ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಡೆಂಗಿಯಿಂದ ಬಳಲುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಈ ಬಾರಿಯ ‘ಬಿಗ್‌ಬಾಸ್–16’ ಸೀಸನ್‌ಗೆ ಚಿತ್ರ ನಿರ್ದೇಶಕ ಕರಣ್ ಜೋಹರ್ ಕೆಲವು ಎಪಿಸೋಡ್‌ಗಳಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ.
‘2010ರಿಂದ ಸಲ್ಮಾನ್ ಬಿಗ್‌ಬಾಸ್ ನಿರೂಪಕರಾಗಿದ್ದಾರೆ. ಡೆಂಗಿಯಿಂದ ಅವರು ಚೇತರಿಸಿಕೊಳ್ಳುತ್ತಿದ್ದು, ದೀಪಾವಳಿ ಹಬ್ಬದ ಬಳಿಕ ಬಿಗ್‌ಬಾಸ್–16 ಶೂಟಿಂಗ್‌ಗೆ ಮರಳಲಿದ್ದಾರೆ’ಎಂದು ನಟನ ಆಪ್ತ ಮೂಲಗಳು ತಿಳಿಸಿವೆ.