ಯುಗಾದಿಯಂದು ಸ್ಟಾರ್ ಸುವರ್ಣದಲ್ಲಿ ಸ್ಟಾರ್‌ ಮಹಾನಟಿ

ಭಾನುವಾರ, ಏಪ್ರಿಲ್ 21, 2019
26 °C

ಯುಗಾದಿಯಂದು ಸ್ಟಾರ್ ಸುವರ್ಣದಲ್ಲಿ ಸ್ಟಾರ್‌ ಮಹಾನಟಿ

Published:
Updated:
Prajavani

ಚಂದನವನದ ನಟಿಯರಾದ ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿ ‘ಮಹಾನಟಿ’ ಪುರಸ್ಕಾರ ನೀಡಿ ಗೌರವಿಸಿದೆ. 

ಬೆಂಗಳೂರಿನ ಡೊಂಕ ಹಳ್ಳ ಮೈದಾನದಲ್ಲಿ ಇತ್ತೀಚೆಗೆ ನಡೆದ ಸುಂದರ ಕಾರ್ಯಕ್ರಮದಲ್ಲಿ ಕನ್ನಡದ ಮೇರು ನಟಿಯರ ಸಾಧನೆಯನ್ನು ಗೌರವಿಸಲು ಕನ್ನಡ ಚಲನಚಿತ್ರೋದ್ಯಮದ ಖ್ಯಾತನಾಮರು ಸೇರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ, ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಎದುರಾದ ಸವಾಲುಗಳ ಬಗ್ಗೆ ಮೆಲುಕು ಹಾಕಿದ್ದಾರೆ. ತಮಗೆ ಪ್ರೀತಿ ತೋರಿಸಿದ ಕುಟುಂಬ ಹಾಗೂ ಅಭಿಮಾನಿಗಳನ್ನು ನೆನೆದು ಭಾವುಕರಾಗಿದ್ದಾರೆ.

ಸ್ಟಾರ್ ಮಹಾನಟಿ ಬರಿ ಮನರಂಜನೆಯ ಕಾರ್ಯಕ್ರಮವಾಗದೆ, ಚಿತ್ರರಂಗದಲ್ಲಿ ಅಗ್ರ ಸಾಧನೆಗೈದಿರುವ ಮಾಹಾನ್ ಕಲಾವಿದೆಯರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ಇದೇ 6ರಂದು ಸಂಜೆ 6.30ಕ್ಕೆ ವೀಕ್ಷಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಸ್ಟಾರ್ ಸುವರ್ಣ ವಾಹಿನಿಯು ಸ್ಟಾರ್‌ ಮಹಾನಟಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !