ಬುಧವಾರ, ಜುಲೈ 6, 2022
22 °C

ಫ್ಯಾಕ್ಟ್ ಚೆಕ್: ತೆರವು ಕಾರ್ಯಾಚರಣೆಯ ವಿಮಾನ ಹತ್ತಿದ್ದು ಪುಟಿನ್ ಅವರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಕ್ರೇನ್‌ನಿಂದ ಜನರನ್ನು ತೆರವು ಮಾಡುತ್ತಿರುವ ವಿಮಾನವೊಂದರ ಒಳಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ತಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ಯುದ್ಧಪೀಡಿತ ದೇಶದಿಂದ ಭಾರತಕ್ಕೆ ವಾಪಸಾಗಲು ವಿಮಾನ ಹತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಪುಟಿನ್‌ ಅವರು ಖುದ್ದಾಗಿ ಭೇಟಿ ಮಾಡಿದ್ದಾರೆ ಎಂದು ಈ ವಿಡಿಯೊಗೆ ವಿವರಣೆ ನೀಡಲಾಗಿದೆ. ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟಿನ್‌ ಅವರು ನೀಡುತ್ತಿರುವ ಗೌರವ ಇದು ಎಂದು ಈ ವಿಡಿಯೊ ಹಂಚಿಕೊಂಡಿರುವವರು ವಿಶ್ಲೇಷಿಸಿದ್ದಾರೆ. 

ಈ ವಿಡಿಯೊದಲ್ಲಿ ಇರುವ ವ್ಯಕ್ತಿ ಪುಟಿನ್‌ ಅಲ್ಲ. ಅವರು ರೊಮೇನಿಯಾದ ಭಾರತ ರಾಯಭಾರಿ ರಾಹುಲ್‌ ಶ್ರೀವಾತ್ಸವ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ. ಫೆಬ್ರುವರಿ 26ರಂದು ಎಎನ್‌ಐ ಸುದ್ದಿಸಂಸ್ಥೆ ಈ ವಿಡಿಯೊವನ್ನು ಟ್ವೀಟ್‌ ಮಾಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಅವರು ಶ್ರೀವಾತ್ಸವ ಅವರು ಹೇಳಿರುವುದು ವಿಡಿಯೊದಲ್ಲಿ ಉಲ್ಲೇಖವಾಗಿದೆ. ಉಕ್ರೇನ್‌ನಿಂದ ಸ್ಥಳಾಂತರ ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕುರಿತೂ ಅವರು ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು