ಬೆಂಗಳೂರು: ಮಠ ಗುರುಪ್ರಸಾದ್. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು. ಪ್ರತಿ ಭಾವಂತರಾಗಿದ್ದ ಅವರು ಮೊದಲ ಚಿತ್ರದ (ಮಠ) ಮೂಲಕವೇ ಛಾಪು ಮೂಡಿಸಿದವರು. ನವೆಂಬರ್ 4ರಂದು ಆತ್ಮಹತ್ಯೆ ಮಾಡಿಕೊಂಡರು. ಅವರಿಗಿನ್ನೂ 52 ವರ್ಷ. 'ಸಾಲದ ಶೂಲಕ್ಕೆ ಹೆದರಿ ಖಿನ್ನತೆಗೆ ಜಾರಿ ಇಹಲೋಕ ತ್ಯಜಿಸಿದರು' ಎಂದು ಹೇಳುತ್ತಾರೆ ಪೊಲೀಸರು.

ಕಿರುತೆರೆ, ಹಿರಿತೆರೆಗಳಲ್ಲಿ ನಿರ್ದೇಶಕರಾಗಿ ದುಡಿದ, ನಿರ್ಮಾಪಕರೂ ಆಗಿದ್ದ ವಿನೋದ್ ದೋಂಡಾಳೆ ಚಿತ್ರವೊಂದರ ನಿರ್ಮಾಣಕ್ಕಾಗಿ ಮಾಡಿದ್ದ ಸಾಲ ತೀರಿಸುವುದು ಹೇಗೆ ಎಂದು ಹೆದರಿ ಈ ವರ್ಷದ ಜುಲೈ 21ರಂದು ನೇಣಿಗೆ ಕೊರಳೊಡ್ಡಿ ತಮ್ಮ ಬದುಕಿಗೆ ಅಂತ್ಯ ಹಾಡಿದರು. ಅವರಿಗೆ ಬರೀ 49 ವರ್ಷ.

ಇದಕ್ಕೂ ಮೂರು ತಿಂಗಳ ಮೊದಲು, ಏಪ್ರಿಲ್ 14ರಂದು ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರು ಬಿಲ್ಡರ್ ಕೂಡ ಆಗಿದ್ದರು. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ಆರ್ಥಿಕ ಕಾರಣಗಳು ಮತ್ತು ನಂಬಿದವರೇ ಮಾಡಿದ ವಂಚನೆಯಿಂದಾಗಿ ಅವರು ಆತ್ಮಹತ್ಯೆಯ ನಿರ್ಧಾರ ಕೈಗೊಂಡರು ಎಂಬುದು ಪೊಲೀಸರ ಹೇಳಿಕೆ. ಅವರಿಗೆ 55 ವರ್ಷ.

ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಶೋಭಿತಾ ಅವರು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈ ವಾರದ ಆರಂಭದಲ್ಲಿ ಬಂದಿದೆ. ಅವರು ಕೂಡ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.ಬಣ್ಣದ ಲೋಕದಲ್ಲಿ ಜನಪ್ರಿಯರಾಗಿ, ಸೆಲೆಬ್ರೆಟಿಗಳಾಗಿ ಗುರುತಿಸಿಕೊಂಡಿರುವ ಹಲವಾರು ಮಂದಿ ಆರ್ಥಿಕ ಸಂಕಷ್ಟ, ಒತ್ತಡ–ಖಿನ್ನತೆ, ಕೌಟುಂಬಿಕ ಕಾರಣಗಳಿಂದ ಜಗತ್ತನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಇಂತಹ ನಿದರ್ಶನಗಳು ಹತ್ತಾರು ಸಿಗುತ್ತವೆ. ಇದು ಚಂದನವನ, ಕನ್ನಡ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಹಾಲಿವುಡ್, ಬಾಲಿವುಡ್, ನೆರೆಯ ಟಾಲಿವುಡ್ (ತೆಲುಗು ಚಿತ್ರರಂಗ), ಕಾಲಿವುಡ್ (ತಮಿಳು ಚಿತ್ರರಂಗ), ಮಾಲಿವುಡ್ (ಮಲಯಾಳ ಚಿತ್ರರಂಗ) ಸೇರಿದಂತೆ ಎಲ್ಲ ಚಿತ್ರರಂಗಗಳಲ್ಲೂ ಇಂತಹ ಪ್ರಕರಣಗಳು ವರದಿಯಾಗಿವೆ.

ಸಾವಿಗೆ ದಾರಿ ತೋರುವ ಒತ್ತಡ: 70–80ರ ದಶಕದಲ್ಲಿ ಕನ್ನಡ ಚಿತ್ರರಂಗದ ಅಪ್ರತಿಮ ತಾರೆಯರಾಗಿ ಮೆರೆದಿದ್ದ ಮಿನುಗು ತಾರೆ ಕಲ್ಪನಾ (1979ರ ಮೇ 30),
ಮಂಜುಳಾ (1986 ಸೆ.12) ಅವರು ಕೂಡ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಯ ಮೂಲಕ ಬದುಕಿಗೆ ವಿದಾಯ ಹೇಳಿದವರು. 37 ವರ್ಷದ ಕಲ್ಪನಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಮಂಜುಳಾ ಸಾವಿಗೆ ಶರಣಾಗುವಾಗ ಅವರಿಗೆ 35 ವರ್ಷ ವಯಸ್ಸಾಗಿತ್ತಷ್ಟೆ. ಅವರ ಸಾವಿಗೆ ವೈಯಕ್ತಿಕ ಮತ್ತು ಹಣಕಾಸಿನ ಕಾರಣಗಳಿದ್ದವು ಎನ್ನಲಾಗಿತ್ತು.

17 ವರ್ಷಗಳ ಅವಧಿಯಲ್ಲಿ ವಿವಿಧ ಭಾಷೆಗಳ 450 ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ, ಆ ಕಾಲದಲ್ಲಿ ಐಟಂ ಹಾಡುಗಳ ಮೂಲಕ ಮನೆ ಮಾತಾಗಿದ್ದ ಸಿಲ್ಕ್ ಸ್ಮಿತಾ ಅವರು ಏಕಾಂಗಿತನ, ಸಾಲದ ಹೊರೆಯಿಂದ ಖಿನ್ನತೆಗೆ ಜಾರಿ ಚೆನ್ನೈನ ತಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಹಾಲಿವುಡ್ ಖ್ಯಾತ ನಟರಾಗಿದ್ದ ರಾಬಿನ್ ವಿಲಿಯಮ್ಸ್ 2014ರ ಆಗಸ್ಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಾರೋಗ್ಯ, ಖಿನ್ನತೆಯಿಂದ ಬಳಲುತ್ತಿದ್ದ ಅವರು ಕೊನೆಗೆ ಸಾವನ್ನು ತಂದುಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾದ ಹಿಂದಿ ಚಿತ್ರರಂಗದ ನಟ, ನಟಿಯರ ಪಟ್ಟಿ ದೊಡ್ಡದಿದೆ.

ನಟರಾಗಿ ಜನಪ್ರಿಯರಾಗುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ದಿಢೀರ್ ಸಾವು (2000ರ ಜೂನ್ 14) ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಿಬಿಐ ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ಈ ಪ್ರಕರಣವು ಬಾಲಿವುಡ್ನಲ್ಲಿನ ಹುಳುಕುಗಳ ಬಗ್ಗೆ, ಚಿತ್ರೋದ್ಯಮದಲ್ಲಿ ನಟ ನಟಿಯರು ಬೇರೂರಲು ಪಡುತ್ತಿರುವ ಕಷ್ಟ, ಅವರು ಎದುರಿಸುತ್ತಿರುವ ಒತ್ತಡಗಳ ಬಗ್ಗೆ ಬೆಳಕು ಚೆಲ್ಲಿತ್ತು.

ಜನರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಲವು ಕಾರಣಗಳು ಇವೆ. ಆದರೆ, ಈವರೆಗೆ ಸಾವಿಗೆ ಶರಣಾಗಿರುವ ಬಹುತೇಕ ಸೆಲೆಬ್ರೆಟಿಗಳು, ಚಿತ್ರ ನಿರ್ಮಾಪರು, ನಿರ್ದೇಶಕರು ಹಣಕಾಸಿನ ವಿಚಾರ, ಅನಾರೋಗ್ಯ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯದಿಂದಾಗಿ ಖಿನ್ನತೆಗೆ ಜಾರಿ ಒತ್ತಡ ತಾಳಲಾರದೇ ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.

ಬದಲಾದ ಚಿತ್ರರಂಗ, ಕಡಿಮೆಯಾದ ಗೆಲುವು: ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗುತ್ತಿದೆ ಎಂಬುದು ಉದ್ಯಮದಲ್ಲಿ ತೊಡಗಿಕೊಂಡಿರುವವರ ಹೇಳಿಕೆ.

ಚಿತ್ರರಂಗದಲ್ಲಿ ಗೆಲವು ಕಡಿಮೆಯಾಗಿದ್ದು ನಿರ್ಮಾಪಕರ ಸ್ಥಿತಿ ದಯನೀಯವಾಗಿದೆ. ಸಾಕಷ್ಟು ಕಲಾವಿದರು, ತಂತ್ರಜ್ಞರು ಕೂಡ ಸರಿಯಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರು, ಛಾಯಾಚಿತ್ರ ಗ್ರಾಹಕರು ಮತ್ತಿತರ ತಾಂತ್ರಿಕ ವರ್ಗದವರ ಬದುಕು ಕೂಡ ಶೋಚನೀಯವಾಗಿದೆ ಎಂದು ಹೇಳುತ್ತಾರೆ ಚಿತ್ರೋದ್ಯಮವನ್ನು ಬಲ್ಲವರು.

ಚಿತ್ರರಂಗದಲ್ಲಿ ಒಂದು ಕಾಲಕ್ಕೆ ಚೆನ್ನಾಗಿ ಸಂಪಾದಿಸಿ, ಬಳಿಕ ಸಾಕಷ್ಟು ಕಳೆದುಕೊಂಡು ಸುಮ್ಮನಾದ ವೃತ್ತಿಪರ ನಿರ್ಮಾಪಕರ ಪಟ್ಟಿ ದೊಡ್ಡದಿದೆ. ಬಹುತೇಕ ಆರ್ಥಿಕ ಸಂಕಷ್ಟವನ್ನು ತಡೆದುಕೊಂಡು ಬದುಕನ್ನು ಲಯಕ್ಕೆ ತಂದುಕೊಂಡು ಬದುಕಿದ್ದಾರೆ. ನಿರ್ಮಾಪಕ ದ್ವಾರಕೀಶ್ ಸತತ 18 ಸಿನಿಮಾಗಳಲ್ಲಿ ಸೋಲು ಕಂಡು ಸಾಕಷ್ಟು ಆಸ್ತಿ ಕಳೆದುಕೊಂಡಿದ್ದರು. ಎಚ್2ಒ ಸಿನಿಮಾದ ನಿರ್ಮಾಪಕರ ಧನರಾಜ್ ನಷ್ಟದ ಕಾರಣಕ್ಕೆ ಚಿತ್ರರಂಗವನ್ನೇ ಬಿಟ್ಟುಹೋದರು. ಕೆಸಿಎನ್ ಮೂವೀಸ್, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ನಂಥ ಸಂಸ್ಥೆಗಳು ನಿರ್ಮಾಣವನ್ನೇ ಸ್ಥಗಿತಗೊಳಿಸಿದವು. ವರ್ಷಕ್ಕೆ 200 ಸಿನಿಮಾಗಳು ನಿರ್ಮಾಣಗೊಂಡರೂ, ಪುನರಾವರ್ತನೆಗೊಳ್ಳುವ ನಿರ್ಮಾಪಕರ ಸಂಖ್ಯೆ 10ಕ್ಕಿಂತಲೂ ಕಡಿಮೆ.

‘ಯಾವುದೇ ಉದ್ಯಮದಲ್ಲಿ ಲಾಭ, ನಷ್ಟ, ಸೋಲು, ಗೆಲುವು ಇರುತ್ತದೆ. ಆದರೆ, ಸಿನಿಮಾದಲ್ಲಿ ಸುಳ್ಳು ಲೆಕ್ಕ, ನಕಲಿ ಪ್ರಚಾರದಿಂದ ಸಾಕಷ್ಟು ನಿರ್ಮಾಪಕರು ಹಾದಿ ತಪ್ಪುತ್ತಿದ್ದಾರೆ. ಈ ವರ್ಷ ಇಲ್ಲಿ ತನಕ ಬಿಡುಗಡೆಗೊಂಡ 200 ಚಿತ್ರಗಳಲ್ಲಿ 185 ಚಿತ್ರಗಳಿಗೆ ಒಂದು ಲಕ್ಷ ರೂಪಾಯಿ ಮರಳಿ ಬಂದಿಲ್ಲ. ಕೋಟಿಗಟ್ಟಲೇ ಹೂಡಿಕೆ ಮಾಡಿದ ನಿರ್ಮಾಪಕ ಬೀದಿಗೆ ಬಾರದೇ ಇರುತ್ತಾನೆಯೇ? ಬಹಳಷ್ಟು ಜನ ಮರ್ಯಾದೆಗೆ ಅಂಜಿ ಆದ ನಷ್ಟವನ್ನು ಹೇಳಿಕೊಳ್ಳುತ್ತಿಲ್ಲ. ನಾನು ಹಿಂದಿನ ಸಿನಿಮಾಗಳಿಂದ ಮನೆ, ಸೈಟು ಕಳೆದುಕೊಂಡಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದೆ. ಆರ್ಥಿಕವಾಗಿ ಜಯಿಸಿಕೊಳ್ಳುವ ಶಕ್ತಿ ಇಲ್ಲದವರಿಗೆ ಚಿತ್ರರಂಗ ಸೂಕ್ತ ಜಾಗವಲ್ಲ’ ಎನ್ನುವುದು ಚಿತ್ರ ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್. ಅವರ ಅನುಭವದ ಮಾತು.

‘ಸ್ಟಾರ್ ನಟರೊಬ್ಬರನ್ನು ನಂಬಿಕೊಂಡು ₹6 ಕೋಟಿ ಬಂಡವಾಳ ಹಾಕಿ ‘ಉಸಿರೇ ಉಸಿರೇ’ ಎಂಬ ಚಿತ್ರ ನಿರ್ಮಾಣ ಮಾಡಿದೆ. ಚಿತ್ರದಿಂದ ಈವರೆಗೆ ಒಂದು ರೂಪಾಯಿ ಕಾಯಿನ್ ಕೂಡ ಮರಳಿ ಬಂದಿಲ್ಲ. ಅನ್ನದಾತರೇ, ಸಾರ್ ಎಂದೆಲ್ಲ ಗೌರವ ಕೊಟ್ಟು, ಹಾಕಿದ ಹಣ ಮರಳಿ ಬರುವಂತೆ ಮಾಡುತ್ತೇನೆ ಎಂದು ಸಿನಿಮಾ ಪ್ರಾರಂಭಿಸುವಾಗ ಭರವಸೆ ನೀಡಿದ್ದ ಆ ಸ್ಟಾರ್ ನಟ ಈಗ ವರಸೆ ಬದಲಿಸಿದ್ದಾರೆ. ಮಗಳ ಶಾಲೆ ಶುಲ್ಕ ಕಟ್ಟಲಾಗದಷ್ಟು ದುಃಸ್ಥಿತಿಯಲ್ಲಿರುವೆ. ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದನ್ನು ಬಿಟ್ಟರೆ ಬದುಕಿನಲ್ಲಿ ಏನೂ ಉಳಿದಿಲ್ಲ’ ಎಂದು ಹೇಳುತ್ತಾರೆ ಆ ಚಿತ್ರದ ನಿರ್ಮಾಪಕ ಪ್ರದೀಪ್ ಹೊಸಕೋಟೆ.

ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ನಿರ್ಮಾಪಕರು ಸಿಗದೇ ಇದ್ದಾಗ, ನಂಬಿಕಸ್ಥರ ಸಹಾಯವನ್ನು ಪಡೆದು ಮತ್ತು ತಾವು ಕೂಡ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡು ಸ್ವತಃ ಚಿತ್ರ ನಿರ್ಮಾಣಕ್ಕೆ ಹೊರಡುತ್ತಿದ್ದಾರೆ. ಚಿತ್ರ ಬಿಡುಗಡೆ ಸೇರಿದಂತೆ ಇತರ ವ್ಯವಹಾರದ ತಂತ್ರಗಾರಿಕೆ ತಿಳಿಯದೇ ಕೈಸುಟ್ಟುಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದಾಗ ಮರ್ಯಾದೆಗೆ ಅಂಜಿ ಸಾವಿನತ್ತ ಮುಖ ಮಾಡುತ್ತಿದ್ದಾರೆ.

‘ನೇಮು– ಫೇಮು’ ಉಳಿಸಿಕೊಳ್ಳುವ ಸವಾಲು: ನಿರ್ಮಾಪಕ, ನಿರ್ದೇಶಕರ ಕಥೆ ಹೀಗಿದ್ದರೆ, ನಟ ನಟಿಯರದ್ದು ಮತ್ತೊಂದು ಕಥೆ. ಒಂದೆರಡು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚಿ ನಂತರ ಅವಕಾಶ ಇಲ್ಲದೆ ಮೂಲೆಗುಂಪಾದ ಕಲಾವಿದರು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ವಾಹಿನಿಯೊಂದರ ಟಿವಿ ರಿಯಾಲಿಟಿ ಶೋನಿಂದಾಗಿ ಖ್ಯಾತಿ ಗಳಿಸಿದ್ದ ರಾಜೇಶ್ ಎಂಬ ಆದಿವಾಸಿ ಸಮುದಾಯದ ಮುಗ್ಧ ಯುವಕ ಕಿರುತೆರೆಯಿಂದ ಗಳಿಸಿದ ಜನಪ್ರಿಯತೆಯನ್ನು ಉಳಿಸಿಕೊಳ್ಳಲಾಗದೆ, ಚಿತ್ರವೊಂದರಲ್ಲಿ ನಟಿಸಿಯೂ ಚಿತ್ರರಂಗದಲ್ಲಿ ಬೆಳೆಯಲು ಸಾಧ್ಯವಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಾದ ಘಟನೆ ನೆನಪಿರಬಹುದು.

ತಳಕು ಬಳಕಿನ ಸಿನಿಮಾ ಲೋಕದಲ್ಲಿ ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಕಷ್ಟಪಟ್ಟು ಧಾರಾವಾಹಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಯುವಕ ಯುವತಿಯರು, ಮುಂದೆ ಹೆಚ್ಚಿನ ಅವಕಾಶ ಸಿಕ್ಕದೇ ಇದ್ದಾಗ ಅಥವಾ ಯಶಸ್ಸು ಗಳಿಸದೇ ಇದ್ದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಒಂದೆರಡು ಸಿನಿಮಾ ಗೆದ್ದ ತಕ್ಷಣ ನಟ ನಟಿಯರಿಗೆ ಹೆಸರೂ ಬರುತ್ತದೆ. ಸಿನಿಪ್ರಿಯರ ನಡುವೆ ಜನಪ್ರಿಯವೂ ಆಗುತ್ತಾರೆ. ಈ ‘ನೇಮು –ಫೇಮು’ ಅನ್ನು ಉಳಿಸಿಕೊಳ್ಳುವುದು ಕಲಾವಿದರ ಮುಂದಿರುವ ದೊಡ್ಡ ಸವಾಲು. ಸೆಲೆಬ್ರಿಟಿಯಾಗುತ್ತಿದ್ದಂತೆ ಅವರು ಹೊರ ಜಗತ್ತಿಗೆ ಆದರ್ಶ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ ಅವರ ಪ್ರತಿ ನಡೆಯನ್ನೂ ಜನರು, ಮಾಧ್ಯಮಗಳು, ಚಿತ್ರರಂಗದವರು ಅವರನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಇದು ಕಲಾವಿದರ ಮೇಲೆ ತೀವ್ರ ಒತ್ತಡವನ್ನು ಉಂಟು ಮಾಡುತ್ತದೆ. ಈ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವವರು ಬದುಕುಳಿಯುತ್ತಾರೆ. ಆಗದೇ ಇದ್ದವರು ಚಿತ್ರರಂಗದಿಂದ ದೂರ ಉಳಿಯುತ್ತಾರೆ ಇಲ್ಲವೇ ಖಿನ್ನತೆಗೆ ಜಾರಿ ಪ್ರಾಣತ್ಯಾಗದಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ.

ಒತ್ತಡ ನಿರ್ವಹಣೆಯ ಪ್ರಾಮುಖ್ಯ: ಒತ್ತಡ ಎಲ್ಲ ಕ್ಷೇತ್ರಗಳಲ್ಲೂ ಇದ್ದದ್ದೇ. ಚಿತ್ರರಂಗವೂ ಇದಕ್ಕೆ ಹೊರತಲ್ಲ. ಅದನ್ನು ನಿರ್ವಹಿಸುವುದನ್ನು ಸಿನಿಮಾ ಮಂದಿ ರೂಢಿಸಿಕೊಳ್ಳಬೇಕು. ಆಗ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಬಹುದು ಎಂಬುದು ಮನೋವೈದ್ಯರ ಅಭಿಪ್ರಾಯ.

‘ಚಿತ್ರರಂಗದ ಗಣ್ಯರು ಸಾರ್ವಜನಿಕ ಕಣ್ಗಾವಲಿನಲ್ಲಿ ಇರುವುದರಿಂದ, ಅವರ ಖಾಸಗಿ ಜೀವನಕ್ಕೆ ಸಮಯ ಅಷ್ಟಾಗಿ ಇರುವುದಿಲ್ಲ. ಇದು ಅವರನ್ನು ಒಂಟಿತನ, ನಿರಾಸೆ ಮತ್ತು ಖಿನ್ನತೆಗೆ ಒಳಪಡಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿನ ಹೋಲಿಕೆಗಳು ಮತ್ತು ಅಪನಿಂದೆಗಳಿಗೆ ಒಳಗಾಗುವುದು ಸಹ ಮಾನಸಿಕ ಅನಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆ, ಆತಂಕ, ಮಾದಕ ವ್ಯಸನ ಮತ್ತು ನಿದ್ರಾಹೀನತೆ ಇವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಾಗಿವೆ. ತಮ್ಮ ಖಾಸಗಿ ಜೀವನವನ್ನು ಕಳೆದುಕೊಳ್ಳುವ ಭಯ, ನಿರಂತರ ಒತ್ತಡ ಮತ್ತು ಅತಿಯಾದ ಕೆಲಸದ ಹೊರೆಗಳಿಂದಾಗಿ ಮಾನಸಿಕವಾಗಿ ಕುಸಿಯುತ್ತಾರೆ. ಈ ಸಮಸ್ಯೆಗಳು ತೀವ್ರಗೊಂಡಾಗ, ಆತ್ಮಹತ್ಯೆಯಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಅವರು ಜೀವನದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು’ ಎಂದು ಹೇಳುತ್ತಾರೆ ಬೆಂಗಳೂರಿನ ಕಡಬಮ್ಸ್ ಆಸ್ಪತ್ರೆಯ ಹಿರಿಯ ಮನೋವೈದ್ಯೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ನೇಹಾ ಕಡಬಂ.

‘ಎಲ್ಲ ವೃತ್ತಿಯವರಿಗೂ ಒತ್ತಡ ಇರುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಅದನ್ನು ತೋರಿಸಿಕೊಳ್ಳಲು ಹಿಂಜರಿಯುತ್ತಾರೆ. ಜ್ವರದಂತಹ ಕೆಲವು ಸಾಮಾನ್ಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ನಾವೇ ಆರೈಕೆ ಮಾಡಿಕೊಳ್ಳುತ್ತೇವೆ. ಪರಿಸ್ಥಿತಿ ಬಿಗಡಾಯಿಸಿದಾಗ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಅದೇ ರೀತಿ, ಒತ್ತಡ ಸೇರಿ ವಿವಿಧ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ, ಅದನ್ನು ತಮ್ಮಲ್ಲಿ ಅದುಮಿಟ್ಟುಕೊಳ್ಳದೆ ಇನ್ನೊಬ್ಬರ ನೆರವು ಪಡೆಯಬೇಕು’ ಎಂಬುದು ನಿಮ್ಹಾನ್ಸ್ನ ಸ್ಥಾನಿಕ ವೈದ್ಯಾಧಿಕಾರಿ ಡಾ.ಶಶಿಧರ್ ಎಚ್.ಎನ್. ಅವರ ಸಲಹೆ.

ಪೂರಕ ಮಾಹಿತಿ: ವಿನಾಯಕ ಕೆ.ಎಸ್.,
ವರುಣ್ ಹೆಗಡೆ, ಆದಿತ್ಯ ಕೆ.ಎ

ಸೃಜನಶೀಲತೆಯೂ, ಮಾನಸಿಕ ವ್ಯಾಧಿಯೂ...

ಸ್ವೀಡನ್ನಿನ ಕರೋಲಿಂಸ್ಕಾ ಇನ್ಸ್ಟಿಟ್ಯೂಟ್ನ ಅಧ್ಯಯನಕಾರರು 2012ರಲ್ಲಿ ನಡೆಸಿದ್ದ ಅಧ್ಯಯನವೊಂದು ಸೃಜನಶೀಲತೆ ಮತ್ತು ಮಾನಸಿಕ ಕಾಯಿಲೆಗೂ ಸಂಬಂಧ ಇರುವುದರ ಮೇಲೆ ಬೆಳಕು ಚೆಲ್ಲಿತ್ತು.

ಸಾಂಸ್ಕೃತಿಕ ಕ್ಷೇತ್ರ, ಸಿನಿಮಾ, ವಿಜ್ಞಾನ ಸೇರಿದಂತೆ ಸೃಜನಶೀಲತೆಗೆ ಹೆಚ್ಚು ಅವಕಾಶ ಇರುವ ವೃತ್ತಿಗಳಲ್ಲಿ ತೊಡಗಿಕೊಂಡಿರುವ ವರು ಜನಸಮಾನ್ಯರಿಗಿಂತ ಹೆಚ್ಚು ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಅದು ಹೇಳಿತ್ತು. ಕಲಾವಿದರು, ವಿಜ್ಞಾನಿಗಳು ಮಾನಸಿಕ ವ್ಯಾಧಿಗೆ ತುತ್ತಾಗುವುದು ಜಾಸ್ತಿ. ಖಿನ್ನತೆ, ಗಾಬರಿ, ಭ್ರಾಂತಿಗೆ ಒಳಗಾಗುವುದು, ಕುಡಿತ– ಡ್ರಗ್ಸ್ ಸೇವನೆ ಚಟಕ್ಕೆ ತುತ್ತಾಗುವ ಸಾಧ್ಯತೆಗಳ ಬಗ್ಗೆಯೂ ಅಧ್ಯಯನ ಗಮನ ಸೆಳೆದಿತ್ತು.

‘ಪರ್ಯಾಯ ಆದಾಯದ ದಾರಿ ಹುಡುಕಲೇಬೇಕು’

ನಿರ್ಮಾಪಕರು ಅನ್ನದಾತರು. ಅವರೇ ಸಂಕಷ್ಟದಲ್ಲಿದ್ದಾರೆ ಎಂದರೆ ಉಳಿದವರೆಲ್ಲರೂ ಕಷ್ಟದಲ್ಲಿ ಇರುತ್ತಾರೆ. ಈಗ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಮೊದಲಿನಷ್ಟು ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಪರ್ಯಾಯ ಆದಾಯದ ಮೂಲ ಹುಡುಕಿಕೊಳ್ಳುವುದು ಅನಿವಾರ್ಯ. ನಾನು ವೈಯಕ್ತಿಕವಾಗಿ ಕಲೆಯಿಂದಲೇ ಜೀವನ ನಡೆಸಬಲ್ಲೆ ಎಂಬಷ್ಟು ಆರ್ಥಿಕವಾಗಿ ಸದೃಢನಾಗುವವರೆಗೂ ಕೆಲಸ ಬಿಟ್ಟಿರಲಿಲ್ಲ. ಜನಪ್ರಿಯ ಕಲಾವಿದರೊಬ್ಬರು ಅವಕಾಶ ಕಡಿಮೆಯಾದಾಗ ರಾತ್ರಿ ಕ್ಯಾಂಟೀನ್ ನಡೆಸುತ್ತಿದ್ದರು. ಇವತ್ತು 12 ಶಾಖೆಗಳನ್ನು ಮಾಡಿದ್ದಾರೆ. ಬದುಕಲು ಸಾವಿರಾರು ದಾರಿಗಳಿವೆ. ಕಲೆ ಬಿಟ್ಟು ಬೇರೇನು ಗೊತ್ತಿಲ್ಲ ಎಂಬ ಮನೋಭಾವವಿದ್ದರೆ ಉಸಿರುಗಟ್ಟುತ್ತದೆ. ಗುಣಮಟ್ಟದ ಚಿತ್ರಗಳು ಬರುವುದೇ ಇದಕ್ಕೆ ಪರಿಹಾರ. ಒಂದು ಐಯ್ಯರ್ ಹೋಟೆಲ್ನಲ್ಲಿ ದಿನಕ್ಕೆ 50,000 ಇಡ್ಲಿ ಮಾರಾಟವಾಗುತ್ತದೆ ಎಂಬ ವಿಡಿಯೊವನ್ನು ಇತ್ತೀಚೆಗೆ ನೋಡಿ ನಾನು ತಿನ್ನಲು ಹೋದೆ. ದೊಡ್ಡ ಸರತಿ ಸಾಲು ಇತ್ತು. ಅದ್ಭುತ ರುಚಿ. ಆರು ಇಡ್ಲಿ ತಿಂದು ಬಂದೆ. ಗುಣಮಟ್ಟವಿದ್ದರೆ ಜನ ಹುಡುಕಿಕೊಂಡು ಬರುತ್ತಾರೆ. ರಾಜ್ಕುಮಾರ್, ಪುಟ್ಟಣ್ಣ, ಸಿದ್ಧಲಿಂಗಯ್ಯನವರ ಕಾಲದ ಚಿತ್ರಗಳು ಮತ್ತೆ ಬರಬೇಕು

ದೊಡ್ಡಣ್ಣ, ನಟ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಖಜಾಂಚಿ

‘ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಬೇಕು’

ತಾರೆಯರು ಹೊರಗಿನಿಂದ ನೋಡಲು ಆದರ್ಶ ವ್ಯಕ್ತಿಗಳಂತೆ ಕಾಣಬಹುದಾದರೂ, ಅವರ ಜೀವನದ ಒತ್ತಡಗಳು ತೀವ್ರವಾಗಿರುತ್ತವೆ. ಅದು ಸಾರ್ವಜನಿಕವಾಗಿ ಗೋಚರಿಸುವುದಿಲ್ಲ. ಅವರ ಜೀವನ ಶೈಲಿಯ ಹಿಂದೆ ತೀವ್ರವಾದ ಒತ್ತಡ ಇರುತ್ತದೆ. ತಾವು ಸಾಧಿಸಿರುವ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಇದು ಒತ್ತಡ ಇನ್ನಷ್ಟು ಹೆಚ್ಚಲು ಕಾರಣ. ಸೆಲೆಬ್ರಿಟಿಗಳು ತಮ್ಮ ಮಾನಸಿಕ ಆರೋಗ್ಯವನ್ನು ನಿರ್ವಹಿಸಲು ಯೋಗ, ಧ್ಯಾನ, ವ್ಯಾಯಾಮ ಮತ್ತು ಆರೋಗ್ಯಕರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಒತ್ತಡಕ್ಕೆ ಒಳಗಾದಾಗ ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯುವುದು ಬಹಳ ಮುಖ್ಯ. ಇದರೊಂದಿಗೆ ತಾವು ವ್ಯಕ್ತಿಯಾಗಿ ಸಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಕುಟುಂಬ ಹಾಗೂ ಸ್ನೇಹಿತರ ಬೆಂಬಲವನ್ನು ಪಡೆಯುವುದರ ಜತೆಗೆ, ಉದ್ಯಮದ ಒತ್ತಡದಿಂದ ಹೊರಬರಲು ಪ್ರತ್ಯೇಕ ಸಮಯವನ್ನು ಮೀಸಲಿಡಬೇಕು.

ಡಾ.ನೇಹಾ ಕಡಬಂ,ಕಡಬಮ್ಸ್ ಆಸ್ಪತ್ರೆಯ ಹಿರಿಯ ಮನೋವೈದ್ಯೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ

‘ವೃತ್ತಿ, ಖಾಸಗಿ ಜೀವನ ಪ್ರತ್ಯೇಕಿಸಿಕೊಳ್ಳಲಿ’

ಖಿನ್ನತೆ ಸೇರಿ ವಿವಿಧ ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಾಗ ಅದನ್ನು ಬಹಿರಂಗಪಡಿಸಲು ಹಿಂಜರಿಯಬಾರದು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಾವು ಎದುರಿಸಿದ ಮಾನಸಿಕ ಸಮಸ್ಯೆಯನ್ನು ಬಹಿರಂಗವಾಗಿ ಘೋಷಿಸಿ, ಚಿಕಿತ್ಸೆ ಪಡೆದುಕೊಂಡರು. ಅವರ ನಡೆ ಶ್ಲಾಘನೀಯ. ಕೆಲವರು ವೃತ್ತಿ ಜೀವನದಲ್ಲಿ ಅತ್ಯುನ್ನತ ಘಟ್ಟದಲ್ಲಿ ಇದ್ದರೆ, ಖಾಸಗಿ ಜೀವನ ದಿನದಿಂದ ದಿನಕ್ಕೆ ಹದಗೆಡುತ್ತಾ ಇರುತ್ತದೆ. ಎರಡನ್ನೂ ಸಮಾನವಾಗಿ ನಿರ್ವಹಣೆ ಮಾಡುವುದು ಮುಖ್ಯ. ಇತ್ತೀಚೆಗೆ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು, ವಿಚ್ಛೇದನ ಹೆಚ್ಚುತ್ತಿದೆ. ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಾಗ ಮುಕ್ತವಾಗಿ ಆಪ್ತರೊಂದಿಗೆ ಹಂಚಿಕೊಳ್ಳಬೇಕು. ವ್ಯಾವಹಾರಿಕ ಜೀವನದಲ್ಲಿ ಕಷ್ಟಗಳು ಕಾಣಿಸಿಕೊಂಡಾಗಲೂ ಅದನ್ನು ಹಂಚಿಕೊಳ್ಳುವುದರಲ್ಲಿ ತಪ್ಪಿಲ್ಲ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಉಪಾಯಗಳನ್ನು ಸ್ನೇಹಿತರು ಸೂಚಿಸಬಹುದು. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಂಬಂಧಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು. ಮದ್ಯ, ಮಾದಕ ದ್ರವ್ಯ ಸೇವನೆಯಂತಹ ವ್ಯಸನಗಳು ಜೀವನದ ದಾರಿಯನ್ನು ತಪ್ಪಿಸುತ್ತವೆ. ಯೋಗ, ವ್ಯಾಯಾಮದಂತಹ ಸಕಾರಾತ್ಮಕ ಹವ್ಯಾಸಗಳು ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡುತ್ತವೆ.

ಡಾ.ಶಶಿಧರ್ ಎಚ್.ಎನ್., ನಿಮ್ಹಾನ್ಸ್ನ ಸ್ಥಾನಿಕ ವೈದ್ಯಾಧಿಕಾರಿ

‘ಬಡ್ಡಿ ಸಾಲದಲ್ಲಿ ಸಿಲುಕಿದರೆ ಮುಗಿಯಿತು’

ನಿರ್ಮಾಣ ಗೊತ್ತಿಲ್ಲದೆ ಚಿತ್ರರಂಗಕ್ಕೆ ಬರುತ್ತಾರೆ. ಎಲ್ಲಿಂದಲೋ ದುಡ್ಡು ತಂದು ಹಾಕುತ್ತಾರೆ. ಒಂದು ಸಲ ಬಡ್ಡಿ ಸಾಲದಲ್ಲಿ ಸಿಲುಕಿಕೊಂಡರೆ ಕಥೆ ಮುಗಿಯಿತು. ಮೊದಲಿನಂತೆ ನೆಗೆಟೀವ್ ಮೇಲೆ ಈಗ ಸಾಲ ಕೊಡುವುದಿಲ್ಲ. ಜೊತೆಗೆ ಆಸ್ತಿ, ಮನೆಗಳನ್ನು ಬರೆಸಿಕೊಂಡಿರುತ್ತಾರೆ. ಬಡ್ಡಿ ಕಟ್ಟಲಾಗದೆ ಪರದಾಡಿ ಕೆಲವೊಮ್ಮೆ ಆತ್ಮಹತ್ಯೆ ಹಂತ ತಲುಪಿಬಿಡುತ್ತಾರೆ. ಗಾಂಧಿನಗರದಲ್ಲಿ ಈಗ ಮೊದಲಿನಂತೆ ಸಿನಿಮಾಗೆ ಸಾಲ ಕೊಡುವವರು ಕಡಿಮೆಯಾಗಿದ್ದಾರೆ. ಆರ್.ಎಸ್.ಗೌಡರು, ನಿರಂಜನ್, ಮೈಸೂರು ರಮೇಶ್, ಕೆವಿಎನ್ ಸಂಸ್ಥೆ ಈಗಲೂ ಸಿನಿಮಾಗಳಿಗೆ ಫೀಡಿಂಗ್ ಮಾಡುತ್ತಿವೆ. ಆದರೆ ಸಿನಿಮಾದ ಜೊತೆಗೆ ಸಂಬಂಧಿತ ದಾಖಲೆಗಳೊಂದಿಗೆ ಅಡಮಾನ ಸಾಲದಂತೆ ನೀಡುತ್ತಾರೆ

ಬಾ.ಮ.ಗಿರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ

ಕೌಟುಂಬಿಕ ಸಮಸ್ಯೆಯೇ ಮುಖ್ಯ ಕಾರಣ

ಕರ್ನಾಟಕ ಸೇರಿದಂತೆ ದೇಶದಾದ್ಯಂತ ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ್ದ ಅಂಕಿ ಅಂಶಗಳ ಪ್ರಕಾರ, 2022ರಲ್ಲಿ ದೇಶದಲ್ಲಿ 1,70,924 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ ಈ 1,64,033 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಕರ್ನಾಟಕದಲ್ಲಿ ಈ ಸಂಖ್ಯೆ ಕ್ರಮವಾಗಿ 13,606 ಮತ್ತು 13,056 ರಷ್ಟಿತ್ತು. ಜನರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ 13ಕ್ಕೂ ಹೆಚ್ಚು ಕಾರಣಗಳನ್ನು ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ (ಮಾನಸಿಕ ಸಮಸ್ಯೆ ಸೇರಿ), ಮಾದಕ ದ್ರವ್ಯ, ಕುಡಿತದ ಚಟ, ದಾಂಪತ್ಯ ಕಲಹ, ಪ್ರೇಮ ವೈಫಲ್ಯ, ಆರ್ಥಿಕ ನಷ್ಟ/ಸಾಲ ಪ್ರಮುಖವಾದುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.