ಏ. 20ರಿಂದ ‘ವೀಕೆಂಡ್‌ ವಿತ್‌ ರಮೇಶ್‌’ ಆರಂಭ

ಬುಧವಾರ, ಏಪ್ರಿಲ್ 24, 2019
31 °C

ಏ. 20ರಿಂದ ‘ವೀಕೆಂಡ್‌ ವಿತ್‌ ರಮೇಶ್‌’ ಆರಂಭ

Published:
Updated:
Prajavani

ಬೆಂಗಳೂರು: ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ ‘ವೀಕೆಂಡ್‌ ವಿತ್‌ ರಮೇಶ್‌’ ಸೀಸನ್‌ 4 ಇದೇ 20ರಿಂದ ಆರಂಭವಾಗಲಿದೆ.

ಜೀ ಕನ್ನಡ ವಾಹಿನಿಯು ತನ್ನ ಫೇಸ್‌ಬುಕ್‌ ಪುಟದಲ್ಲಿ ಅಧಿಕೃತವಾಗಿ ಕಾರ್ಯಕ್ರಮ ಪ್ರಸಾರದ ದಿನಾಂಕವನ್ನು ಪ್ರಕಟಿಸಿದೆ. ಈಗಾಗಲೇ, ಮೂರು ಸೀಸನ್‌ ಕಂಡಿರುವ ಈ ಕಾರ್ಯಕ್ರಮದಲ್ಲಿ ನಟ ರಮೇಶ್‌ ಅರವಿಂದ್‌ ಹಲವು ಸಾಧಕರ ಜೀವನವನ್ನು ಪರಿಚಯಿಸಿದ್ದಾರೆ. ನಾಲ್ಕನೇ ಸೀಸನ್‌ ಕೂಡ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.

ಈ ಹಿಂದಿನ ಸೀಸನ್‌ಗಳಲ್ಲಿ ನಟರಾದ ಅಂಬರೀಷ್‌, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರವಿಚಂದ್ರನ್, ದರ್ಶನ್‌, ಸುದೀಪ್, ಯಶ್‌, ಪ್ರಕಾಶ್ ರೈ, ಗಣೇಶ್, ದುನಿಯಾ ವಿಜಯ್, ದೊಡ್ಡಣ್ಣ, ನಟಿ ಲಕ್ಷ್ಮಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಾಧಕರು ತಾವು ನಡೆದು ಬಂದ ಹಾದಿಯಲ್ಲಿನ ನೋವು, ನಲಿವನ್ನು ಪ್ರೇಕ್ಷಕರೊಟ್ಟಿಗೆ ಹಂಚಿಕೊಂಡಿದ್ದರು.  

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಈ ಸೀಸನ್‌ನ ಮೊದಲ ಅತಿಥಿಯಾಗಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ, ವಾಹಿನಿಯು ಮೊದಲ ಅತಿಥಿ ಯಾರು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈ ಹಿಂದಿನ ಸೀಸನ್‌ಗಳಲ್ಲಿ ಕಾರ್ಯಕ್ರಮವು ರಾತ್ರಿ 9ಗಂಟೆಗೆ ಆರಂಭವಾಗಿತ್ತು. ಈ ಬಾರಿ ರಾತ್ರಿ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 10.30ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !