ಭಾನುವಾರ, ಮಾರ್ಚ್ 7, 2021
32 °C

fact check: ಅರ್ಬಾಜ್ ಖಾನ್ ಮೇಲೆ ಹಿಂದೂಗಳು ಹಲ್ಲೆ ನಡೆಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾರಣಕ್ಕೆ, ಎನ್‌ಸಿಪಿ ನಾಯಕ ಅರ್ಬಾಜ್ ಖಾನ್ ಅವರ ಮೇಲೆ ಹಿಂದೂಗಳು ನಾಗಪುರದಲ್ಲಿ ಹಲ್ಲೆ ನಡೆಸಿದ್ದಾರೆ. ಹಿಂದೂಗಳ ತಂಟೆಗೆ ಬಂದರೆ ಎಲ್ಲರಿಗೂ ಇದೇ ಗತಿಯಾಗುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದೇಶದ ಜತೆಗೆ ಹಲವು ಜನರ ಮಧ್ಯೆ ಹೊಡೆದಾಟ ನಡೆಯುತ್ತಿರುವ ವಿಡಿಯೊ ಸಹ ವೈರಲ್ ಆಗಿದೆ. ಮಹಾರಾಷ್ಟ್ರ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೊ ಮತ್ತು ವಿಡಿಯೊ ಜತೆ ಹಂಚಿಕೊಳ್ಳುತ್ತಿರುವ ಸಂದೇಶಕ್ಕೆ ಸಂಬಂಧವಿಲ್ಲ. ಹರಿಯಾಣದ ಸೊಹ್ನಾ ಬಳಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಗಲಾಟೆಯನ್ನು ಸುಳ್ಳು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮಾರಾಟ ಮಾಡಲಾಗಿದ್ದ ಜಮೀನೊಂದರನ್ನು ಹಸ್ತಾಂತರ ಮಾಡುವಾಗ ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಘಟನೆಗೂ, ಅರ್ಬಾಜ್ ಖಾನ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಆಲ್ಟ್‌ ನ್ಯೂಸ್ ಪ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು