ಇಲ್ಲಿನ ಮಣ್ಣು ತೇವಾಂಶದಿಂದ ಕೂಡಿದ್ದು ಭೂಕುಸಿತವಾಗುತ್ತಿದೆ. ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದು ₹13 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ಕಾಮಗಾರಿಗೆ ಯೋಜನೆ ಸಿದ್ಧಪಡಿಸಲಾಗಿದೆ.
ಶ್ರೇಯಸ್ ಪಟೇಲ್ ಸಂಸದ
ಚತುಷ್ಪಥ ಕಾಮಗಾರಿ ಕಳಪೆಯಾಗಿದ್ದು ಪ್ರತಿವರ್ಷ ಸಾವು– ನೋವು ಅಪಘಾತ ಸಂಭವಿಸುತ್ತಲೇ ಇವೆ. ಮುಂದೆ ಅನಾಹುತ ಸಂಭವಿಸಿದರೆ ಅಧಿಕಾರಿಗಳ ವಿರುದ್ಧ ನಾನೇ ಪೊಲೀಸರಿಗೆ ದೂರು ನೀಡುತ್ತೇನೆ
ಸಿಮೆಂಟ್ ಮಂಜು ಸಕಲೇಶಪುರ ಶಾಸಕ
ಬಿಸಿಲೆ ಕೂಡ ಸುರಕ್ಷಿತವಲ್ಲ
ದಟ್ಟ ಕಾಡಿನ ಮಧ್ಯೆ ಇರುವ ಬಿಸಿಲೆ ಘಾಟಿಯಲ್ಲೂ ವಾಹನ ಸಂಚಾರ ಸುರಕ್ಷಿತವಾಗಿಲ್ಲ. ಇಲ್ಲೂ ಕೂಡ ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಕಳೆದ ವರ್ಷವೂ ಧರೆ ಕುಸಿದಿತ್ತು. ಈ ವರ್ಷ ಇನ್ನೂ ಅಂತಹ ಪ್ರಕರಣ ವರದಿಯಾಗಿಲ್ಲ. ಗಾಳಿ ಮಳೆಗೆ ಅಲ್ಲಲ್ಲಿ ಗಿಡಗಳು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ಶಿರಾಡಿ ಘಾಟಿ ಸಂಪಾಜೆ ಘಾಟಿಗೆ ಹೋಲಿಸಿದರೆ ಬಿಸಿಲೆ ಘಾಟಿ ರಸ್ತೆ ಕಿರಿದು. ದಟ್ಟ ಕಾಡಿನ ಮಧ್ಯ ಇರುವುದರಿಂದ ವಾಹನಗಳ ಸಂಚಾರವೂ ಕಡಿಮೆ. ಮಳೆ ಶುರುವಾದರೆ ಬಿಸಿಲೆ ಘಾಟಿಯ ಮೂಲಕ ಸಂಚರಿಸುವುದಕ್ಕೆ ಬಹುತೇಕ ಜನರು ಹಿಂಜರಿಯುತ್ತಾರೆ.