ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬು ಅರೆಯುವಿಕೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಎಫ್ಆರ್ಪಿ ದರವನ್ನು ನಿಗದಿ ಪಡಿಸಿದೆ. ಅದರ ಆಧಾರದಲ್ಲಿ ರಾಜ್ಯದಲ್ಲೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಕಾರ್ಖಾನೆವಾರು ಎಫ್ಆರ್ಪಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ, ನಿಗದಿತ ದರವನ್ನು ನೀಡಲು ಕಾರ್ಖಾನೆಗಳು ಹಿಂದೆ ಮುಂದೆ ನೋಡುತ್ತಿವೆ. ನಷ್ಟವನ್ನು ತಪ್ಪಿಸುವುದಕ್ಕಾಗಿ ರಾಜ್ಯದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ, ಚಾಮರಾಜನಗರದ ಜಿಲ್ಲೆಯ ಬೆಳೆಗಾರರರು, ಉತ್ತಮ ದರ ನೀಡುತ್ತಿರುವ ನೆರೆ ರಾಜ್ಯಗಳ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ

ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್ಆರ್ಪಿ) ಆಧಾರದಲ್ಲಿ ರಾಜ್ಯದಲ್ಲಿ ಬೆಲೆ ನಿಗದಿ ಮಾಡಲಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡಲು ಮುಂದಾಗಿವೆ. ಈ ಕಾರಣಕ್ಕೆ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಕಬ್ಬು ಬೆಳೆಗಾರರು ಹೆಚ್ಚಿನ ದರ ನೀಡುತ್ತಿರುವ ಮತ್ತು ಸಕಾಲದಲ್ಲಿ ಹಣ ಪಾವತಿಸುತ್ತಿರುವ ಹೊರರಾಜ್ಯಗಳ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿಯ ಕಬ್ಬು ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುತ್ತಿದ್ದಾರೆ. ದಕ್ಷಿಣದ ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಗಾರರು ತಮಿಳುನಾಡಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ.

ಕೇಂದ್ರ ಸರ್ಕಾರವು 2025ರ ಸಾಲಿಗೆ ಶೇ 10.25ರಷ್ಟು ಇಳುವರಿ (recovery rate) ಇರುವ ಟನ್ ಕಬ್ಬಿಗೆ ₹3,550 ನಿಗದಿ ಮಾಡಿದೆ. ಇದರ ಆಧಾರದಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ರಾಜ್ಯದಲ್ಲಿರುವ 81 ಕಾರ್ಖಾನೆಗಳು 2025–26ನೇ ಸಾಲಿಗೆ ಬೆಳೆಗಾರರಿಗೆ ಮೊದಲ ಕಂತಿನಲ್ಲಿ ಪಾವತಿಸಬೇಕಾದ ದರವನ್ನು ನಿಗದಿಪಡಿಸಿ ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ. 2024–25ನೇ ಸಾಲಿನಲ್ಲಿ ಕಾರ್ಖಾನೆಗಳಲ್ಲಿ ಅರೆದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಆಧಾರದಲ್ಲಿ ಎಫ್ಆರ್ಪಿ ನಿಗದಿಪಡಿಸಲಾಗಿದೆ.

ಆದರೆ, ರಾಜ್ಯದ ಯಾವ ಕಾರ್ಖಾನೆಯೂ ಇಷ್ಟು ಬೆಲೆ ನೀಡಲು ಮುಂದಾಗಿಲ್ಲ. ₹2,700ರಿಂದ ₹3,100ರವರೆಗೆ ದರ ನೀಡಲು ತೀರ್ಮಾನಿಸಿವೆ.

ಸಾಮಾನ್ಯವಾಗಿ ಕಾರ್ಖಾನೆಗಳು ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚವನ್ನು ಲೆಕ್ಕಹಾಕಿ ಅದನ್ನು ದರದಲ್ಲಿ ಕಡಿತ ಮಾಡುತ್ತವೆ. ₹800ರಿಂದ ₹900ವರೆಗೂ ಕಡಿತ ಮಾಡುತ್ತವೆ. ಹಾಗಾದಾಗ, ಟನ್ ಕಬ್ಬಿನ ದರ ಇನ್ನಷ್ಟು ಕಡಿಮೆಯಾಗುತ್ತದೆ.

‘ರಾಜ್ಯದಲ್ಲಿ ಕಾರ್ಖಾನೆಗಳು ನೀಡುವ ದರವನ್ನು ನೋಡಿದಾಗ, ಮಹಾರಾಷ್ಟ್ರದಲ್ಲಿ ಇಲ್ಲಿಗಿಂತ ಪ್ರತಿ ಟನ್ಗೆ ₹300–₹400 ಹೆಚ್ಚು ಸಿಗುತ್ತಿದೆ. ಅಲ್ಲಿನ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,400 ನೀಡುತ್ತಿವೆ. ರಾಜ್ಯದ ಕಾರ್ಖಾನೆಗಳು ಹಣ ಪಾವತಿಯನ್ನು ವಿಳಂಬ ಮಾಡುತ್ತಿವೆ. ಅಲ್ಲಿನ ಕಾರ್ಖಾನೆಗಳು ತಕ್ಷಣ ಪಾವತಿಸುತ್ತಿವೆ. ಇಲ್ಲಿ ಕಡಿಮೆ ಪಾವತಿಯ ಜೊತೆಗೆ ತೂಕ, ಇಳುವರಿ ಪ್ರಮಾಣದಲ್ಲೂ ಕಾರ್ಖಾನೆಗಳು ಮೋಸ ಮಾಡುತ್ತವೆ’ ಎಂದು ಹೇಳುತ್ತಾರೆ ಕಬ್ಬು ಬೆಳೆಗಾರರು.

‘ಕೇಂದ್ರ ಸರ್ಕಾರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್ಆರ್ಪಿ ನಿಗದಿ ಮಾಡಿದೆ. ಇದು ಕೂಡ ಅವೈಜ್ಞಾನಿಕ. ಇಳುವರಿ ಪ್ರಮಾಣ ಶೇ 9.5ರ ಆಧಾರದ ಮೇಲೆ ಎಫ್ಆರ್ಪಿ ಘೋಷಿಸಬೇಕು. ಆಗ ಮಾತ್ರ ರೈತರಿಗೆ ಲಾಭದಾಯಕ ದರ ಸಿಗಲು ಸಾಧ್ಯ. ಎಫ್ಆರ್ಪಿ ಘೋಷಣೆ ಮಾಡಿದ ಮೇಲೂ ದರ ಪರಿಷ್ಕರಣೆ ಮಾಡುವ ಅಧಿಕಾರ ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿಗೆ ಇದೆ. ರಾಜ್ಯದ ಬಹುಪಾಲು ಕಾರ್ಖಾನೆಗಳನ್ನು ಜನಪ್ರತಿನಿಧಿಗಳು, ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಅವರು ಮಂಡಳಿಯನ್ನು ಹಿಡಿತದಲ್ಲಿಟ್ಟು ದರ ಪರಿಷ್ಕರಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂಬುದು ಅವರ ತಕರಾರು.

10 ಲಕ್ಷ ಟನ್ ಕಬ್ಬು ಮಹಾರಾಷ್ಟ್ರಕ್ಕೆ: ನೆರೆಯ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕುಗಳ ಹಲವು ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಾರೆ.

ಅಂದಾಜಿನ ಪ್ರಕಾರ, ಪ್ರತಿ ವರ್ಷ 10 ಲಕ್ಷ ಟನ್ಗಳಷ್ಟು ಜಿಲ್ಲೆಯ ಕಬ್ಬು ‘ಮಹಾ’ ಕಾರ್ಖಾನೆಗಳಲ್ಲಿ ನುರಿಯುತ್ತಿದೆ. ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಇದ್ದಾಗ್ಯೂ ಮಹಾರಾಷ್ಟ್ರಕ್ಕೆ ಅಪಾರ ಪ್ರಮಾಣದ ಕಬ್ಬು ಸಾಗಣೆಯಾಗುತ್ತಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಲ್ಲಪ್ಪಣ್ಣ ಅವಾಡೆ ಸಹಕಾರ ಸಕ್ಕರೆ ಕಾರ್ಖಾನೆ (ಹುಪರಿ), ದತ್ತ ಸೇತ್ಕರಿ ಸಹಕಾರ ಸಕ್ಕರೆ ಕಾರ್ಖಾನೆ (ಶಿರೋಳ), ಪಂಚಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಇಚಲಕರಂಜಿ), ಛತ್ರಪತಿ ಶಾಹೂ ಸಹಕಾರ ಸಕ್ಕರೆ ಕಾರ್ಖಾನೆ (ಕಾಗಲ್), ಸದಾಶಿವರಾವ್ ಮಂಡಲಿಕ್ ಸಹಕಾರ ಸಕ್ಕರೆ ಕಾರ್ಖಾನೆ (ಹಮೀದವಾಡ), ಸಂತಾಜಿ ಘೋರ್ಪಡೆ ಸಹಕಾರ ಸಕ್ಕರೆ ಕಾರ್ಖಾನೆ (ಸೇನಾಪತಿ ಕಾಪಸಿ), ದೂದಗಂಗಾ ವೇದಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಬಿದರಿ), ಗುರುದತ್ತ ಸಕ್ಕರೆ ಕಾರ್ಖಾನೆ (ಟಾಕಳಿ) ಮುಂತಾದ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯ ರೈತರ ಕಬ್ಬನ್ನೇ ನೆಚ್ಚಿಕೊಂಡಿವೆ.

ಜಿಲ್ಲೆಯ ಕಾರ್ಖಾನೆಗಳು ಟನ್ ಕಬ್ಬಿಗೆ ₹3,010 ದರ ವಾಗ್ದಾನ ಮಾಡಿವೆ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ₹3,200ಕ್ಕೆ ಏರಿಸುವ ಭರವಸೆ ನೀಡಲಾಗಿದೆ. ಆದರೆ, ₹3,500ಕ್ಕೆ ಏರಿಸಲೇಬೇಕು ಎಂದು ರೈತರು ಜಿಲ್ಲೆಯಾದ್ಯಂತ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ.

‘ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿದರೂ ಉತ್ತಮ ದರ ಸಿಗುತ್ತಿಲ್ಲ. ಸದ್ಯ ಕಾರ್ಖಾನೆಗಳು ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚ ಸೇರಿಸಿ ₹3,200 ದರ ನೀಡುವುದಾಗಿ ಹೇಳಿವೆ. ಸಾಗಣೆ ವೆಚ್ಚವನ್ನೂ ರೈತರ ಕಬ್ಬಿನ ಬಿಲ್ಲಿನಿಂದಲೇ ಕತ್ತರಿಸಿ ವಾಹನದವರಿಗೆ ನೀಡುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಕಟಾವು ಮತ್ತು ಸಾಗಣೆ ವೆಚ್ಚದ ಹೊರತಾಗಿ ₹3,500 ದರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ’ ಎನ್ನುವುದು ಕಬ್ಬು ಬೆಳೆಗಾರ, ರೈತ ಮುಖಂಡ ಚೂಣಪ್ಪ ಪೂಜಾರಿ ಅವರ ಮಾತು.

ಕಬ್ಬು ಸಾಗಿಸಲು ಅಣಿ: ವಿಜಯಪುರ ಜಿಲ್ಲೆಯಲ್ಲಿ ಇದೇ 1ರಿಂದ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಈವರೆಗೆ ಯಾವೊಂದು ಸಕ್ಕರೆ ಕಾರ್ಖಾನೆಯೂ ಕಬ್ಬಿನ ದರವನ್ನು ಘೋಷಿಸಿಲ್ಲ. ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ನೀಡಬೇಕಾದ ದರವನ್ನು ಜಿಲ್ಲಾಧಿಕಾರಿಯವರು ನಿಗದಿಪಡಿಸಿದ್ದಾರೆ. ಇನ್ನೂ ಕಬ್ಬು ನುರಿಯುವಿಕೆ ಆರಂಭವಾಗಿಲ್ಲ.

ಇದರ ನಡುವೆಯೇ ಜಿಲ್ಲೆಯ ಗಡಿಭಾಗದ ಇಂಡಿ, ಚಡಚಣ, ಆಲಮೇಲ ಭಾಗದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವ ಭರವಸೆ ನೀಡಿದ್ದು, ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಲು ಅಣಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರಿಂದ ಆರಂಭವಾಗಿದೆ. ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ್ ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಕಾರ್ಖಾನೆಗಳು ಪ್ರತಿ ಟನ್ಗೆ ₹3,500 ನೀಡುವುದಾಗಿ ರೈತರೊಂದಿಗೆ ಮಾತುಕತೆ ನಡೆಸಿವೆ. ಸಾಗಣೆ ವೆಚ್ಚ ಪಡೆಯದೇ ಜಿಲ್ಲೆಯ ಕಬ್ಬು ಖರೀದಿಸಲು ಮುಂದಾಗಿವೆ. ಅದಲ್ಲದೆ, ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಎಥೆನಾಲ್ ಘಟಕ ಹೊಂದಿದ್ದು, ಕಬ್ಬು ಖರೀದಿಗೆ ಪೈಪೋಟಿ ಒಡ್ಡುತ್ತಿವೆ. ಒಂದು ವೇಳೆ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಣೆಯಾದರೆ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ.

ಮಾರಾಟಕ್ಕೆ ಅವಕಾಶ

ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆಗೆ 2014ರಲ್ಲಿ ತಿದ್ದುಪಡಿಯಾಗಿದೆ. ಆದರೆ, ಇದು ರೈತರ ಕಬ್ಬು ಸಾಗಣೆ ಮೇಲೆ ಯಾವುದೇ ನಿಯಂತ್ರಣ ಹೇರುವುದಿಲ್ಲ. ಹಾಗಾಗಿ, ಕೃಷಿಕ ತನ್ನ ಉತ್ಪನ್ನವನ್ನು ಎಲ್ಲಿಯಾದರೂ (ಅಂತರ ಜಿಲ್ಲೆ, ಅಂತರ ರಾಜ್ಯ) ಮಾರಲು ಸ್ವತಂತ್ರ. ಆದರೆ, ಕಾರ್ಖಾನೆಗಳು ನೆರೆ ರಾಜ್ಯದ ಕಬ್ಬು ತರಿಸಿಕೊಳ್ಳಬೇಕಿದ್ದರೆ, ನಿಯಮ ಪಾಲಿಸಬೇಕು. ಇದಕ್ಕಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಬಹುತೇಕ ಕಾರ್ಖಾನೆಗಳು ಅಂತರರಾಜ್ಯ ಅನುಮತಿ (ಮಲ್ಟಿಸ್ಟೇಟ್ ಲೈಸನ್ಸ್) ಪಡೆದಿರುತ್ತವೆ. ಆದರೆ, ರಾಜ್ಯದ ಬಹುಪಾಲು ಸಕ್ಕರೆ ಕಾರ್ಖಾನೆಗಳು, ಸ್ಥಳೀಯವಾಗಿ ಬೆಳೆದ ಕಬ್ಬನ್ನು ತಮಗೇ ಮಾರಾಟ ಮಾಡಬೇಕು ಎಂದು ಬೆಳೆಗಾರರಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಡಳಿತಗಳನ್ನು ಒತ್ತಾಯಿಸತ್ತಲೇ ಬಂದಿವೆ.

ಕಲಬುರಗಿ ಕಬ್ಬು ಮಹಾರಾಷ್ಟ್ರಕ್ಕೆ

ಕಾರ್ಖಾನೆಗಳು ಸಮೀಪದಲ್ಲಿವೆ ಮತ್ತು ಸಕಾಲದಲ್ಲಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿರುವ ಕಲಬುರಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಬೆಳೆಗಾರರು ನೆರೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುತ್ತಾರೆ.

ಜಿಲ್ಲೆಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯುವ ಅಫಜಲಪುರ ತಾಲ್ಲೂಕಿನಲ್ಲಿ ರೇಣುಕಾ ಶುಗರ್ಸ್ ಹಾಗೂ ಕೆಪಿಆರ್ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿದ್ದು, ಹೆಚ್ಚಿನ ಪ್ರಮಾಣದ ಕಬ್ಬನ್ನು ಇವೆರಡು ಕಾರ್ಖಾನೆಗಳಿಗೇ ಸಾಗಿಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಕಾಲಕ್ಕೆ ಬಾಕಿ ಪಾವತಿ ಮಾಡದೇ ಇರುವುದರಿಂದ ಹಾಗೂ ಬೆಲೆಯೂ ಕಮ್ಮಿ ನಿಗದಿ ಆಗುವುದರಿಂದ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಪೂರೈಸುತ್ತಿದ್ದಾರೆ.

‘ಮಹಾರಾಷ್ಟ್ರದ 10 ಸಕ್ಕರೆ ಕಾರ್ಖಾನೆಗಳಿಗೆ ಅಫಜಲಪುರ, ಆಳಂದ ತಾಲ್ಲೂಕಿನ ರೈತರು ಕಬ್ಬು ಸಾಗಣೆ ಮಾಡುತ್ತಾರೆ. ಸೋಲಾಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರತಿ ಟನ್ ಕಬ್ಬಿಗೆ ₹3,440 ಬೆಲೆ ನಿಗದಿ ಮಾಡಿವೆ. ಹೀಗಾಗಿ ಕಬ್ಬು ಬೆಳೆಗಾರರು ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ’ ಎಂಬುದು ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಅನಿಸಿಕೆ.

ಚಾಮರಾಜನಗರದಿಂದ ತಮಿಳುನಾಡಿಗೆ

ಚಾಮರಾಜನಗರ ಜಿಲ್ಲೆಯ ಕೆಲವು ಬೆಳೆಗಾರರು ಕಬ್ಬನ್ನು ಕೊಳ್ಳೇಗಾಲ ಸಮೀಪದ ಕುಂತೂರಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಬದಲಿಗೆ ತಮಿಳುನಾಡಿನ ಈರೋಡ್ನಲ್ಲಿರುವ ಶಕ್ತಿ ಶುಗರ್ಸ್ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಪೂರೈಸುತ್ತಿದ್ದಾರೆ.

‘ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ಗೆ ₹3,320 ನೀಡುತ್ತಿದ್ದು, ತಮಿಳುನಾಡಿನ ಕಾರ್ಖಾನೆಗಳು ₹4,000ವರೆಗೂ ನೀಡಲು ಮುಂದೆ ಬಂದಿವೆ. ಹೆಚ್ಚು ಬೆಲೆ ಸಿಗುವ ಕಾರಣಕ್ಕೆ ರೈತರು ಅಲ್ಲಿನ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ’ ಎಂದು ರೈತ ಮುಖಂಡರು ಹೇಳಿದ್ದಾರೆ.

ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಗೂ ಉತ್ತಮ ದರ ಸಿಗಬೇಕು ಎಂಬ ಕಾರಣಕ್ಕೆ ಜಿಲ್ಲೆಯಿಂದ ಹೊರಜಿಲ್ಲೆ ಹಾಗೂ ರಾಜ್ಯಗಳಿಗೆ ಕಬ್ಬು ಪೂರೈಕೆ ಮಾಡಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.

ರೈತರು ನಷ್ಟ ಅನುಭವಿಸಬೇಕೇ?

‘ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಸಚಿವರು, ಶಾಸಕರು, ಸಂಸದರು, ರಾಜಕಾರಣಿಗಳಲ್ಲಿದೆ. ಇವರು ಯಾರೂ ಬೆಳೆಗಾರರ ಪರವಾಗಿ ಯೋಚನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್ಪಿ ದರವನ್ನು ನೀಡಲೂ ಕಾರ್ಖಾನೆಗಳು ಹಿಂದೆ ಮುಂದೆ ನೋಡುತ್ತವೆ. ಕೇಂದ್ರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್ಆರ್ಪಿ ನಿಗದಿಪಡಿಸಿದೆ. ಒಂದು ವೇಳೆ ಇಳುವರಿ ಪ್ರಮಾಣ ಹೆಚ್ಚಿದ್ದರೆ ಹೆಚ್ಚು ದರ ನೀಡಬೇಕು. ಇಳುವರಿ ಶೇ 1ರಷ್ಟು ಹೆಚ್ಚಿದ್ದರೆ ₹346 ಹೆಚ್ಚುವರಿ ನೀಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕಬ್ಬಿನ ಇಳುವರಿ ಪ್ರಮಾಣ ಶೇ 12–
ಶೇ 13ರವರೆಗೂ ಇದೆ. ಈ ಲೆಕ್ಕದಲ್ಲಿ ಕಾರ್ಖಾನೆಗಳು ಹೆಚ್ಚು ದರ ನೀಡಬೇಕು. ಆದರೆ, ಯಾವ ಕಾರ್ಖಾನೆಗಳೂ ನೀಡುತ್ತಿಲ್ಲ. ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ ಇದು ತಪ್ಪೇ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್.

‘ಮಹಾರಾಷ್ಟ್ರದಲ್ಲಿ ಸಹಕಾರಿ ಕಾರ್ಖಾನೆಗಳು ಹೆಚ್ಚಿವೆ. ಉತ್ತಮ ಬೆಲೆ ಜೊತೆಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿವೆ. ರಾಜ್ಯದ ಬಹುತೇಕ ಕಾರ್ಖಾನೆಗಳು ತೂಕ, ಇಳುವರಿ ದರದಲ್ಲಿ ಮೋಸ ಮಾಡುವುದರ ಜೊತೆಗೆ ಕಟಾವು, ಸಾಗಣೆ ವೆಚ್ಚವನ್ನು ಹೆಚ್ಚು ಕಡಿತ ಮಾಡುತ್ತವೆ. ವಿಳಂಬವಾಗಿ ಪಾವತಿ ಮಾಡುತ್ತವೆ’ ಎಂಬುದು ಅವರ ದೂರು.

ಮಹಾರಾಷ್ಟ್ರದಲ್ಲಿ ಈ ವರ್ಷವೂ ₹3,410 ದರ ನಿಗದಿ ಮಾಡಲಾಗಿದೆ. ಅಲ್ಲಿನ ಇಳುವರಿ ಶೇ 12ಕ್ಕೂ ಹೆಚ್ಚು ಬರುವ ಕಾರಣ ರೈತರಿಗೆ ಹೆಚ್ಚು ದರ ಸಿಗುತ್ತದೆ. ಅದಾಗಿಯೂ ಅಲ್ಲಿನ ರೈತರು ಕೂಡ ₹3,750 ದರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ (ಕರ್ನಾಟಕ) ಅಧ್ಯಕ್ಷ

ಮಾಹಿತಿ: ಸಂತೋಷ ಈ.ಚಿನಗುಡಿ, ಬಸವರಾಜ ಸಂಪಳ್ಳಿ, ಮನೋಜ್ಕುಮಾರ್ ಗುದ್ದಿ, ಬಾಲಚಂದ್ರ ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.