ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಣಿಗೆ ಶರಣಾದ ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್: ಡೆತ್‌ನೋಟ್‌ ಪತ್ತೆ

Last Updated 16 ಅಕ್ಟೋಬರ್ 2022, 11:37 IST
ಅಕ್ಷರ ಗಾತ್ರ

ಭೋಪಾಲ್:ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ (26)​ ಅವರು ಮಧ್ಯಪ್ರದೇಶದ ಇಂದೋರ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವೈಶಾಲಿ ಅವರು ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ನೆಲೆಸಿದ್ದರು. ಘಟನಾ ಸ್ಥಳದಲ್ಲಿ ಡೆತ್‌ ನೋಟ್​ ಕೂಡ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿ ತೇಜಾಜಿ ನಗರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಸಸುರಾಲ್​ ಸಿಮರ್​ ಕಾ’ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಗೆ ಕಾಲಿಟ್ಟ ವೈಶಾಲಿ, ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸೂಪರ್​ ಸಿಸ್ಟರ್ಸ್​’, ‘ಮನಮೋಹಿನಿ 2’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್​’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ನಟಿಸಿದ್ದರು.

ವೈಶಾಲಿ ನಿಧನದಿಂದಾಗಿ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT