ಮಂಗಳವಾರ, ಜನವರಿ 25, 2022
25 °C

ಫ್ಯಾಕ್ಟ್‌ಚೆಕ್‌: ಸ್ಕೂಟರ್ ಸ್ಫೋಟಕ್ಕೆ ಬ್ಯಾಟರಿ ಕಾರಣವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡು ಹಾಗೂ ಪುದುಚೇರಿ ಗಡಿಯಲ್ಲಿ ಇತ್ತೀಚೆಗೆ ಸ್ಕೂಟರ್‌ವೊಂದು ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ತಂದೆ ಮಗ ಮೃತಪಟ್ಟಿದ್ದರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್‌, ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ದೃಶ್ಯ ಇದರಲ್ಲಿದೆ. ‘ಇದು ಬ್ಯಾಟರಿಚಾಲಿತ ಬೈಕ್ ಆಗಿರುವ ಕಾರಣ ಸ್ಫೋಟ ನಡೆದಿದೆ’ ಎಂದು ಹಲವು ಫೇಸ್‌ಬುಕ್ ಬಳಕೆದಾರರು ಉಲ್ಲೇಖಿಸಿದ್ದಾರೆ. 

ಬ್ಯಾಟರಿಚಾಲಿತ ಬೈಕ್‌ ಆಗಿದ್ದಕ್ಕೆ ಸ್ಫೋಟ ನಡೆದಿದೆ ಎಂಬುದನ್ನು ಲಾಜಿಕಲ್ ಫ್ಯಾಕ್ಟ್‌ಚೆಕ್ ತಂಡ ಅಲ್ಲಗಳೆದಿದೆ. ‘ಸ್ಕೂಟರ್‌ನಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿಸಿದ್ದ ಪಟಾಕಿಯನ್ನು ಸಾಗಿಸಲಾಗುತ್ತಿತ್ತು. ಪಟಾಕಿಯನ್ನು ಲಗೇಜ್ ಇರಿಸುವ ಜಾಗದಲ್ಲಿಟ್ಟು, ಅದರ ಮೇಲೆ ಮಗುವನ್ನು ಕೂರಿಸಲಾಗಿತ್ತು. ತೀವ್ರ ಒತ್ತಡ ಉಂಟಾಗಿ, ಪಟಾಕಿ ಸ್ಫೋಟಗೊಂಡಿದೆ’ ಎಂದು ತನಿಖಾಧಿಕಾರಿ ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು