ಶನಿವಾರ, ಸೆಪ್ಟೆಂಬರ್ 25, 2021
22 °C

ಜೀ ಕನ್ನಡದಲ್ಲಿ ವಾರಾಂತ್ಯದ ‘ಮಹಾಸಂಭ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವ ಜನರಿಗೆ ಮನರಂಜನೆಯ ಭರಪೂರ ಔತಣ ನೀಡಲು ಜೀ ಕನ್ನಡ ವಾಹಿನಿ ಸಜ್ಜಾಗಿದ್ದು, ಇದೇ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ತನ್ನ ಜನಪ್ರಿಯ ರಿಯಾಲಿಟಿ ಶೋಗಳಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು’ ಎರಡೂ ಕಾರ್ಯಕ್ರಮಗಳ ‘ಮಹಾಸಂಭ್ರಮ’ ಪ್ರಸಾರವಾಗಲಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಬಹುತೇಕ ವಾಹಿನಿಗಳಲ್ಲಿ ಧಾರಾವಾಹಿಗಳ ಮರುಪ್ರಸಾರವಾಗುತ್ತಿದೆ. ‘ಜೀ ಕನ್ನಡ ಆರಂಭದಿಂದಲೂ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಅದ್ಭುತ ನೃತ್ಯ, ಸರಿಗಮಪದ ಅದ್ಭುತ ಸಂಗೀತ ಕಾರ್ಯಕ್ರಮ ಹಾಗೂ ವಿನೋದಮಯ ಕಾಮಿಡಿ ಕಿಲಾಡಿಗಳು ವೀಕ್ಷಕರನ್ನು ರಂಜಿಸಿವೆ. ಪ್ರತೀ ವಾರ ವಿನೂತನ ಬಗೆಯ ಕಾರ್ಯಕ್ರಮಗಳನ್ನು ರೂಪಿಸುವ ವಾಹಿನಿಯು ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ’ ಎಂದು ತಂಡವು ತಿಳಿಸಿದೆ. 

ವಾರಾಂತ್ಯದ ಭರಪೂರ ರಂಜನೆಗೆ ಅನುಶ್ರೀ ಹಾಗೂ ಆನಂದ್ ಅವರ ನಿರೂಪಣೆ ಮೆರುಗು ಹೆಚ್ಚಿಸಲಿದೆ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಭರ್ಜರಿ ಮನರಂಜನೆಯ ಭರವಸೆಯನ್ನು ವಾಹಿನಿಯು ನೀಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು