ಬುಧವಾರ, ಜೂನ್ 3, 2020
27 °C

ದೂರದರ್ಶನ: ‘ರಾಮಾಯಣ’ ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ‘ರಾಮಾಯಣ’ ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ ನಿರ್ಮಿಸಿದೆ.

ಪ್ರಪಂಚದಲ್ಲೇ ಮನರಂಜನೆ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಳೆದ ಏಪ್ರಿಲ್‌ 16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ರಾಮಾಯಣ ಧಾರವಾಹಿಯನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ 7.7 ಕೋಟಿ ಜನರು ವೀಕ್ಷಿಸಿರುವುದು ವಿಶ್ವದಾಖಲೆಯಾಗಿದೆ.

ಜಾಗತಿಕ ಮನರಂಜನೆ ವಿಭಾಗದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ ಎಂದು ದೂರದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಮಾಹಿತಿ ನೀಡಿದೆ.

ರಾಮಾಯಣ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಜನಪ್ರಿಯವಾಗಿದೆ. ಲಾಕ್‌ಡೌನ್‌ ಪರಿಣಾಮ ದೂರದರ್ಶನ ಈ ಧಾರವಾಹಿಯನ್ನು ಮರು ಪ್ರಸಾರ ಮಾಡುತ್ತಿದ್ದು. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೂರದರ್ಶನ ನೋಡುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

80–90ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು