ಶನಿವಾರ, ಮೇ 28, 2022
24 °C

ಹೌದು, ನನ್ನ ಬಟ್ಟೆಯನ್ನು ಇಲಿ ತಿಂದು ಹಾಕಿದೆ: ಉರ್ಫಿ ಜಾವೇದ್ ಪೋಸ್ಟ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Actress Urfi Javed Instagram Post

ಬೆಂಗಳೂರು: ಬೋಲ್ಡ್ ಮತ್ತು ಬ್ಯೂಟಿಫುಲ್ ಖ್ಯಾತಿಯ ನಟಿ ಉರ್ಫಿ ಜಾವೇದ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸದಾ ಕಾಲ ಉಡುಪಿನ ವಿಚಾರದಲ್ಲಿ ಟ್ರೋಲ್‌ಗೆ ಸಿಲುಕುವ ಉರ್ಫಿ, ಈ ಬಾರಿ ಅವರೇ ಸ್ವತಃ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಉಡುಪುಗಳನ್ನು ವಿನ್ಯಾಸ ಮಾಡುವವರು ಯಾರು ಎಂದು ಬಹಳಷ್ಟು ಪ್ರಶ್ನೆಗಳು ಪ್ರತಿ ಬಾರಿಯೂ ಬರುತ್ತವೆ. ಇಲ್ಲಿ ಅವರ ಫೋಟೊ ಹಾಕಿದ್ದೇನೆ, ನೋಡಿ, ಮತ್ತೆ ನನ್ನನ್ನು ಕೇಳಬೇಡಿ ಎಂದು ಉರ್ಫಿ ತಮ್ಮ ಹೊಸ ಫೋಟೊ ಪೋಸ್ಟ್ ಮಾಡಿದ್ದು, ಅದರಲ್ಲಿ ಕೊನೆಗೆ ಇಲಿಯೊಂದು ಬಟ್ಟೆಯನ್ನು ಕಚ್ಚಿ ತುಂಡರಿಸುತ್ತಿರುವ ಚಿತ್ರ ಹಾಕಿದ್ದಾರೆ.

ಉರ್ಫಿ ಅವರ ಪೋಸ್ಟ್ ನೋಡಿದವರು, ಬಹುಶಃ ನಿಮ್ಮ ಬಟ್ಟೆಯನ್ನು ಇಲಿ ತಿಂದಿರಬಹುದು ಎಂದು ಕಾಮೆಂಟ್ ಮಾಡಿದ್ದರು. ಅದಕ್ಕೆ ಸರಿಯಾಗಿ ಉತ್ತರ ನೀಡಿರುವ ಅವರು, ಹೌದು, ಇಲಿಯೇ ನನ್ನ ಬಟ್ಟೆಯನ್ನು ವಿನ್ಯಾಸ ಮಾಡಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು