ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರು ಮಕ್ಕಳ ಜೊತೆಗೆ ಮಗುವಾಗಿ ಆಟವಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಈ ವಿಡಿಯೊ ಕೊಂಚ ವಿಶೇಷವಾಗಿದೆ. ನಟ ಶಿವಣ್ಣಗೆ ಪುಟಾಣಿ ಪ್ರೀತಮ್ ಎಂದರೆ ಅಚ್ಚುಮೆಚ್ಚು. ಆಗಾಗ ಪ್ರೀತಮ್ ಜೊತೆಗೆ ಆಟವಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಲೇ ಇರುತ್ತವೆ.
.DKD: ಪುಟಾಣಿ ಪ್ರೀತಮ್ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ.DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್ಗೆ ಮನಸೋತ ಶಿವಣ್ಣ, ರಚಿತ ರಾಮ್.
ನಟಿ, ನಿರೂಪಕಿ ಅನುಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ಶಿವಣ್ಣ ಅವರು ಪ್ರೀತಮ್ ಜೊತೆಗೆ ವೇದಿಕೆ ಮೇಲೆ ಪಕ್ಕದಲ್ಲಿ ಮಲಗಿಕೊಂಡು ಹಾಡು ಹಾಡುತ್ತಿದ್ದಾರೆ. ಮತ್ತೊಮ್ಮೆ ಶಿವಣ್ಣನ ಸರಳತೆಯ ವಿಡಿಯೊ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ವಿಡಿಯೊ ಹಂಚಿಕೊಂಡ ನಿರೂಪಕಿ ಅನುಶ್ರೀ, ‘ಪದಗಳೇ ಸಿಗುತ್ತಿಲ್ಲ.. ಈ ಬಾಂಧವ್ಯದಲ್ಲಿ ಕಲ್ಮಶವೇ ಇಲ್ಲ.. ಪ್ರೀತಿನೇ ಎಲ್ಲ’ ಎಂದು ಅಡಿ ಬರಹ ಹಾಕಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗೆ ಗದಗ ಜಿಲ್ಲೆಯ ಪುಟಾಣಿ ಪ್ರೀತಮ್ ಎಂಟ್ರಿ ಕೊಟ್ಟು ತಮ್ಮ ಅದ್ಭುತ ಡ್ಯಾನ್ಸ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾನೆ. ಇತ್ತೀಚೆಗೆ ಪ್ರೀತಮ್ಗೆ ಅರ್ಜುನ್ ಜನ್ಯ ಅವರು ಬಂಗಾರದ ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.