ಭಾನುವಾರ, ಆಗಸ್ಟ್ 1, 2021
20 °C

ಚಂದ್ರವನದಲ್ಲಿ ‘ಯಡಿಯೂರು ಶ್ರೀ ಸಿದ್ದಲಿಂಗೇಶ್ವರ’ ಧಾರಾವಾಹಿ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದ ಆವರಣದಲ್ಲಿ ಗುರುವಾರದಿಂದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿತ್ತು. ಚಿತ್ರನಟ ನವೀನ್‌ ಕೃಷ್ಣ ನಿರ್ದೇಶನದ, ಶ್ರೀನಿವಾಸಗೌಡ ನಿರ್ಮಾಣದ ಈ ಧಾರಾವಾಹಿಯ ಚಿತ್ರೀಕರಣ ಮತ್ತೆ ರಂಭವಾಗಿದ್ದು, ಚಂದ್ರವನದ ಆಸುಪಾಸಿನಲ್ಲಿ ಇನ್ನೂ 4 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನವೀನ್‌ಕೃಷ್ಣ ತಿಳಿಸಿದ್ದಾರೆ.

ಕಲಾವಿದರಾದ ಹರುಷ್‌ ನವೀನ್‌ಕೃಷ್ಣ, ಅಮೋಘ್‌, ಹರೀಶ್‌ರಾಜ್‌, ಹರ್ಷಲಾ, ನಯನ, ಶ್ರುತಿನಾಯಕ್‌, ಭರತ್‌, ಮೋಹನ್‌, ಆಂಜನಪ್ಪ, ಚರಣ್‌ ಶೇಖರ್‌, ಶರತ್‌ಚಂದ್ರ ಇತರರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಸುಮಿತ್‌ ಮುಂಬೈ ಮೇಕಪ್‌ ಮಾಡಿದರು. ಮಹೇಶ್‌ ಹೆಬ್ಬಾಳು ವಸ್ತ್ರ ವಿನ್ಯಾಸ ಮಾಡಿದರು. ಮಂಜುನಾಥ್‌, ಕೂಡಲಕುಪ್ಪೆ ಸೋಮಶೇಖರ್‌, ಉಸ್ತುವಾರಿ ಮ್ಯಾನೇಜರ್‌ ಲೋಕೇಶ್‌ ಕಾರ್ಯ ಸ್ಥಳದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು