ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ಅಫ್ಗನ್ ಕ್ರಿಕೆಟ್ ತಂಡಕ್ಕೆ ನಾಯಕ ನಬಿ ಪ್ರಾಯೋಜಕತ್ವ?

Last Updated 7 ನವೆಂಬರ್ 2021, 18:52 IST
ಅಕ್ಷರ ಗಾತ್ರ

‘ಅಫ್ಗಾನಿಸ್ತಾನವನ್ನು ಇತ್ತೀಚೆಗೆ ವಶಕ್ಕೆ ಪಡೆದಿರುವ ತಾಲಿಬಾನ್ ನೇತೃತ್ವದ ಸರ್ಕಾರವು, ವಿಶ್ವಕಪ್‌ನಲ್ಲಿ ಅಫ್ಗನ್ ಕ್ರಿಕೆಟ್ ತಂಡ ಪ್ರತಿನಿಧಿಸಲು ತಗಲುವ ವೆಚ್ಚವನ್ನು ನೀಡಲು ಹಿಂದೇಟು ಹಾಕಿದೆ. ಹೀಗಾಗಿ ಅಫ್ಗನ್ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ನಬಿ ಅವರು ಇಡೀ ತಂಡದ ವೆಚ್ಚವನ್ನು ಏಕಾಂಗಿಯಾಗಿ ಭರಿಸಿದ್ದಾರೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇದೆ. ಅಂತರ್ಜಾಲ ಬಳಕೆದಾರರು ನಬಿ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ.

ದೇಶೀಯ ಮತ್ತು ವಿದೇಶಿ ವ್ಯಾಪಾರದಲ್ಲಿ ಪ್ರಸಿದ್ಧವಾಗಿರುವ ಸೇಡಿಕಿ ಸಮೂಹವು ಅಫ್ಗನ್‌ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಅಫ್ಗನ್ ಕ್ರಿಕೆಟ್ ಸಂಸ್ಥೆಯು ಅಕ್ಟೋಬರ್ 14ರಂದು ಟ್ವಿಟರ್ ಖಾತೆಯಲ್ಲಿ ಈ ವಿಷಯ ಖಚಿತಪಡಿಸಿದೆ. ನಬಿ ಅವರು ತಮ್ಮ ಸ್ವಂತ ಹಣದಿಂದ ತಂಡವನ್ನು ವಿಶ್ವಕಪ್‌ಗೆ ಕರೆದೊಯ್ದಿದ್ದಾರೆ ಎಂಬ ವರದಿಗಳನ್ನು ಪುಷ್ಟೀಕರಿಸುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಅವರು ತಂಡದ ಗೆಲುವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ತಂಡವನ್ನು ಹುರಿದುಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT