ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಪರಿಸರ ಸ್ನೇಹಿ ಕ್ಯಾಲೆಂಡರ್‌

Last Updated 5 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕು. ಹಾಗೇ ಗೋಡೆ ಮೇಲಿದ್ದ ಕ್ಯಾಲೆಂಡರ್‌ ಕೂಡ ಮೂಲೆ ಸೇರಿ, ಹೊಸ ಕ್ಯಾಲೆಂಡರ್‌ನ್ನು ಅಲ್ಲಿ ತೂಗಿ ಹಾಕಬೇಕು. ಸೀಡ್‌ ಪೇಪರ್‌ ಇಂಡಿಯಾ ಸಂಸ್ಥೆಯು ಪರಿಸರ ಸ್ನೇಹಿ ಕ್ಯಾಲೆಂಡರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ನಮೂನೆಯ ಈ ಕ್ಯಾಲೆಂಡರ್‌ನ ಪ್ರತಿ ಹಾಳೆಯಲ್ಲಿ ಬೇರೆ ಬೇರೆ ತರಹದ ಬೀಜಗಳಿವೆ.ಜನವರಿ ತಿಂಗಳ ಹಾಳೆಯಲ್ಲಿ ತುಳಸಿ, ಫೆಬ್ರವರಿಗೆ ಮಾರ್ನಿಂಗ್ ಗ್ಲೋರಿ ಹೂ ಗಿಡದ ಬೀಜ, ಮಾರ್ಚ್ ತಿಂಗಳಿಗೆ ಡೈಸಿ ವೈಟ್, ಏಪ್ರಿಲ್‍ಗೆ ಚೆಂಡು ಹೂ...ಹೀಗೆ ಬೇರೆ ಬೇರೆ ಹೂವುಗಳಿವೆ.

ಮುಂದಿನ ಹಾಳೆಗಳಲ್ಲಿ ಟೊಮ್ಯಾಟೊ, ಕೊತ್ತಂಬರಿ, ಮೆಣಸಿನಕಾಯಿ, ಬಸಳೆಸೊಪ್ಪು, ಮೆಂತ್ಯ, ಬದನೆಕಾಯಿ, ಕ್ಯಾರೆಟ್‌ ಬೀಜಗಳನ್ನು ಹೊಂದಿದೆ. ತಿಂಗಳ ನಂತರ ಆ ಹಾಳೆಯನ್ನು ಕಿತ್ತು, ಮಣ್ಣಿಗೆ ಎಸೆದರೆ ಅದರಲ್ಲಿನ ಬೀಜಗಳು ಮೊಳಕೆಯೊಡೆಯುತ್ತವೆ.

ಪರಿಸರಸ್ನೇಹಿ ಪ್ಲಾಂಟೇಬಲ್ ಸೀಡ್ ಪೇಪರ್ ಕ್ಯಾಲೆಂಡರ್‌ ನಾಲ್ಕು ಬಗೆಗಳಲ್ಲಿ ಲಭ್ಯ. ಪ್ರತಿ ಪ್ಯಾಕೇಜ್‍ನಲ್ಲಿ ಸೀಡ್ ಪೆನ್ಸಿಲ್‍, ಸೀಡ್ ಪೆನ್‍, ಥ್ಯಾಂಕ್ಯೂ ಕಾರ್ಡ್‌ ಮತ್ತು ಹ್ಯಾಂಡ್‍ಮೇಡ್ ಬಾಕ್ಸ್‌ ಲಭ್ಯ.

‘ಪುನಃ ಬಳಸಬಹುದಾದ ವಸ್ತುಗಳಿಂದ ಈ ಕ್ಯಾಲೆಂಡರ್‌ ರೂಪಿಸಲಾಗಿದೆ. ಕ್ಯಾಲೆಂಡರ್‌ ಕಾಗದದ ಹಾಳೆಯನ್ನು ನೆಲದಲ್ಲಿ ಬಿತ್ತಿದರೆ ಅದರಿಂದ ಚಿಕ್ಕ ಗಿಡಗಳು ಮೊಳಕೆಯೊಡೆಯುತ್ತವೆ’ ಎಂದು ಹೇಳುತ್ತಾರೆ ಸೀಡ್ ಪೇಪರ್ ಇಂಡಿಯಾದ ಸ್ಥಾಪಕ ರೋಷನ್ ರೇ.

ಈ ಕ್ಯಾಲೆಂಡರ್‌ ಬೆಲೆ ₹150ರಿಂದ ಆರಂಭ

ಆನ್‌ಲೈನ್‌ ಖರೀದಿಗೆ–https://www.seedpaperindia.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT