ಈ ಕಾರ್ಯಕ್ರಮ ಕಲರ್ಸ್ ಹಿಂದಿ ಚಾನಲ್‌ನಲ್ಲಿ ಪ್ರಸಾರವಾಗಲಿದೆ. ಅಲ್ಲದೆ ಜಿಯೊ ಸಿನಿಮಾದಲ್ಲಿ ಕೂಡ ವೀಕ್ಷಿಸಬಹುದು.
ಪ್ರೀಮಿಯರ್ ದಿನಾಂಕವನ್ನು ವಾಹಿನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದೆ. ಈ ಬಾರಿಯ ಆವೃತಿಯ ಪರಿಕಲ್ಪನೆಯನ್ನು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ವಿವರಿಸುವ ಪ್ರೊಮೊ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.
‘ಈ ಬಾರಿ ಬಿಗ್ ಬಾಸ್‌ನಲ್ಲಿ ಭೂಕಂಪ ಸಂಭವಿಸಲಿದೆ. ಯಾಕೆಂದರೆ ಈ ಬಾರಿ ಸಮಯ ಮೇಲುಗೈ ಸಾಧಿಸಲಿದೆ. ಬಿಗ್ ಬಾಸ್ 18ರ ಅದ್ಧೂರಿ ಪ್ರೀಮಿಯರ್ ಅಕ್ಟೋಬರ್ 6ರಂದು ರಾತ್ರಿ 9 ಗಂಟೆಗೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ’ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ.
ಬಿಗ್ ಬಾಸ್ 17ನೇ ಆವೃತಿಯ ನಿರೂಪಕರಾಗಿ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಆದರೆ, ಬಿಗ್ ಬಾಸ್‌ನ ಮೂರನೇ ಒಟಿಟಿ ಆವೃತಿಯಲ್ಲಿ ನಟ ಅನಿಲ್ ಕಪೂರ್ ನಿರೂಪಕರಾಗಿದ್ದರು.
ಬಿಗ್ ಬಾಸ್‌ನ ನಾಲ್ಕನೇ ಆವೃತಿಯಿಂದ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದಾರೆ.