ಶ್ರೀಮಂತ ತಿರುಪತಿ ತಿರುಮಲ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಕಳಪೆ ಲಡ್ಡು ಪ್ರಸಾದ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಶಾಲು ಹಗರಣ ಬಯಲಾಗಿದೆ. ಕೋಟ್ಯಂತರ ಭಕ್ತರು ನಡೆದುಕೊಳ್ಳುವ ವೆಂಕಟೇಶ್ವರ ಸನ್ನಿಧಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವ್ಯವಹಾರ ಪ್ರಕರಣಗಳು ಒಂದರ ನಂತರ ಮತ್ತೊಂದು ಎಂಬಂತೆ ವರದಿಯಾಗುತ್ತಿವೆ. ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ ಮತ್ತು ಹಿಂದೆ ಅಧಿಕಾರದಲ್ಲಿದ್ದ ವೈಎಸ್‌ಆರ್‌ಸಿಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಭಕ್ತಿ, ಧಾರ್ಮಿಕ ಸೇವೆಗಳಷ್ಟೇ ನಡೆಯಬೇಕಾಗಿದ್ದ ದೇವಾಲಯದಲ್ಲಿ ಅಕ್ರಮಗಳು ನಡೆಯುತ್ತಿರುವುದು ಭಕ್ತರಿಗೆ ನೋವುಂಟು ಮಾಡುತ್ತಿದೆ