ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತದ ಪ್ರಧಾನಿನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನುಟಿ.ವಿಯಲ್ಲಿ ವೀಕ್ಷಿಸುತ್ತಿರುವ ಚಿತ್ರವೊಂದು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡಿದೆ.

ಮೋದಿಯ ತಾಕತ್ತು ಇದು. ಅಮೆರಿಕದಲ್ಲಿ ಒಬಾಮ, ಮೋದಿಯವರ ಪ್ರಮಾಣ ವಚನ ವೀಕ್ಷಿಸುತ್ತಿದ್ದಾರೆ ಎಂದು ಈ ಚಿತ್ರದ ಜತೆ ಒಕ್ಕಣೆ ಬರೆಯಲಾಗಿದೆ.

ಅಂದಹಾಗೆ ಮೋದಿ ಪ್ರಮಾಣ ವಚನ ಸಮಾರಂಭವನ್ನು ಒಬಾಮ ವೀಕ್ಷಿಸಿದರೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಫೋಟೊ ಫೇಕ್ ಎಂದು ಎಎಫ್‌ಪಿ ಫ್ಯಾಕ್ಟ್‌ಚೆಕ್ ಮಾಡಿ ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್
ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಿಜವಾದ ಫೋಟೊ ಸಿಕ್ಕಿದೆ.ಈ ಫೋಟೊವನ್ನು ವೈಟ್‌ಹೌಸ್‌ನಲ್ಲಿ ವರದಿ ಮಾಡುತ್ತಿರುವ ಸಿಎನ್‌ಎನ್‌ನ ಮುಖ್ಯ ವರದಿಗಾರ ಜಿಮ ಅಕೋಸ್ಟಾ ಜೂನ್ 26, 2014ರಂದು ಟ್ವೀಟ್ ಮಾಡಿದ್ದರು. ಈ ಫೋಟೊ ಕ್ಲಿಕ್ಕಿಸಿದ್ದು ಅಮೆರಿಕದ ಛಾಯಾಗ್ರಾಹಕಡೌ ಮಿಲ್ಸ್.

ಮಿನಿಯಪೊಲಿಸ್‌ಗೆ ಪ್ರಯಾಣಿಸುತ್ತಿದ್ದಾಗ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಏರ್ ಫೋರ್ಸ್ ಒನ್‌ನಲ್ಲಿ ಯುಎಸ್ಎ ಮತ್ತು ಜರ್ಮನಿ ನಡುವಿನ ವಿಶ್ವಕಪ್ ಪಂದ್ಯ ವೀಕ್ಷಿಸುತ್ತಿರುವುದು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

2014ರ ಫಿಫಾ ವಿಶ್ವಕಪ್‌ನಲ್ಲಿ ಜೂನ್ 26ರಂದು ಅಮೆರಿಕ - ಜರ್ಮನಿ ಪಂದ್ಯ ನಡೆದಿತ್ತು.ಒಬಾಮ ವಿಶ್ವಕಪ್ ವೀಕ್ಷಿಸುತ್ತಿರುವುದನ್ನು ಎಎಫ್‌ಪಿ ವರದಿಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.