ಸೋಮವಾರ, ಸೆಪ್ಟೆಂಬರ್ 23, 2019
27 °C

ಸೇಕ್ರೆಡ್‌ ಗೇಮ್ಸ್‌ ಸೋರಿಕೆ!

Published:
Updated:
Prajavani

ಜನಪ್ರಿಯ ವೆಬ್‌ ಸರಣಿ ಸೇಕ್ರೆಡ್ ಗೇಮ್ಸ್‌ನ ಎರಡನೆಯ ಆವೃತ್ತಿಯು ‘ಟೆಲಿಗ್ರಾಮ್‌’ ಮೂಲಕ ಸೋರಿಕೆ ಆಗಿದೆ. ವಾಟ್ಸ್‌ಆ್ಯಪ್‌ನಂತೆಯೇ, ಚ್ಯಾಟಿಂಗ್‌ಗೆ ಬಳಕೆ ಮಾಡುವ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಸಕ್ರಿಯವಾಗಿರುವ ತಮಿಳ್‌ ರಾಕರ್ಸ್‌ ಗುಂಪು ಸೇರಿದಂತೆ ಕೆಲವು ಕಡೆ ‘ಸೇಕ್ರೆಡ್ ಗೇಮ್ಸ್‌–2’ ಸೋರಿಕೆ ಆಗಿದೆ.

ಈ ವೆಬ್‌ ಸಿರೀಸ್‌ ನೆಟ್‌ಫ್ಲಿಕ್ಸ್‌ ಮೂಲಕ ಪ್ರಸಾರವಾದ ಒಂದೇ ದಿನದಲ್ಲಿ ಅದನ್ನು ತಮಿಳ್‌ ರಾಕರ್ಸ್‌ ಮೂಲಕ ಸೋರಿಕೆ ಮಾಡಲಾಗಿದೆ. ಇದರಿಂದಾಗಿ, ನೆಟ್‌ಫ್ಲಿಕ್ಸ್‌ ಕಂಪನಿ ನಷ್ಟ ಅನುಭವಿಸಬೇಕಾಗಿದೆ. ಈ ವೆಬ್‌ ಸರಣಿಗಾಗಿ ನೆಟ್‌ಫ್ಲಿಕ್ಸ್‌ ಕಂಪನಿ ₹ 100 ಕೋಟಿ ಹೂಡಿಕೆ ಮಾಡಿದ್ದು, ಇದು ಈ ಕಂಪನಿಯು ಭಾರತದಲ್ಲಿ ಇದುವರೆಗೆ ಮಾಡಿರುವ ಅತಿದೊಡ್ಡ ಹೂಡಿಕೆ ಎಂದು ವರದಿಯಾಗಿದೆ.

Post Comments (+)