ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಫ್ಯಾಮಿಲಿ ಮ್ಯಾನ್ 2: ರಾಜಿ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡ ಸಮಂತಾ

ಅಕ್ಷರ ಗಾತ್ರ

ಬೆಂಗಳೂರು: ಅಮೆಜಾನ್ ಪ್ರೈಮ್ ಒಟಿಟಿ ಮೂಲಕ ಬಿಡುಗಡೆಯಾಗಿದ್ದ ‘ದಿ ಫ್ಯಾಮಿಲಿ ಮ್ಯಾನ್–2‘ ವೆಬ್ ಸಿರೀಸ್‌ನಲ್ಲಿ ರಾಜಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸಮಂತಾ ಅವರಿಗೆ ‘ಅತ್ಯುತ್ತಮ ನಟಿ‘ ಪ್ರಶಸ್ತಿ ಒಲಿದಿದೆ.

ಕ್ರಿಟಿಕ್ಸ್ ಚಾಯ್ಸ್ ಫಿಲಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಮಂತಾ ರುತ್ ಪ್ರಭು ಅವರು ‘ಅತ್ಯುತ್ತಮ ನಟಿ‘ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರಾಜ್ ಆ್ಯಂಡ್ ಡಿಕೆ ನಿರ್ಮಾಣದ ‘ದಿ ಫ್ಯಾಮಿಲಿ ಮ್ಯಾನ್‘ ಎರಡು ಸರಣಿಗಳಲ್ಲಿ ಅಮೆಜಾನ್ ಪ್ರೈಮ್ ಮೂಲಕ ಪ್ರಸಾರವಾಗಿದೆ.

ಸೀಸನ್ ಎರಡರಲ್ಲಿ ಶ್ರೀಲಂಕಾ ಬಂಡುಕೋರರ ತಂಡದ ‘ರಾಜಿ‘ ಪಾತ್ರದಲ್ಲಿ ಮಿಂಚಿದ್ದ ಸಮಂತಾ, ಎಲ್ಲರ ಗಮನ ಸೆಳೆದಿದ್ದರು.

'ಬೆಸ್ಟ್ ಆಕ್ಟ್ರೆಸ್' ಪ್ರಶಸ್ತಿ ಜತೆಗಿನ ಫೋಟೊವನ್ನು ಸಮಂತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT