ಬುಧವಾರ, ಜೂನ್ 3, 2020
27 °C

ದೂರದರ್ಶನ: ‘ಶ್ರೀಕೃಷ್ಣ’ ಧಾರಾವಾಹಿ ಮರುಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ‘ರಾಮಾಯಣ’, ‘ಮಹಾಭಾರತ’ದ ನಂತರ ‘ಶ್ರೀಕೃಷ್ಣ’ ಪೌರಾಣಿಕ ಧಾರಾವಾಹಿಯನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರಕಿದೆ. 

ಶೀಘ್ರದಲ್ಲೇ 'ಶ್ರೀಕೃಷ್ಣ' ಬರಲಿದೆ ಎಂದು ಡಿಡಿ ವಾಹಿನಿ ತನ್ನ‌ ಟ್ವಿಟರ್‌ ಖಾತೆಯಲ್ಲಿ ಬಹಿರಂಗಪಡಿಸಿದೆ. ರಮಾನಂದ್ ಸಾಗರ್ ನಿರ್ದೇಶನದ ಈ ಧಾರಾವಾಹಿ 20 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು.  1993 ರಲ್ಲಿ ಈ ಧಾರಾವಾಹಿ ಮೊದಲ ಬಾರಿಗೆ ದೂದರ್ಶನ ಮೆಟ್ರೊ ವಾಹಿನಿಯಲ್ಲಿ (ಡಿಡಿ 2) ಪ್ರಸಾರವಾಗಿತ್ತು. ನಂತರ, 1996ರಲ್ಲಿ ಡಿಡಿ ರಾಷ್ಟ್ರೀಯ ವಾಹಿನಿಯಲ್ಲೂ ಪ್ರಸಾರವಾಯಿತು. 

ಸರ್ವದಾಮನ್ ಡಿ‌ ಬ್ಯಾನರ್ಜಿ ಮತ್ತು ಸ್ವಪ್ನಿಲ್‌ ಜೋಷಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು