹಣ್ಣು ಐದು ತುಂಡಾಗಿದೆ. ಅವಳಲ್ಲಿ ಏನೊ ಶಕ್ತಿ ಇದೆ ಎಂದು ನಂಬಿ ಮತ್ತೊಮ್ಮೆ ಬಕ್ರಾ ಆದರು.

ವಾಟರ್ ಬಾಟಲ್ ಪ್ರಾಂಕ್
ರಾಜಣ್ಣ ಬಹಳ ದಿನಗಳ ಹಿಂದೆ ನಿಮ್ಮ ವಾಟರ್ಬಾಟಲ್ ಅನ್ನು ಕಳೆದುಕೊಂಡಿದ್ದೀರಿ. ಅದು ಎಲ್ಲಿದೆ ಎಂದು ನನಗೆ ತಿಳಿದಿದೆ ಎಂದು ಬಾರಿ ಮೈಂಡ್ ರೀಡರ್ ರೀತಿ ಹಣೆ ಮೇಲೆ ಬೆರಳಿಟ್ಟುಕೊಂಡು ನಾಟಕ ಮಾಡಿದರು. ಬಳಿಕ, ಡಗಡಗಡಗ ಉರುಡುಗ ಬೆಡ್ ಬಳಿ ಇದೆ ಎಂದು ಹೇಳಿದಳು. ಇದನ್ನು ನಂಬಿದ ರಾಜಣ್ಣ ಬೆಡ್ ಬಳಿ ಬಂದು ಪರಿಶೀಲಿಸಿದಾಗ ಬಾಟಲ್ ಸಿಕ್ಕಿತು. ಇದರಿಂದ ಅಕ್ಷರಶಃ ದಂಗಾದ ರಾಜಣ್ಣ, ಸಾನ್ಯಾಗೆ ತಲೆಬಾಗಿ ನಮಿಸಿದರು. ಈ ಎಲ್ಲವನ್ನೂ ಪವಾಡ ಎಂದು ನಂಬಿದ ರಾಜಣ್ಣ ಸಂಬರಗಿ ಬಳಿ ಬಂದು ವೃತ್ತಾಂತವನ್ನೆಲ್ಲ ಹೇಳಿದರು. ಈ ಎಲ್ಲಬಕ್ರಾ ಪ್ಲಾನ್ ನ ಕಿಂಗ್ ಪಿನ್ ಸಂಬರಗಿ,ಹೌದು ಕಣೊ ಅವಳಲ್ಲಿಏನೋ ಪವರ್ ಇದೆ ಎಂದು ಹೇಳಿ ಮತ್ತಷ್ಟು ಬಕ್ರಾ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT