ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆಗಸ್ಟ್ 15ಕ್ಕೆ ಮಾರುಕಟ್ಟೆಯಲ್ಲಿ ಕೋವಿಡ್ ಲಸಿಕೆ'- ಇದು ಸುಳ್ಳು ಸುದ್ದಿ

Last Updated 2 ಆಗಸ್ಟ್ 2020, 17:53 IST
ಅಕ್ಷರ ಗಾತ್ರ

‘ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆ ಆಗಸ್ಟ್ 15ಕ್ಕೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರವು ಲಸಿಕೆ ಬಳಕೆಗೆ ಅಧಿಕೃತ ಅನುಮತಿ ನೀಡಿದೆ. ಆಗಸ್ಟ್ 15ರಿಂದ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದ್ದು, ಇದೊಂದು ಅದ್ಭುತ ಸುದ್ದಿ’ ಎಂಬ ಅರ್ಥವುಳ್ಳ ವಾಟ್ಸ್‌ಆ್ಯಪ್‌ ಸಂದೇಶ ಹಾಗೂ ಟ್ವಿಟರ್‌ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಲಸಿಕೆ ಅಭಿವೃದ್ಧಿ ತ್ವರಿತಗೊಳಿಸುವಂತೆ ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೂಚನೆ ನೀಡಿರುವುದು ನಿಜ. ಕೋವ್ಯಾಕ್ಸಿನ್‌ ಆ.15ರೊಳಗೆ ಸಿದ್ಧವಾಗಲಿದೆ ಎಂದಿದ್ದ ಪರಿಷತ್, ಬಳಿಕ ಸ್ಪಷ್ಟನೆಯನ್ನೂ ನೀಡಿತ್ತು. ಲಸಿಕೆ ಅಭಿವೃದ್ಧಿಗೆ ಯಾವುದೇ ಗಡುವು ನೀಡಿಲ್ಲ. ನಿಯಮದ ಪ್ರಕಾರವೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬೇಕು ಎಂದು ತಿಳಿಸಿತ್ತು. ಈ ಪತ್ರವನ್ನೇ ಕೇಂದ್ರ ಸರ್ಕಾರ ನೀಡಿರುವ ಅನುಮೋದನೆ ನೀಡಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್ ಚೆಕ್ ವೇದಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT