ಭಾನುವಾರ, ಅಕ್ಟೋಬರ್ 25, 2020
22 °C

16 ವಲಯಗಳಲ್ಲಿ ಸಾವಿರಾರು ಪ್ರಾಣಿಗಳ ಮಾದರಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಕೋವಿಡ್‌ ನಿರ್ಬಂಧಗಳ ಮಧ್ಯೆಯೂ ದೇಶದ 16 ವಲಯಗಳಿಂದ ಸಾವಿರಾರು ಪ್ರಾಣಿಗಳ ಮಾದರಿಯನ್ನು ‘ಜೂವಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ’ ವಿಜ್ಞಾನಿಗಳು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

ಸಂಗ್ರಹಿಸಲಾದ ಪ್ರಾಣಿಗಳ ಮಾದರಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ಸೇರಿ 16 ಪ್ರದೇಶಗಳಿಂದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿವಿಧ ‍ಪ್ರಭೇಧಗಳ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದ್ದೇವೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಮಾದರಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಝೆಡ್ಎಸ್‌ಐ ನಿರ್ದೇಶಕ ಕೈಲಾಶ್‌ ಚಂದ್ರ ಅವರು ಮಾಹಿತಿ ನೀಡಿದರು.

ಲಾಕ್‌ಡೌನ್ ವೇಳೆಯಲ್ಲಿ ಝೆಡ್ಎಸ್‌ಐ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರಲಿಲ್ಲ.  104 ವರ್ಷಗಳಲ್ಲಿ ಒಮ್ಮೆಯೂ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸದಂತ ಪರಿಸ್ಥಿತಿ ಬಂದಿಲ್ಲ. ಈ ವರ್ಷ ಲಾಕ್‌ಡೌನ್‌ ಮಧ್ಯೆಯೇ ಈ ಕಾರ್ಯ ನಡೆಸಿದೆವು ಎಂದು ಹೇಳಿದರು.

ಝೆಡ್‌ಎಸ್‌ಐ 1916 ರಿಂದ ವಿವಿಧ ಪ್ರಾಣಿಗಳು ಮತ್ತು ದೇಶದಲ್ಲಿ ಅವುಗಳ ಹಂಚಿಕೆ ಬಗೆಗಿನ ಮಾಹಿತಿಯನ್ನು ದಾಖಲೀಕರಣ ಮಾಡುತ್ತಿದ್ದೇವೆ. 2020 ರಲ್ಲಿ ಸಂಗ್ರಹಿಸಿದ ವಿವಿಧ ಪ್ರಾಣಿಗಳ ಮಾದರಿಗಳ ದಾಖಲೆಗಳನ್ನು ಮುಂದಿನ ವರ್ಷ ಪ್ರಕಟಿಸಲಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು