ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಗೆ 27 ಕಿ.ಮೀ ವೇಗದಲ್ಲಿ ಈಜುವ ಹಂಬೋಲ್ಟ್‌ ಪೆಂಗ್ವಿನ್‌!

Last Updated 22 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಈ ಪೆಂಗ್ವಿನ್‌ನ ನಡೆದಾಡುವುದು ಚಿಕ್ಕ ಮಗು ಗೋಡೆ ಹಿಡಿದು ನಡೆಯುವಂತೆ ಮುದ್ದು ಮುದ್ದಾಗಿ ಕಾಣಿಸುತ್ತದೆ. ಕುಜ್ಜ ದೇಹ, ಆಕರ್ಷಕ ಕಪ್ಪು ಬಿಳಿಪಿನ ಬಣ್ಣದಿಂದ ಕೂಡಿರುತ್ತದೆ. ಇದರ ಹೆಸರುಹಂಬೋಲ್ಟ್‌ ಪೆಂಗ್ವಿನ್‌. ಇದರಲ್ಲಿ ಇಲ್ಲಿಯವರೆಗೆ17ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಇದರ ದೇಹದ ಉದ್ದ 56 ರಿಂದ 70 ಸೆಂ.ಮೀ ಇರುತ್ತದೆ. ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ದೇಹದ ಬೆನ್ನಿನ ಮತ್ತು ಕಾಲುಗಳ ಭಾಗ ಕಪ್ಪು ಬಣ್ಣದಲ್ಲಿರುತ್ತದೆ. ಉದರ, ಕತ್ತು, ಕೈ, ಕಾಲಿನ ಇಕ್ಕೆಲಗಳಲ್ಲಿ ಬಿಳಿ ಬಣ್ಣವಿರುತ್ತದೆ. ಉದರ ಭಾಗದ ಮೇಲೆ ಸಣ್ಣ ಕಪ್ಪು ಪಟ್ಟೆಗಳಿರುತ್ತವೆ. ಇದರ ಈಜುರೆಕ್ಕೆಗಳು ನೀಳವಾಗಿರುತ್ತವೆ.

ಕಾಲಿನ ಬೆರಳುಗಳಲ್ಲಿ ತಲಾ ಮೂರು ಉಗುರುಗಳಿದ್ದು, ದೇಹದ ಚರ್ಮ ಅದಕ್ಕೆ ಅಂಟಿಕೊಂಡಿರುತ್ತದೆ. ಮೂಗು ಮತ್ತು ಕಾಲಿನ ಬೆರಳುಗಳು ಪಕ್ಷಿಗಳ ದೇಹ ರಚನೆಯನ್ನು ಹೋಲುತ್ತದೆ. ಇವುಗಳಿಗೆ ಹಲ್ಲುಗಳಿರುವುದಿಲ್ಲ. ನಾಲಿಗೆಯ ಹೊರ ಅಥವಾ ಸುತ್ತಲಿನ ಭಾಗ ಚೂಪಾಗಿರುತ್ತದೆ. ಜನನಿರೋಧಕ ರೆಕ್ಕೆಗಳನ್ನು ಇವು ಹೊಂದಿದೆ. ಇದರ ಕಣ್ಣಿನಲ್ಲಿ ರಕ್ಷಣಾತ್ಮಕ ಮಸೂರವಿದ್ದು, ನೀರಿನ ಒಳಗೆ ಈಜುವಾಗ ಕಣ್ಣಿನ ಭಾಗಕ್ಕೆ ನೀರು ತಾಗದ ರೀತಿಯಲ್ಲಿ ಸಹಾಯ ಮಾಡುತ್ತವೆ.

ಎಲ್ಲೆಲ್ಲಿವೆ?

ಇದರ ಸಂತತಿ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ವಿಸ್ತರಿಸಿದೆ.

ಆಹಾರ

ಮೀನು, ಸೀಗಡಿ, ಲಾರ್ವಾ ಮತ್ತು ಜಲ ಕೀಟಗಳನ್ನು ತಿಂದು ಜೀವಿಸುತ್ತವೆ.

ಜೀವನ ಕ್ರಮ ಮತ್ತು ವರ್ತನ

ಇದು ಭೂಮಿ ಮತ್ತು ನೀರು ಎರಡರಲ್ಲೂ ವಾಸಿಸುತ್ತದೆ. ಸದಾ ಗುಂಪಿನಲ್ಲಿ ವಾಸಿಸಲು ಇಚ್ಛಿಸುತ್ತದೆ. ಇದು ಗಂಟೆಗೆ 27 ಕಿ.ಮೀ ವೇಗವಾಗಿ ಈಜುವ ಸಾಮರ್ಥ್ಯವನ್ನು ಹೊಂದಿದೆ. ತಮ್ಮ ಗುಂಪಿನೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸುತ್ತದೆ.

ಸಂತಾನೋತ್ಪತ್ತಿ

ಪೆಂಗ್ವಿನ್‌ಗಳು ಮೊಟ್ಟೆ ಇಡುವ ಪ್ರಕ್ರಿಯೆ ಭಿನ್ನವಾಗಿದೆ. ಪ್ರೌಢಾವಸ್ಥೆ ತಲುಪಿದ ಗಂಡು ಪೆಂಗ್ವಿನ್‌ ಗೂಡನ್ನು ಕಟ್ಟಿ, ಹೆಣ್ಣು ಪೆಂಗ್ವಿನ್‌ಗಳನ್ನು ಆಕರ್ಷಿಸುತ್ತದೆ. ಹೆಣ್ಣು ಪೆಂಗ್ವಿನ್‌ ಒಂದು ಬಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತದೆ. ಮರಿಗಳ ಪೋಷಣೆಯಲ್ಲಿ ಪೋಷಕ ಪೆಂಗ್ವಿನ್‌ ವಿಶೇಷ ಕಾಳಜಿ ವಹಿಸುತ್ತದೆ. ಮೊಟ್ಟೆಗಳನ್ನು ಗಂಡು ಮತ್ತು ಹೆಣ್ಣು ಪಾಳಿಯಂತೆ ಕಾಯುತ್ತವೆ.

ಆಹಾರ ಹುಡುಕುವುದಕ್ಕೂ ಇದೇ ಕ್ರಮವನ್ನು ಅನುಸರಿಸುತ್ತವೆ. ಮೊಟ್ಟೆಗಳಿಗೆ ಕಾವು ಸಹ ಎರಡು ಸೇರಿ ನೀಡುತ್ತವೆ. ಮೊಟ್ಟೆಗಳು ಮರಿಯಾಗಲು ಅಂದಾಜು 20 ರಿಂದ 34 ದಿನ ತೆಗೆದುಕೊಳ್ಳುತ್ತದೆ. ಮರಿ ಪೆಂಗ್ವಿನ್‌ಗಳು ಪೋಷಕ ಪೆಂಗ್ವಿನ್‌ಗಳ ಕಾಲುಗಳ ಮೇಲೆ ಆಶ್ರಯ ಪಡೆದು ಬೆಳೆಯುತ್ತವೆ. ಸಮುದ್ರ ಪಕ್ಷಿಗಳು, ಬಾವಲಿಗಳಿಂದ ಮೊಟ್ಟೆಗಳನ್ನು ರಕ್ಷಿಸಲು ಪೋಷಕ ಪೆಂಗ್ವಿನ್‌ಗಳು ಸದಾ ಜಾಗರೂಕವಾಗಿರುತ್ತವೆ.

**

ದೇಹದ ತೂಕ:3.6 ರಿಂದ 5.9 ಕೆ.ಜಿ

ಜೀವಿತಾವಧಿ:20 ರಿಂದ 25 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT