ಗುರುವಾರ, 3 ಜುಲೈ 2025
×
ADVERTISEMENT
ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು
ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು
ಎಡಿಆರ್‌ನಿಂದ ದೇಶದ 4,092 ಶಾಸಕರ ಆಸ್ತಿ, ಕ್ರಿಮಿನಲ್ ಪ್ರಕರಣಗಳ ವಿಶ್ಲೇಷಣೆ
ಫಾಲೋ ಮಾಡಿ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
Comments
ದೇಶದ ಅತ್ಯಂತ ಶ್ರೀಮಂತ 10 ಶಾಸಕರ ಪೈಕಿ ಕರ್ನಾಟಕದ ನಾಲ್ವರು ಇದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಕನಕಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿರಿವಂತ ಶಾಸಕರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ ₹1,413 ಕೋಟಿ. ₹1,267 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಗೌರಿಬಿದನೂರಿನ ಕಾಂಗ್ರೆಸ್‌ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಿಂದ ಗೆದ್ದಿರುವ ಪ್ರಿಯಕೃಷ್ಣ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿವ ಭೈರತಿ ಸುರೇಶ್‌ ದೇಶದಲ್ಲೇ 10ನೇ ಶ್ರೀಮಂತ ಶಾಸಕ. ₹3,383 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಮಹಾರಾಷ್ಟ್ರದ ಘಾಟ್‌ಕೋಪರ್‌ ಕ್ಷೇತ್ರದ ಪರಾಗ್‌ ಶಾ (ಬಿಜೆಪಿ) ಅವರು ರಾಷ್ಟ್ರದ ಅತೀ ಶ್ರೀಮಂತ ಶಾಸಕ.
ಶೇ 45 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ 
4092 ಶಾಸಕರ ಪೈಕಿ 1861 ಶಾಸಕರು (ಶೇ 45) ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. 1,205 ಶಾಸಕರು (ಶೇ 29) ಗಂಭೀರ ಕ್ರಿಮಿನಲ್ ಪ್ರಕರಣ (ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧ) ಎದುರಿಸುತ್ತಿದ್ದಾರೆ. 
ಮಹಿಳೆಯರಿಗೆ ಇಲ್ಲ ಅಲ್ಪಪ್ರಾತಿನಿಧ್ಯ
4,092 ಶಾಸಕರ ಪೈಕಿ, 400 ಮಂದಿ (ಶೇ 10ರಷ್ಟು) ಮಹಿಳೆಯರಿದ್ದಾರೆ. ಅತಿ ಹೆಚ್ಚು ಶಾಸಕಿಯರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ 51 (ಶೇ 13) ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ 44 (ಶೇ 15) ಮತ್ತು ಬಿಹಾರ 29 (ಶೇ 12) ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಕರ್ನಾಟಕದಲ್ಲಿ 223 ಶಾಸಕರ ಪೈಕಿ 11 ಮಂದಿ (ಶೇ 5ರಷ್ಟು) ಮಹಿಳೆಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT