ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಲ್ಲಿ ಕೀನ್ಯಾದ ವನ್ಯಜೀವಿ ಲೋಕ...

Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್‌ಗೆ ಇತ್ತೀಚೆಗಷ್ಟೇ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ. ಕರ್ನಾಟಕದಲ್ಲಿ ಛಾಯಾಚಿತ್ರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಶಾರುಖ್ ಆಸ್ಕರಿ ಹಮೀದ್ ಅವರ ನೆನಪಿಗಾಗಿ ನೀಡುವ ಪ್ರಶಸ್ತಿ ಇದಾಗಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಛಾಯಾಗ್ರಾಹಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಲ 17 ವರ್ಷ ವಯಸ್ಸಿನ ಸಾನ್ವಿ ಅವರಿಗೆ ಲಭಿಸಿದೆ.

ತಮ್ಮ 10ನೇ ವಯಸ್ಸಿನಿಂದಲೇ ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿಕೊಂಡ ಸಾನ್ವಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಹವ್ಯಾಸಿ ಛಾಯಾಗ್ರಹಣ ಪ್ರಾರಂಭಿಸಿದರು. ಬಂಡಿಪುರ ಮತ್ತು ಕಬಿನಿ ಸುತ್ತಲಿನ ವನ್ಯಜೀವಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಪಿಯುಸಿ ಓದುತ್ತಿರುವ ಸಾನ್ವಿ ಸೆರೆ ಹಿಡಿದ ಚಿತ್ರಗಳಿಗೆ ಯುವ ವಿಭಾಗದಡಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ತಮ್ಮ 12ನೇ ವಯಸ್ಸಿನಲ್ಲಿಯೇ ಕೀನ್ಯಾದ ಮಸಾಯ್‌ ಮಾರಗೆ ಭೇಟಿ ನೀಡಿ, ವನ್ಯಜೀವಿಗಳ ಚಿತ್ರ ಸೆರೆ ಹಿಡಿದು ಕೆಲ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ನಾಮ ನಿರ್ದೇಶನಗೊಂಡರು.

ಸದ್ಯ ಆಫ್ರಿಕದ ವನ್ಯ ಜೀವಿ ಜಗತ್ತನ್ನು ಬೆನ್ನತ್ತಿರುವ ಸಾನ್ವಿ, ಅಲ್ಲಿನ ನಕುರು, ಅಂಬೊಸೊಲಿ ಮತ್ತು ಮಸಾಯ್‌ ಮಾರಗಳಲ್ಲಿ ಸೆರೆ ಹಿಡಿದ ಒಂದಷ್ಟು ವನ್ಯಜೀವಿಗಳ ಚಿತ್ರಗಳು ಇಲ್ಲಿವೆ...

ಅಂಬೊಸಲಿಯಲ್ಲಿನ ಅತ್ಯಂತ ಹಳೆಯ ಮತ್ತು ಎತ್ತರದ ಆನೆ
ಅಂಬೊಸಲಿಯಲ್ಲಿನ ಅತ್ಯಂತ ಹಳೆಯ ಮತ್ತು ಎತ್ತರದ ಆನೆ
ಚಿರತೆ
ಚಿರತೆ
ಆನೆಗಳು
ಆನೆಗಳು
ಮಸಾಯ್‌ ಮಾರದಲ್ಲಿನ ರಿಯಾಸಿ ಮತ್ತು ಅದರ ಮಕ್ಕಳು
ಮಸಾಯ್‌ ಮಾರದಲ್ಲಿನ ರಿಯಾಸಿ ಮತ್ತು ಅದರ ಮಕ್ಕಳು
ಮಸಾಯ್‌ ಮಾರದಲ್ಲಿ ಸಿಂಹ ಘರ್ಜನೆ
ಮಸಾಯ್‌ ಮಾರದಲ್ಲಿ ಸಿಂಹ ಘರ್ಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT