ಮಂಗಳವಾರ, 8 ಜುಲೈ 2025
×
ADVERTISEMENT
ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು
ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು
ಫಾಲೋ ಮಾಡಿ
Published 25 ಜೂನ್ 2025, 0:11 IST
Last Updated 25 ಜೂನ್ 2025, 0:11 IST
Comments
1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಬದುಕುತ್ತಿದ್ದ ಜನರು ಒಮ್ಮೆಗೇ ಸರ್ವಾಧಿಕಾರಿ ಆಡಳಿತದ ಕರಾಳ ರೂಪ ಕಂಡು ಬೆಚ್ಚಿಬಿದ್ದಿದ್ದರು. ಅವರ ಹಕ್ಕುಗಳು, ಅಭಿವ್ಯಕ್ತಿ, ಮಾಧ್ಯಮಗಳು ಎಲ್ಲವೂ ದಮನಕ್ಕೊಳಗಾಗಿದ್ದವು. ತುರ್ತು ಪರಿಸ್ಥಿತಿಯು ಒಂದು ರಾಜಕೀಯ ವಿದ್ಯಮಾನವಾಗಿ, ನಿರಂಕುಶ ಪ್ರಭುತ್ವದ ನೆನಪಾಗಿ, ಒಂದು ಎಚ್ಚರವಾಗಿ ಜನರ ಸ್ಮೃತಿಯಲ್ಲಿ ದಾಖಲಾಗಿದೆ. 21 ತಿಂಗಳು ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ನಡೆದು ಬಂದ ಹಾದಿ ಇಲ್ಲಿದೆ
ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ಸಾಹಿತಿಗಳು ಕಲಾವಿದರು ಮತ್ತು ಜನತಾ ಪಕ್ಷದ ಬೆಂಬಲಿಗರು ಬೆಂಗಳೂರಿನಲ್ಲಿ 1977ರ ಮಾರ್ಚ್‌ 14ರಂದು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್‌

ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ಸಾಹಿತಿಗಳು ಕಲಾವಿದರು ಮತ್ತು ಜನತಾ ಪಕ್ಷದ ಬೆಂಬಲಿಗರು ಬೆಂಗಳೂರಿನಲ್ಲಿ 1977ರ ಮಾರ್ಚ್‌ 14ರಂದು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್‌

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾದ ಸುದ್ದಿಯು 1975ರ ಜೂನ್‌ 27ರ ‘ಪ್ರಜಾವಾಣಿ’ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾದ ಸುದ್ದಿಯು 1975ರ ಜೂನ್‌ 27ರ ‘ಪ್ರಜಾವಾಣಿ’ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು

ಇಂದಿರಾ ಗಾಂಧಿ ಅವರ ನಿರ್ಧಾರದ ಪರವಾಗಿ ಅವರ ಬೆಂಬಲಿಗರು 1975ರ ಜುಲೈ 24ರಂದು ಬೆಂಗಳೂರಿನಲ್ಲಿ ಬೃಹತ್‌ ರ‍್ಯಾಲಿ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್‌

ಇಂದಿರಾ ಗಾಂಧಿ ಅವರ ನಿರ್ಧಾರದ ಪರವಾಗಿ ಅವರ ಬೆಂಬಲಿಗರು 1975ರ ಜುಲೈ 24ರಂದು ಬೆಂಗಳೂರಿನಲ್ಲಿ ಬೃಹತ್‌ ರ‍್ಯಾಲಿ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್‌

ತುರ್ತು ಪರಿಸ್ಥಿತಿ ಖಂಡಿಸಿ 'ಪ್ರಜಾವಾಣಿ'ಯು ಸಂಪಾದಕೀಯಕ್ಕೆ ಮೀಸಲಾಗಿದ್ದ ಜಾಗವನ್ನು ಖಾಲಿ ಬಿಟ್ಟು ಪ್ರತಿಭಟಿಸಿತ್ತು.

ತುರ್ತು ಪರಿಸ್ಥಿತಿ ಖಂಡಿಸಿ 'ಪ್ರಜಾವಾಣಿ'ಯು ಸಂಪಾದಕೀಯಕ್ಕೆ ಮೀಸಲಾಗಿದ್ದ ಜಾಗವನ್ನು ಖಾಲಿ ಬಿಟ್ಟು ಪ್ರತಿಭಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT