ಗುರುವಾರ, 3 ಜುಲೈ 2025
×
ADVERTISEMENT
ಆಳ–ಅಗಲ | ಎಚ್‌ಎಂಪಿವಿ: ಸಾಮಾನ್ಯ ಸೋಂಕು ಅಪಾಯಕಾರಿ ಅಲ್ಲ
ಆಳ–ಅಗಲ | ಎಚ್‌ಎಂಪಿವಿ: ಸಾಮಾನ್ಯ ಸೋಂಕು ಅಪಾಯಕಾರಿ ಅಲ್ಲ
ಫಾಲೋ ಮಾಡಿ
Published 6 ಜನವರಿ 2025, 23:30 IST
Last Updated 6 ಜನವರಿ 2025, 23:30 IST
Comments
ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್‌ಎಂಪಿವಿ) ಎನ್ನುವ ಈ ವೈರಾಣು ಸೋಂಕಿನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿವೆ. ಕೋವಿಡ್ ಕಾಲದ ಸಾವು–ನೋವಿನ ನೆನಪು ಇನ್ನೂ ಕಾಡುತ್ತಿರುವುದರಿಂದ ಸಹಜವಾಗಿಯೇ ಈ ವೈರಸ್ ಬಗ್ಗೆ ಹಲವು ರೀತಿಯ ವದಂತಿ ಹಬ್ಬುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಆದರೆ, ಶ್ವಾಸಕೋಶದ ಸೋಂಕನ್ನು ಉಂಟುಮಾಡುವ ಈ ವೈರಸ್‌ ಮಾರಣಾಂತಿಕ ಅಲ್ಲ, ಜನ ಆತಂಕ ಪಡುವ ಅಗತ್ಯವೇ ಇಲ್ಲ ಎಂದು ವೈದ್ಯರು ದೃಢವಾಗಿ ಹೇಳಿದ್ದಾರೆ
ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ

ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ

ರೋಗ ಪತ್ತೆ ಹೇಗೆ?
ರೋಗ ಲಕ್ಷಣಗಳ ಆಧಾರದಲ್ಲಿ ಎಚ್‌ಎಂಪಿವಿ ಸೋಂಕು ತಗುಲಿರುವುದನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಆರ್‌ಟಿ–ಪಿಸಿಆರ್‌ ಪರೀಕ್ಷೆಯ ಮೂಲಕ ಇದನ್ನು ಪತ್ತೆ ಹಚ್ಚಬಹುದು. ಉಳಿದ ಪರೀಕ್ಷೆಗಳಿಗೆ ಹೋಲಿಸಿದರೆ ಇದು ಕೊಂಚ ದುಬಾರಿ. ಆ್ಯಂಟಿಜೆನ್‌ (ಪ್ರತಿಜನಕ) ಪತ್ತೆ ಪರೀಕ್ಷೆಯ ಮೂಲಕ ಕ್ಷಿಪ್ರವಾಗಿ ಸೋಂಕು ಪತ್ತೆ ಸಾಧ್ಯ.
ವಾರದಲ್ಲಿ ಗುಣಮುಖ
ಸೌಮ್ಯ ರೂಪದ ಸೋಂಕು ತಗುಲಿದವರು ಎರಡು ಮೂರು ದಿನಗಳಿಂದ ಒಂದು ವಾರದ ಒಳಗಾಗಿ ಗುಣಮುಖರಾಗಬಹುದು. ಗಂಭೀರ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಲು ಹೆಚ್ಚು ಸಮಯ ಬೇಕಾಗಬಹುದು. ಹಾಗಿದ್ದರೂ ಕೆಮ್ಮಿನಂತಹ ಸಮಸ್ಯೆ ಪೂರ್ಣವಾಗಿ ಗುಣವಾಗಲು ದೀರ್ಘ ಸಮಯ ಬೇಕಾಗಬಹುದು.
ಸಾಂಕ್ರಾಮಿಕದ ಸಾಧ್ಯತೆ ಕ್ಷೀಣ
ಕೋವಿಡ್–19ರಂತಹ ಸಾಂಕ್ರಾಮಿಕ ಉಂಟಾಗುವುದು ಅಪರೂಪ. ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸಾಂಕ್ರಾಮಿಕಗಳು ಕಾಣಿಸಿಕೊಳ್ಳುತ್ತವೆ; ವೈರಾಣುಗಳು ತೀವ್ರಗತಿಯಲ್ಲಿ ದ್ವಿಗುಣಗೊಳ್ಳುವುದು, ಅತ್ಯಂತ ಕ್ಷಿಪ್ರವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದು, ಪ್ರದೇಶದಿಂದ ಪ್ರದೇಶಕ್ಕೆ ಹರಡುವಷ್ಟು ಸೋಂಕು ಪ್ರಬಲವಾಗಿರುವುದು ಇವೇ ಮುಂತಾದ ಕಾರಣಗಳು ಇರುತ್ತವೆ. ಆದರೆ, ಸದ್ಯ ಕಂಡುಬಂದಿರುವ ಎಚ್‌ಎಂಪಿವಿ ಇಂಥ ಲಕ್ಷಣಗಳನ್ನು ಹೊಂದಿಲ್ಲ. ಹಾಗಾಗಿ ಇದರಿಂದ ಸಾಂಕ್ರಾಮಿಕ ಉಂಟಾಗುವ ಸಾಧ್ಯತೆ ಇಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT