ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

Published 3 ಜೂನ್ 2023, 11:00 IST
Last Updated 3 ಜೂನ್ 2023, 11:00 IST
ಅಕ್ಷರ ಗಾತ್ರ

ಬಾಲಸೋರ್: ರೈಲುಗಳು ಡಿಕ್ಕಿಯಾಗುವುದನ್ನು ತಡೆಯಲು, ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆ 'ಕವಚ' ಆಗಿದೆ.

ಆದರೆ ಭೀಕರ ರೈಲು ಅಪಘಾತ ಸಂಭವಿಸಿದ ಒಡಿಶಾದ ಬಾಲಸೋರ್‌ ರೈಲ್ವೆ ಮಾರ್ಗದಲ್ಲಿ ಕವಚ ಸುರಕ್ಷಾ ವ್ಯವಸ್ಥೆ ಇರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಕವಚ ವ್ಯವಸ್ಥೆ ಇದ್ದಿದ್ದರೆ ರೈಲುಗಳ ಮಧ್ಯೆ ಡಿಕ್ಕಿ ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅವಘಡದಲ್ಲಿ 261 ಮಂದಿ ಮೃತಪಟ್ಟಿದ್ದು, 900 ಮಂದಿ ಗಾಯಗೊಂಡಿದ್ದಾರೆ.

ಕವಚ ಸುರಕ್ಷಾ ವ್ಯವಸ್ಥೆಯ ವೈಶಿಷ್ಟ್ಯತೆಗಳೇನು?

  • ಸಂಶೋಧನೆ, ವಿನ್ಯಾಸ ಹಾಗೂ ಮಾನಕ ಸಂಸ್ಥೆ (ಆರ್‌ಡಿಎಸ್‌ಒ) ಕವಚ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

  • ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ತಪ್ಪಿಸುತ್ತದೆ. ಸ್ವಯಂಚಾಲಿತವಾಗಿ ಬ್ರೇಕ್ ವ್ಯವಸ್ಥೆ ಹೊಂದಿದೆ.

  • ರೆಡ್ ಸಿಗ್ನಲ್ ದಾಟದಂತೆ ತಡೆಯುವ ವ್ಯವಸ್ಥೆಯನ್ನು ಕವಚ ಹೊಂದಿದ್ದು, ತತ್‌ಕ್ಷಣವೇ ಕಾರ್ಯಪ್ರವೃತವಾಗಿ ಬ್ರೇಕ್ ಹಾಕುತ್ತದೆ.

  • ರೈಲ್ವೆ ಕ್ರಾಸಿಂಗ್ ಗೇಟ್ ಸಮೀಪಿಸುತ್ತಿದ್ದಂತೆಯೇ ಜೋರಾಗಿ ವಿಷಲ್ ಶಬ್ದ ಹೊಮ್ಮಿಸಿ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

  • ಲೊಕೊ ಪೈಲಟ್‌ಗೆ ಓವರ್ ಸ್ಪೀಡಿಂಗ್ ತಪ್ಪಿಸಲು ನೆರವಾಗುತ್ತದೆ.

  • ಅತ್ಯಂತ ದಟ್ಟವಾದ ಮಂಜಿನ ವಾತಾವರಣದಲ್ಲೂ ರೈಲು ಸುರಕ್ಷತೆಯಿಂದ ಚಲಿಸಲು ನೆರವಾಗುತ್ತದೆ.

  • ಒಟ್ಟಾರೆಯಾಗಿ ಸುರಕ್ಷಿತ ರೈಲ್ವೆ ಪಯಣವನ್ನು ಕವಚ ವ್ಯವಸ್ಥೆ ಖಾತ್ರಿಪಡಿಸುತ್ತದೆ.

  • ಕವಚ ಸುರಕ್ಷಾ ವ್ಯವಸ್ಥೆ ಅಭಿವೃದ್ಧಿಗೆ ₹16.88 ಕೋಟಿ ವೆಚ್ಚ ಮಾಡಲಾಗಿದೆ. ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

  • ಈ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿವೆ. ದಕ್ಷಿಣ ಮಧ್ಯ ರೈಲ್ವೆಯ ಲಿಂಗಂಪಲ್ಲಿ–ವಿಕಾರಾಬಾದ್–ವಾಡಿ, ವಿಕಾರಾಬಾದ್–ಬೀದರ್ ಮಾರ್ಗಗಳಲ್ಲಿ ಈ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ 1,455 ಕಿ.ಮೀ. ಉದ್ದದ ಮಾರ್ಗದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

  • ಮುಂದಿನ ವರ್ಷ ನವದೆಹಲಿ–ಹೌರಾ ಮತ್ತು ನವದೆಹಲಿ–ಮುಂಬೈ ನಡುವಿನ ಒಟ್ಟು 2,951 ಕಿ.ಮೀ. ಉದ್ದದ ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿದೆ.

  • 35,736 ಕಿ.ಮೀ. ಉದ್ದ ಮಾರ್ಗದಲ್ಲಿ ‘ಕವಚ’ ವ್ಯವಸ್ಥೆ ಅಳವಡಿಕೆಗೆ ಮಂಜೂರಾತಿ ನೀಡಲಾಗಿದೆ. ನಂತರ, 6 ಸಾವಿರ ಕಿ.ಮೀ. ಮಾರ್ಗದಲ್ಲಿ ಅಳವಡಿಸಲು ಯೋಜಿಸಲಾಗಿದೆ ಎಂದು ರೈಲ್ವೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT