ಶ್ರೀನಿವಾಸಪುರದಲ್ಲಿ ಹಾರುವ ಕಪ್ಪೆಗಳು!

7
ರೈತ ರಾಮಪ್ಪ ಮನೆಯಲ್ಲಿ ಕಾಣಿಸಿಕೊಂಡ ಮಂಡೂಕ

ಶ್ರೀನಿವಾಸಪುರದಲ್ಲಿ ಹಾರುವ ಕಪ್ಪೆಗಳು!

Published:
Updated:
Deccan Herald

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿಯ ರೈತ ರಾಮಪ್ಪ ಅವರ ಮನೆಯ ಬಳಿ ವಿವಿಧ ಬಣ್ಣದ ಹಾರುವ ಕಪ್ಪೆಗಳು ಕಾಣಿಸಿಕೊಂಡಿವೆ. ಇದು ಗ್ರಾಮದಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಕಪ್ಪೆಗಳನ್ನು ನೋಡಲು ವಿವಿಧ ಗ್ರಾಮಗಳಿಂದ ಜನರು ಬರುತ್ತಿದ್ದಾರೆ.

ರಾಮಪ್ಪ ಅವರ ಮನೆಯ ಶೌಚಾಲಯದ ಒಳ ಗೋಡೆಯ ಮೇಲೆ ಇವು ಮೊದಲು ಕಂಡುಬಂದವು. ಕಪ್ಪೆಗಳ ಮೈ ಮೇಲೆ ತೇವ ಒಸರಿದಂತೆ ಕಾಣುತ್ತದೆ. ತೆಳುವಾದ ಮೈಕಟ್ಟು ಹೊಂದಿವೆ. ಗೋಡೆಯಿಂದ ಗೋಡೆಗೆ ಹಾರುತ್ತವೆ. ನಯವಾದ ಗೋಡೆ ಹತ್ತುತ್ತವೆ. ಗೋಡೆಯ ಮೇಲೆ ಸ್ಥಿರವಾಗಿ ನಿಲ್ಲುತ್ತವೆ.

ಸಾಮಾನ್ಯವಾದ ಕಪ್ಪೆಗಳು ಕುಪ್ಪಳಿಸುತ್ತದೆ. ಅವುಗಳ ಕಾಲುಗಳ ರಚನೆಯಲ್ಲಿ ವಿಶೇಷ ಇರುವುದಿಲ್ಲ. ಆದರೆ ಹಾರುವ ಕಪ್ಪೆಗಳು ವಿಭಿನ್ನ ರೀತಿಯ ಜಾಲಪಾದ ಹೊಂದಿವೆ. ಮುಂಗಾಲುಗಳ ಬೆರಳುಗಳ ತುದಿಯಲ್ಲಿ ಪೈಪ್ ಆಕಾರದ ರಚನೆ ಇದೆ. ಆದ್ದರಿಂದಲೇ ಗೋಡೆಯನ್ನು ಗಟ್ಟಿಯಾಗಿ ಹಿಡಿಯಲು ಸಾಧ್ಯವಾಗಿದೆ.

ಈ ಕಪ್ಪೆಗಳು ಮನೆ ಪಕ್ಕದ ಮರಗಳಲ್ಲೂ ಕಾಣಿಸಿಕೊಂಡಿವೆ. ಮರದಿಂದ ಮರಕ್ಕೆ ಹಾರುತ್ತಿವೆ.

‘ಈ ಭಾಗದಲ್ಲಿ ಹಾರುವ ಕಪ್ಪೆಗಳು ಕಾಣಿಸಿಕೊಂಡಿರುವುದು ಅಪರೂಪ. ಹಾರಲು ಅನುಕೂಲವಾಗುವಂತೆ ದೇಹ ತೂಕ ಕಡಿಮೆ ಇದೆ. ಸಾಮಾನ್ಯವಾಗಿ ಮರಗಳಲ್ಲಿ ವಾಸಿಸುವ ಇವು ಹುಳುಗಳನ್ನು ತಿನ್ನುತ್ತವೆ. ಸಂತಾನೋತ್ಪತ್ತಿಗಾಗಿ ನೆಲಕ್ಕೆ ಬರುತ್ತವೆ’ ಎಂದು ಜೀವವಿಜ್ಞಾನ ಉಪನ್ಯಾಸಕಿ ಸಿ.ಚೈತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.


ಹಾರುವ ಕಪ್ಪೆ


ಹಾರುವ ಕಪ್ಪೆ

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !