ಸೋಮವಾರ, ಜೂಲೈ 13, 2020
22 °C

ಕೊರೊನಾ ಒಂದು ವೈರಸ್: ಪಿಐಬಿ ಫ್ಯಾಕ್ಟ್ ಚೆಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿರುವ ಕೋವಿಡ್–19 ಒಂದು ಬ್ಯಾಕ್ಟೀರಿಯಾ. 100 ಎಂಜಿ ಆ್ಯಸ್ಪಿರಿನ್ ಅಥವಾ ಅಪ್ರೊನಾಕ್ಸ್ ಮೂಲಕ ಬ್ಯಾಕ್ಟೀರಿಯಾವನ್ನು ಗುಣಪಡಿಸಬಹುದು. ಇಟಲಿಯಲ್ಲಿ ಜನರು ಇದನ್ನೇ ಬಳಸಿ ಉತ್ತಮ ಫಲಿತಾಂಶ ಕಂಡಿದ್ದಾರೆ – ಈ ರೀತಿಯ ಸರಣಿ ಮಾಹಿತಿ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‌

ಈ ವಿಡಿಯೊನ್ನು ಪರಾಮರ್ಶೆ ನಡೆಸಿರುವ ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆಯು ಮಾಹಿತಿಯನ್ನು ತಳ್ಳಿಹಾಕಿದೆ. ‘ವಿಡಿಯೊದಲ್ಲಿ ನೀಡಲಾಗಿರುವು ಮಾಹಿತಿಯು ತಪ್ಪು. ಕೊರೊನಾ ಒಂದು ವೈರಸ್. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದಕ್ಕೆ ಈವೆರೆಗೆ ಲಸಿಕೆ ಲಭ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇಂತಹ ವಿಡಿಯೊಗಳಿಗೆ ಮಹತ್ವ ನೀಡಬಾರದು ಎಂದು ಸೂಚನೆ ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು