ಭಾರತದಲ್ಲಿ ಮೂರು ಕೋಟಿಗೂ ಅಧಿಕ ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ (ಒಎಎಸ್) ಮಕ್ಕಳಿದ್ದಾರೆ. ಇವರಲ್ಲಿ ಹೆಚ್ಚಿನವರು ಹೆತ್ತವರಿಗೆ ಬೇಡವಾದವರು; ಕೆಲವರು ಹೆತ್ತವರನ್ನು ಕಳೆದುಕೊಂಡವರು. ವಿವಿಧ ಕಾರಣಗಳಿಂದ ಪೋಷಕರು, ಬಂಧುಬಳಗದಿಂದ ದೂರವಾದ ಇಂಥ ಮಕ್ಕಳು ಒಂದೆಡೆ ಇದ್ದರೆ, ಮಕ್ಕಳನ್ನು ದತ್ತು ಸ್ವೀಕಾರ ಮಾಡಲು ಸಿದ್ಧವಾಗಿರುವ ಪೋಷಕರು ಮತ್ತೊಂದೆಡೆ ಇದ್ದಾರೆ. ಆದರೆ, ಭಾರತದಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆ ಸಂಕೀರ್ಣವಾಗಿದೆ. ಮಗು ದತ್ತು ಪಡೆಯಲು ಮೂರು ವರ್ಷಕ್ಕಿಂತಲೂ ಹೆಚ್ಚು ಕಾಯಬೇಕಿದೆ. ಇದು ಪೋಷಕರು ಕಾನೂನುಬಾಹಿರವಾಗಿ ದತ್ತು ಪಡೆಯಲು ಮತ್ತು ದತ್ತು ನಿರ್ಧಾರದಿಂದ ಹಿಂದೆ ಸರಿಯಲು ಕಾರಣವಾಗುತ್ತಿದೆ...

ಮಕ್ಕಳನ್ನು ದತ್ತು ಪಡೆಯುವ ವಿಚಾರದಲ್ಲಿ ದೇಶದ ಜನರ ಮನೋಭಾವ ಸಾಕಷ್ಟು ಬದಲಾಗಿದೆ. ವೈದ್ಯಕೀಯ ಕಾರಣಗಳಿಂದ ಮಕ್ಕಳಾಗದೇ ಇರುವ ದಂಪತಿ ಅಷ್ಟೇ ಅಲ್ಲದೇ, ಮಕ್ಕಳು ಹೊಂದಲು ಇಚ್ಛಿಸದೇ ಇರುವವರು, ಅನಾಥ ಮಕ್ಕಳಿಗೆ ಬದುಕು ಕೊಡಲು ಬಯಸುವವರು ಹೀಗೆ ಅನೇಕರು ಮಕ್ಕಳನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ. ಆದರೆ, ಭಾರತದಲ್ಲಿ ಕೋಟ್ಯಂತರ ಮಕ್ಕಳು ನಿರ್ಗತಿಕರಾಗಿದ್ದರೂ ಕಾನೂನು ಪ್ರಕ್ರಿಯೆಯ ತೊಡಕು ಮತ್ತು ಸಂಕೀರ್ಣತೆಯಿಂದ ಅನೇಕ ಪೋಷಕರಿಗೆ ಮಕ್ಕಳನ್ನು ದತ್ತು ಪಡೆಯಲು ಸಾಧ್ಯವಾಗುತ್ತಿಲ್ಲ.

ತಂದೆ–ತಾಯಿ, ಬಂಧು ಬಳಗದಿಂದ ದೂರವಾದ, ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಕ್ಕಳನ್ನು ದತ್ತು ನೀಡುವ ಪದ್ಧತಿ ದೇಶದಲ್ಲಿ ಚಾಲ್ತಿಯಲ್ಲಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ 3 ಕೋಟಿ ಅನಾಥ ಮಕ್ಕಳಿದ್ದಾರೆ. ದೊಡ್ಡ ಸಂಖ್ಯೆಯ ಮಕ್ಕಳು ಬಾಲಮಂದಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ದತ್ತು ಸ್ವೀಕಾರಕ್ಕೆ ಅರ್ಹರಾಗಿರುವ ಮಕ್ಕಳ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ. ದತ್ತು ಪಡೆಯಲು ನೋಂದಣಿ ಮಾಡಿಕೊಂಡಿರುವ 13 ಪೋಷಕರಿಗೆ ಒಂದು ಮಗು ಮಾತ್ರ ಲಭ್ಯವಿದೆ. ದತ್ತು ನೋಂದಣಿಗೆ ಕಾಯುತ್ತಿರುವ ಪೋಷಕರಲ್ಲಿ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ದತ್ತು ಸ್ವೀಕಾರದಲ್ಲಿ ಹೆಚ್ಚಳ: ಭಾರತದಲ್ಲಿ ಕಳೆದೊಂದು ದಶಕದಲ್ಲಿ ದತ್ತು ಸ್ವೀಕಾರದ ಪ್ರಮಾಣ ಹೆಚ್ಚಾಗಿದೆ.

2024–25ರಲ್ಲಿ 4,515 ಮಕ್ಕಳನ್ನು ದತ್ತು (ಸ್ವದೇಶಿ ಮತ್ತು ವಿದೇಶಿ ಪೋಷಕರಿಗೆ) ನೀಡಲಾಗಿದ್ದು, 2015ರ ಬಳಿಕ ಇದು ಅತಿ ದೊಡ್ಡ ಸಂಖ್ಯೆಯಾಗಿದೆ. ಕೋವಿಡ್ ಕಾಲದಲ್ಲಿ ದತ್ತು ಸ್ವೀಕಾರದ ಸಂಖ್ಯೆ ಇಳಿಮುಖವಾಗಿತ್ತು. ಅದರ ನಂತರ ಮತ್ತೆ ಏರುಗತಿಯಲ್ಲಿ ಸಾಗಿದೆ.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ) ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯ ನಿರ್ವಹಣೆ ಮಾಡುತ್ತದೆ. ಸಿಎಆರ್ಎ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯಾಗಿದ್ದು, ಕಾನೂನು ಸಂಬಂಧಿ ಪ್ರಕ್ರಿಯೆ ನಡೆಸಲು ಇದನ್ನು ರೂಪಿಸಲಾಗಿದೆ. ಪ್ರತಿ ರಾಜ್ಯದಲ್ಲಿಯೂ ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆ (ಎಸ್ಎಆರ್ಎ) ಇದೆ. ಇವುಗಳ ಮೂಲಕವೇ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಪ್ರತಿ ಪ್ರಕ್ರಿಯೆಯೂ ನಡೆಯುತ್ತದೆ. ಮಗು ದತ್ತು ಪಡೆಯಲು ಬಯಸುವ ಪೋಷಕರು ಸಿಎಆರ್ಎ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಯಾವುದೇ ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಗು ದತ್ತು ನೀಡಲು ಅರ್ಹ ಎಂದು ಕಾನೂನು ಅನ್ವಯ ಘೋಷಣೆಯಾಗಬೇಕು. ಹೀಗೆ ಕಾನೂನಿನ ಸಮ್ಮತಿ ಪಡೆದ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಅದಕ್ಕೆ ಹಲವು ಕಾರಣಗಳು.

ಸಂಕೀರ್ಣ, ದೀರ್ಘ ಪ್ರಕ್ರಿಯೆ: ಒಂದು ಮಗು ದತ್ತು ಸ್ವೀಕಾರಕ್ಕೆ ಅರ್ಹ ಎಂದು ಪರಿಗಣಿಸಬೇಕಾದರೆ, ಆ ಮಗುವಿಗೆ ಪೋಷಕ/ಪರ್ಯಾಯ ಪೋಷಕ ಇಲ್ಲ ಎನ್ನುವುದು ಮೊದಲು ಸ್ಪಷ್ಟವಾಗಬೇಕು. ಅದನ್ನು ಪತ್ತೆ ಹಚ್ಚುವ ಜವಾಬ್ದಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (ಡಿಸಿಪಿಯು) ಮತ್ತು ಮಕ್ಕಳ ಕಲ್ಯಾಣ ಸಮಿತಿಗಳದ್ದು (ಸಿಡಬ್ಲ್ಯುಸಿ). ಪೊಲೀಸ್ ತನಿಖೆ, ಸಾಮಾಜಿಕ ಹಿನ್ನೆಲೆಯ ಪರಿಶೀಲನೆ ಮತ್ತು ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಮಗುವಿನ ಕುಟುಂಬದ,ಪೋಷಕರು, ಸಂಬಂಧಿಗಳ ಹುಡುಕಾಟ ನಡೆಸಲಾಗುತ್ತದೆ. ದತ್ತು ಪ್ರಕ್ರಿಯೆಯಲ್ಲಿ ಈ ಹಂತದಲ್ಲಿಯೇ ಹೆಚ್ಚು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ದತ್ತು ಸಂಬಂಧದ ಕಾನೂನು ಮತ್ತು ಆರೋಗ್ಯ ಪರೀಕ್ಷೆಯ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ (ಡಿಎಂ) ಮತ್ತು ಮುಖ್ಯ ಆರೋಗ್ಯಾಧಿಕಾರಿ (ಸಿಎಂಒ) ನಿರ್ವಹಿಸುತ್ತಾರೆ. ರಾಜ್ಯಗಳ ಮಟ್ಟದಲ್ಲಿ ಇವುಗಳ ನಡುವೆ ಸಮನ್ವಯಕ್ಕಾಗಿ ವಿಶೇಷ ದತ್ತು ಸಂಸ್ಥೆಗಳು (ಎಸ್ಎಎ) ಇರುತ್ತವೆ. ಕರ್ನಾಟಕದ 31 ಜಿಲ್ಲೆಗಳಲ್ಲಿ 42 ವಿಶೇಷ ದತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಕ್ರಿಯೆಯಲ್ಲಿ ಹಲವು ಸಮಿತಿ/ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಕರ್ತವ್ಯ ಮತ್ತು ಉತ್ತರಾಧಿಕಾರದ ವಿಚಾರದಲ್ಲಿ ಗೊಂದಲ, ಸಮಸ್ಯೆಗಳಿವೆ. ಕೆಲವು ಜಿಲ್ಲೆಗಳಲ್ಲಿ ವಿಶೇಷ ದತ್ತು ಸಂಸ್ಥೆಗಳು ನಿಷ್ಕ್ರಿಯವಾಗಿರುವುದರಿಂದಲೂ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಮಕ್ಕಳ ರಕ್ಷಣಾ ಕೇಂದ್ರಗಳಲ್ಲಿ (ಸಿಸಿಐ) ಲಕ್ಷಾಂತರ ಮಕ್ಕಳು ಆಶ್ರಯ ಪಡೆದಿದ್ದಾರೆ. ಮಕ್ಕಳನ್ನು ಬೆಳೆಸುವ ಸಾಮರ್ಥ್ಯ ಇಲ್ಲದ ಪೋಷಕರು, ಪೋಷಕರು/ಬಂಧುಗಳು ಇದ್ದೂ ಆರೈಕೆಯ ಸಮಸ್ಯೆ ಇರುವ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಇಂಥ ಮಗುವನ್ನು ದತ್ತು ನೀಡಬಹುದೇ ಇಲ್ಲವೇ ಎನ್ನುವುದನ್ನು ಕಂಡುಕೊಳ್ಳುವುದೇ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಹಲವು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಒಂದು ವೇಳೆ ಪೋಷಕರು ಜೀವಂತವಿದ್ದು, ಮಗುವನ್ನು ತೊರೆದಿದ್ದರೆ, ಮಗುವನ್ನು ಪುನಃ ಸ್ವೀಕರಿಸಲು ಅವರಿಗೆ ಸಮಯ ನೀಡಲಾಗುತ್ತದೆ. ಈ ರೀತಿಯ ತೊಡಕುಗಳಿಂದಾಗಿ ಇಂಥ ಮಕ್ಕಳ ಪೈಕಿ ಪ್ರಸ್ತುತ 2,756 ಮಕ್ಕಳು ಮಾತ್ರ ದತ್ತು ಸ್ವೀಕಾರಕ್ಕೆ ಅರ್ಹರಾಗಿದ್ದಾರೆ.

ಪಾಲನೆಯಾಗದ ನಿಯಮ: ಈ ಹಿಂದೆ ನ್ಯಾಯಾಲಯಗಳು ದತ್ತು ಆದೇಶವನ್ನು ನೀಡುತ್ತಿದ್ದವು. ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಆ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಜತೆಗೆ, ದತ್ತು ಸಂಬಂಧ ದಾಖಲಾಗುವ ಪ್ರಕರಣವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯವಾದ ಕ್ರಮ ಕೈಗೊಳ್ಳಲು ವಿಶೇಷ ವ್ಯವಸ್ಥೆ ರೂಪಿಸಲಾಯಿತು. ಒಂದೊಂದು ಪ್ರಕ್ರಿಯೆಗೆ ಇಂತಿಷ್ಟು ಅವಧಿ ಎಂದು ನಿಗದಿಪಡಿಸಲಾಯಿತು. ಆದರೂ ನಿಯಮಗಳು ಪಾಲನೆಯಾಗುತ್ತಿಲ್ಲ. ಪ್ರಕ್ರಿಯೆಯಲ್ಲಿ ಹಲವು ಸಂಸ್ಥೆಗಳು ಭಾಗಿಯಾಗಿರುವುದರಿಂದ ಯಾವ ಸಂಸ್ಥೆಯನ್ನು ಹೊಣೆ ಮಾಡಬೇಕೆನ್ನುವುದೇ ಗೊಂದಲದ ವಿಚಾರವಾಗಿದೆ.

ದತ್ತು ಸ್ವೀಕಾರಕ್ಕೆ ಹೆಚ್ಚು ಪೋಷಕರು ನೋಂದಣಿ ಮಾಡಿಕೊಳ್ಳುವುದು, ಅವರಿಗೆ ಕಡಿಮೆ ಮಕ್ಕಳು ಲಭ್ಯ ಇರುವುದನ್ನು ಕೇಂದ್ರ ಸರ್ಕಾರದ ಸಂಸದೀಯ ಸಮಿತಿಯು (2022) ‘ವೈರುಧ್ಯದ ಪರಿಸ್ಥಿತಿ’ ಎಂದು ವಿಶ್ಲೇಷಿಸಿದೆ. ದತ್ತು ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಎರಡು ಕಾಯ್ದೆ, ಎರಡು ವಿಧಾನ

ಬಾಲನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ಬಾಲನ್ಯಾಯ (ತಿದ್ದುಪಡಿ) ಕಾಯ್ದೆ (2021) ಮತ್ತು ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ–1956 (ಎಚ್ಎಎಂಎ) – ಈ ಕಾಯ್ದೆಗಳಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ವಿಭಿನ್ನ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಸಿಎಆರ್ಎ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದತ್ತು ಸ್ವೀಕಾರಕ್ಕೆ ಅರ್ಹವಾದ ಮಗುವನ್ನು ನಿಗದಿತ ಪ್ರಕ್ರಿಯೆ ಮೂಲಕ ದತ್ತು ಪಡೆಯಬಹುದು. ಆದರೆ, ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ–1956 (ಎಚ್ಎಎಂಎ) ಅಡಿ ಸಿಎಆರ್ಎ ಅನ್ನು ಪರಿಗಣಿಸದೆಯೇ ದತ್ತು ಸ್ವೀಕಾರ ಮಾಡಲಾಗುತ್ತಿದೆ. ಈ ಕಾಯ್ದೆಯ ಪ್ರಕಾರ, ದತ್ತು ಸ್ವೀಕಾರ ಎನ್ನುವುದು ವೈಯಕ್ತಿಕ ಕಾರ್ಯವಾಗಿದ್ದು, ಅದಕ್ಕೆ ಸಿಎಆರ್ಎನಂಥ ಕೇಂದ್ರೀಕೃತ ಸಂಸ್ಥೆಯ ಅನುಮತಿ ಅಗತ್ಯವಿಲ್ಲ. ಹಿಂದೂ ವಯಸ್ಕನೊಬ್ಬ ಸರಳ ಕಾನೂನು ಪ್ರಕ್ರಿಯೆ ಮೂಲಕ ಮಗುವನ್ನು ದತ್ತು ಪಡೆಯಬಹುದಾಗಿದೆ. ಆದರೆ, ಇವು ಸಿಎಆರ್ಎ ಚೌಕಟ್ಟಿನ ಹೊರಗೆ ನಡೆಯುತ್ತಿದ್ದು, ಹಲವು ಲೋಪಗಳಿಂದ ಕೂಡಿವೆ. ಜತೆಗೆ, ದತ್ತಾಂಶ ಸಂಗ್ರಹಣೆಗೂ ಇದರಿಂದ ತೊಡಕುಂಟಾಗುತ್ತಿದೆ ಎನ್ನುವ ಅಭಿಪ್ರಾಯವಿದೆ. ಸಿಎಆರ್ಎಯಲ್ಲಿ ನಿರ್ವಹಣೆಯ ಸಮಸ್ಯೆ ಇದ್ದರೆ, ಎಚ್ಎಎಂಎ ಅಡಿ ನಡೆಯುತ್ತಿರುವ ದತ್ತು ಸ್ವೀಕಾರದಲ್ಲಿ ನಿಯಂತ್ರಣದ ಕೊರತೆ ಇದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದ ಸಂಸದೀಯ ಸಮಿತಿಯ ಶಿಫಾರಸುಗಳು

l ಜಿಲ್ಲಾವಾರು ಸಮೀಕ್ಷೆ ಮೂಲಕ ಅನಾಥ, ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳ ನಿಖರ ಸಂಖ್ಯೆ ತಿಳಿಯುವುದು ಮತ್ತು ಅದನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದು

l ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳನ್ನು ಹುಡುಕಿ, ಅವರನ್ನು ದತ್ತು ಸ್ವೀಕಾರಕ್ಕೆ ಅರ್ಹರನ್ನಾಗಿಸುವುದು

l ಎಚ್ಎಎಂಎ ಕಾಯ್ದೆ ಅಡಿಯಲ್ಲಿ ದತ್ತು ಪ್ರಕ್ರಿಯೆ ಸರಳವಾಗಿದೆ. ಬಾಲನ್ಯಾಯ ಕಾಯ್ದೆಯು ಪಾರದರ್ಶಕವಾದ, ಉತ್ತರದಾಯಿತ್ವ ಇರುವ ಪ್ರಕ್ರಿಯೆಯಾಗಿದೆ. ಆದರೆ, ಹೆಚ್ಚು ಸಮಯ ಬೇಡುವ ಸಂಕೀರ್ಣ ಪ್ರಕ್ರಿಯೆಯಾಗಿದೆ. ಇವೆರಡರ ಅಂಶಗಳನ್ನು ಸೇರಿಸಿ ಸಮಗ್ರವಾದ ಹೊಸ ಕಾಯ್ದೆ ರೂಪಿಸುವುದು. ಎಚ್ಎಎಂಎ ಅಡಿ ದತ್ತು ಸ್ವೀಕಾರ ಮಾಡಿದ ಮಕ್ಕಳ ದತ್ತಾಂಶವನ್ನೂ ಸಿಎಆರ್ಎ ಒಳಗೊಳ್ಳಬೇಕು

l ಹೊಸ ಕಾಯ್ದೆಯಿಂದ ಅಕ್ರಮ ಸಂತಾನ ಎನ್ನುವ ಪದವನ್ನು ತೆಗೆದುಹಾಕುವುದು. ಯಾವ ಮಗುವೂ ಅಕ್ರಮ ಅಲ್ಲ. ಮದುವೆ ಮೂಲಕ ಅಥವಾ ಮದುವೆ ಆಗದೆ ಹುಟ್ಟಿದ ಮಕ್ಕಳಿಗೆ ಒಂದೇ ರೀತಿಯ ದತ್ತು ಪ್ರಕ್ರಿಯೆ ಅನುಸರಿಸುವುದು. ಮದುವೆಯಾದ, ಏಕಪೋಷಕ ಪುರುಷ, ಏಕಪೋಷಕ ಮಹಿಳೆಯ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೂ ದತ್ತು ಸ್ವೀಕಾರದ ಅವಕಾಶ ನೀಡಬೇಕು

l 18ನೇ ವರ್ಷದವರೆಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇರಬೇಕು. ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಿರುವ ಪುರುಷರು ಮತ್ತು ಮಹಿಳೆಯರು ತಮ್ಮದೇ ಲಿಂಗದವರನ್ನು ದತ್ತು ಪಡೆಯಲು ಸಾಧ್ಯವಾಗಬೇಕು. ದತ್ತು ಸ್ವೀಕಾರವಾಗುವ ಮಗು ಮತ್ತು ಅದನ್ನು ದತ್ತು ಪಡೆಯುವವರ ನಡುವೆ ಕನಿಷ್ಠ 25 ವರ್ಷಗಳ ಅಂತರವಿರಬೇಕು

l ಮಗುವಿಗೆ, ಅದನ್ನು ದತ್ತು ಸ್ವೀಕರಿಸಿದ ಪೋಷಕರ ಆಸ್ತಿಯಲ್ಲಿ ಪಾಲು ಸಿಗಬೇಕು

l ದತ್ತು ಸ್ವೀಕಾರ ಮಾಡಿದ ನಂತರ ಆ ಮಗುವಿನ ಸ್ಥಿತಿಗತಿಗಳನ್ನು ಅವಲೋಕಿಸುತ್ತಿರಬೇಕು

ಆಧಾರ: ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ, ಪಿಟಿಐ, ರಾಜ್ಯಸಭೆಯ ‘ರಿವ್ಯೂ ಆಫ್ ಗಾರ್ಡಿಯನ್ಶಿಪ್ ಆ್ಯಂಡ್ ಅಡಾಪ್ಶನ್ ಲಾಸ್’ ವರದಿ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.