ಬುಧವಾರ, ನವೆಂಬರ್ 30, 2022
17 °C

ಡ್ರಾಮಾ ಜೂನಿಯರ್ಸ್: ಪ್ರಶಸ್ತಿ ಬಾಚಿದ ಸಮೃದ್ಧಿ ಮೊಗವೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ರಿಯಾಲಿಟಿ ಶೋ ‘ಡ್ರಾಮಾ ಜೂನಿಯರ್ಸ್ ಸೀಸನ್ 4’ ಅಂತಿಮ ಸ್ಪರ್ಧೆಯಲ್ಲಿ ಕುಂದಾಪುರದ ಸಮೃದ್ಧಿ ಎಸ್. ಮೊಗವೀರ್ ಪ್ರಶಸ್ತಿ ಬಾಚಿ ಕೊಂಡಿದ್ದಾಳೆ. ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 

23 ವಾರ ಪ್ರಸಾರವಾಗಿದ್ದ ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ 15 ಮಕ್ಕಳು ಆಯ್ಕೆಯಾಗಿದ್ದರು. ನಾಲ್ಕು ಮಕ್ಕಳು ಪ್ರಶಸ್ತಿ ಹಂತದವರೆಗೆ ತಲುಪಿದರು. 

ಇನ್ನು ಮಂಗಳೂರಿನ ವೇದಿಕ್ ಮೂರನೇ ಸ್ಥಾನ ಪಡೆದಿದ್ದಾನೆ. ಈ ಸೀಸನ್‌ಗೆ ವಿಶಿಷ್ಟ ಪ್ರತಿಭೆಯಾಗಿ ಬಂದಿದ್ದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್‌ಗೆ ವಿಶೇಷ ಬಹುಮಾನವಾಗಿ ₹ 1 ಲಕ್ಷ ನಗದು ನೀಡಲಾಯಿತು.

ಈ ಸೀಸನ್‌ ಬಳಿಕ ಕಾಮಿಡಿ ಕಿಲಾಡಿಗಳು ಸೀಸನ್‌ 4 ಆರಂಭವಾಗಲಿದೆ. ಮಾಸ್ಟರ್‌ ಆನಂದ್‌ ನಿರೂಪಣೆಯಿದೆ. ನಿರ್ದೇಶಕ ಯೋಗರಾಜ್ ಭಟ್, ನವರಸನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಅವರು ತೀರ್ಪುಗಾರರಾಗಿರಲಿದ್ದಾರೆ
ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು